ಅಡಿಕೆ ಬೆಳೆಗಾರರಿಗೇಕೆ ಸಂಘದ ಕುಷ್ಠ?

KP Suresha ಬರೆಯುತ್ತಾರೆ:ತಮ್ಮದೇ ಮಾದರಿ ಮರೆತ ದ.ಕ. ಮಂದಿ-

ದಕ್ಷಿಣ ಕನ್ನಡದಲ್ಲಿ ಈ ಬಂದ್ ಅಷ್ಟೇನೂ ಯಶಸ್ಸು ಕಾಣಲಿಲ್ಲ ಎನ್ನುವ ವರದಿಗಳಿವೆ. ಅಷ್ಟೇಕೆ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆ ಪ್ರತಿರೋಧ ಗೇಲಿ, ತಾತ್ಸಾರಗಳ ಪೋಸ್ಟುಗಳನ್ನು ಭಾ.ಜ.ಪ ಗುಲಾಮ ಮಂಡಳಿ ಸಾಕಷ್ಟು ಹಂಚಲು ನೋಡಿದೆ. ಅದನ್ನು ಈ ಜಿಲ್ಲೆಯ ಅಡಿಕೆ ಬೆಳೆಗಾರರು, ಇತರರು ಯಥೇಚ್ಛ ಹಂಚಿಕೊಂಡಿದ್ದಾರೆ. ಆದರೆ ಈ ಬೆಳೆಗಾರರು ತಮ್ಮದೇ ಚರಿತ್ರೆಯನ್ನೊಮ್ಮೆ ನೋಡಿದರೆ ಎಂಥಾ ಅವಜ್ಞೆ ತೋರಿದ್ದೇವೆ ಎನ್ನುವುದು ಗೊತ್ತಾದೀತು.

ಚರಿತ್ರೆಯ ನೆನಪನ್ನೂ ಅಳಿಸಿ ಹಾಕುವಷ್ಟು ಈ ಪಕ್ಷ ನಿಷ್ಠೆ ಹಲವಾರು ಮಂದಿಯಲ್ಲಿದೆ. ಸಂದ ಕಾಲದ ಎರಡು ಸಂಗತಿಗಳನ್ನು ಪ್ರಸ್ತಾಪಿಸಬಯಸುವೆ. ಎರಡೂ ಕ್ಯಾಂಪ್ಕೋ ಎಂಬ ಸಹಕಾರಿಗೆ ಸಂಬಂಧಿಸಿದ್ದು.

1. ಅಡಿಕೆ ಮಾರುಕಟ್ಟೆ ಸಂಪೂರ್ಣ ಖಾಸಗಿ ಹಿಡಿತದಲ್ಲಿದ್ದು( ಅದರಲ್ಲೂ ಗುಜರಾತ್/ ಮುಂಬೈ ವರ್ತಕರ ಹಿಡಿತದಲ್ಲಿದ್ದು) 70ರ ದಶಕದಲ್ಲಿ ಅಡಿಕೆ ಬೆಳೆಗಾರರು ಅತಂತ್ರರಾಗಿದ್ದಾಗ ಕ್ಯಾಂಪ್ಕೋ ಅಸ್ತಿತ್ವಕ್ಕೆ ಬಂತು.ಗುಜರಾತ್ ಭೂಕಂಪದ ನೆಪದಲ್ಲಿ ಅಡಿಕೆ ಬೆಲೆ ನೆಲ ಕಚ್ಚಿದಾಗ ಕನಿಷ್ಠ ಬೆಲೆಯನ್ನು ನಿಗದಿಸಿದ್ದು ಕ್ಯಾಂಪ್ಕೋ. ಸರಕಾರ ಮಾರುಕಟ್ಟೆ ಮಧ್ಯಪ್ರವೇಶವನ್ನು ಕ್ಯಾಂಪ್ಕೋ ಮೂಲಕ ಮಾಡಿ ಅಡಿಕೆ ಬೆಳೆಗಾರರು ಜೀವ ಉಳಿಸಿಕೊಳ್ಳುವಂತೆ ಮಾಡಿತ್ತು.ಇಂದಿಗೂ ಕ್ಯಾಂಪ್ಕೋ ಪಂಚಾಯತ್ ಮಟ್ಟದ ಸಹಕಾರಿ ಸಂಘಗಳ ಪ್ರಾಂಗಣದಲ್ಲಿ ಅಡಿಕೆ ಖರೀದಿಸುತ್ತೆ, ಈ ಖರೀದಿ ನಮ್ಮ ಕೆಎಂಎಫ್ ರೀತಿಯದ್ದು. ಸಂಜೆಗೆ ತನ್ನದೇ ಲಾರಿಯಲ್ಲಿ ಈ ಸರಕನ್ನು ಕ್ಯಾಂಪ್ಕೋ ಸಾಗಿಸುತ್ತದೆ. ಅಷ್ಟೇಕೆ ಆ ಸಹಕಾರಿ ಸಂಘಕ್ಕೆ ಕಮಿಷನ್ ಕೂಡಾ ನೀಡುತ್ತದೆ. ಕ್ಯಾಂಪ್ಕೋ ಬೆಲೆ ನಿಗದಿ ಪಡಿಸುವುದು ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಖಾಸಗಿ ವ್ಯಾಪಾರಿಗಳು ಕ್ಯಾಂಪ್ಕೋ ದರವನ್ನೇ ಬೆಂಚ್ ಮಾರ್ಕ್ ದರವಾಗಿ ಇಟ್ಟುಕೊಂಡು ಅದಕ್ಕಿಂತ ಜಾಸ್ತಿ ಕೊಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರೈತರು ದೂರದ ತಾಲೂಕು ಕೇಂದ್ರಕ್ಕೆ ಒಯ್ಯಬೇಕಾದ ಸ್ಥಿತಿ ಇಲ್ಲ. ಕೆಡದ ಕಾಪಿಡಬಹುದಾದ ಅಡಿಕೆಗೆ ಕ್ಯಾಂಪ್ಕೋ ಇಂಥಾ ವ್ಯವಸ್ಥೆ ಮಾಡಿದ್ದರಿಂದಲೇ ರೈತರಿಗೆ ಸಮಯ ಉಳಿತಾಯದಿಂದ ಹಿಡಿದು ಹಲವು ಅನುಕೂಲಗಳಾಗಿವೆ.

