

ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ನಂಟಿನ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ನಂಟಿನ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಗುಂಪುಗಾರಿಕೆಯಿಂದ ಕನ್ನಡ ಸಿನಿಮಾ ರಂಗ ಹಾಳಾಗುತ್ತಿದೆ. ನನಗೂ ಮಂಡಳಿಗೂ ಯಾವುದೇ ಸಂಬಂಧವಿಲ್ಲ, ಏಕೆಂದರೆ ನಾನು ವಾಣಿಜ್ಯ ಮಂಡಳಿ ಸದಸ್ಯನಲ್ಲ ಎಂದು ಹೇಳಿದ್ದಾರೆ. ವಾಣಿಜ್ಯ ಮಂಡಳಿ ಹೆಸರಲ್ಲಿ ಕನ್ನಡ ಸಿನಿಮಾ ರಂಗವನ್ನು ರೂಲ್ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ.
ನಟಿ ರಾಗಿಣಿ ಡ್ರಗ್ಸ್ ನಂಟಿನ ಬಗ್ಗೆ ಮಾತನಾಡಿದ ಸಂಬರಗಿ ರಾಗಿಣಿ ಘಮಘಮ ಅನ್ನುತ್ತಿದ್ದಾಳಾ ಆಕೆ ಗಬ್ಬು ನಾರುತ್ತಿದ್ದಾಳಾ, ಆಕೆ ಒಬ್ಬ ಆರ್ ಟಿಓ ಪೊಲೀಸ್ ಅಧಿಕಾರಿ ಜೊತೆ ಯುಬಿ ಸಿಟಿಯಲ್ಲಿ ಓಡಾಡುತ್ತಿದ್ದಳು, ಮದುವೆಯಾಗುವುದಾಗಿಯೂ ಹೇಳಿದ್ದಳು, ಆದರೆ ಇಂಥ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ ಎಂದು ನಮಗೆ ತಿಳಿದಿರಲಿಲ್ಲ, ಆಕೆಗೆ ನೋಟಿಸ್ ನೀಡಿರುವುದನ್ನು ನಾನು ಟಿವಿಯಲ್ಲಿ ನೋಡಿದೆ ಎಂದು ಹೇಳಿದರು.


ಇನ್ನು ನಟಿ ಸಂಜನಾ ಗಲ್ರಾನಿ ಬಗ್ಗೆ ಮಾತನಾಡಿದ ಸಂಬರಗಿ ಯಾರೋಬ್ಬರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ, ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು, ಆಕೆ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬಿಸಿಬಿಸಿ ಎಂಬ ಸಿನಿಮಾದಲ್ಲಿ ಸಂಜನಾ ಅವರಿಗೆ ಪಾತ್ರ ಕೊಡಲು ಹೋಗಿದ್ದೆವು, ಸಿಂಧ್ ಸ್ಕೂಲಿಗೆ ಹೋಗಿ ಆಕೆಯನ್ನು ನೋಡಿದ್ದೆವು, ಆದರೆ ಮೈನರ್ ಎಂಬ ಕಾರಣಕ್ಕೆ ಆಕೆ ಆ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ, ಆಕೆ ಲೆವೆಲ್ ಏನು ಎಂಬುದು ಸಿನಿಮಾ ರಂಗಕ್ಕೆ ಗೊತ್ತಿದೆ ಎಂದು ತಿಳಿಸಿದ್ದಾರೆ.
ನಾನು ಕೆಲವು ಸಿನಿಮಾ ವಿತರಣೆ ಮಾಡಿದ್ದೇನೆ, ನನ್ನ ಕೊಡುಗೆ ಏನು ಎಂದು ಪ್ರಶ್ನಿಸುವವರು ವೆಬ್ ಸೈಟ್ ನಲ್ಲಿ ನನ್ನ ಬಗ್ಗೆ ತಿಳಿದು ಕೊಳ್ಳಲಿ, ಕಾಂಗ್ರೆಸ್ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಇಮ್ತಿಯಾಜ್ ಖಾತ್ರಿ ಭಾಗವಹಿಸಿದ್ದ, ಈ ಇಮ್ತಿಯಾಜ್ ಖಾತ್ರಿ ಯಾರು ಎಂಬ ಬಗ್ಗೆ ಸರ್ಕಾರ ವಿವರಣೆ ಪಡೆಯಲಿ , ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