ಅಡಿಕೆ ಬೆಲೆ ಗಗನಕ್ಕೇರಿ ಹಣದ ಥೈಲಿ ಎಣಿಸುವ ಈಗಿನ ಸಂಭ್ರಮದ ಕಾಲದಲ್ಲಿ ಅನೇಕರಿಗೆ ಇದು ಮರೆತು ಹೋಗಿದೆ ಅನ್ನಿಸುತ್ತೆ. 70ರ ದಶಕದಲ್ಲಿ ಘಾನಾದ ರೈತರು ತಾವು ಬೆಳೆದ ಕೋಕೋಗೆ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿದಾಗ ಅವರನ್ನು ಬಗ್ಗುಬಡಿಯಲು ಕ್ಯಾಡ್‍ಬರಿ ಎಂಬ ಬಹುರಾಷ್ಟ್ರೀಯ ಕಂಪೆನಿ ಭಾರತದಲ್ಲಿ ಕೋಕೋ ಬೆಳೆಸಲು ಪ್ರೊತ್ಸಾಹ ನೀಡಿತು. ಇಲ್ಲಿ ಬೆಳೆ ಬಂದಿದ್ದೇ ಘಾನಾದ ರೈತರು ನೆಲ ಕಚ್ಚುವಂತೆ ಮಾಡಿ ಅವರನ್ನು ಮಣಿಸಿತು. ಅವರು ಮೂರು ಕಾಸಾದರೂ ಸಾಕು ಎಂದು ಶರಣಾಗಿದ್ದೇ ಭಾರತದ ಕೋಕೋ ಖರೀದಿ ಕೈಬಿಟ್ಟಿತು. ರಾತ್ರೋರಾತ್ರಿ ಕೋಕೋ ಖರೀದಿಯನ್ನು ಕ್ಯಾಡ್‍ಬರಿ ಕೈ ಬಿಟ್ಟಿದ್ದರಿಂದಾಗಿ ಸಾವಿರಾರು ಟನ್ ಕೋಕೋ ಕೊಳೆತು ನೂರಾರು ರೈತರು ಕೋಕೋವನ್ನು ಕಡಿದೇ ಹಾಕಿದ್ದು ಈಗ ಸ್ವಲ್ಪ ತಲೆ ನೆರೆತ ನನ್ನ ತಲೆಮಾರಿನವರಿಗೆ ನೆನಪಿದ್ದೀತು. ಆಗ ಕ್ಯಾಂಪ್ಕೋದ ಸ್ಥಾಪಕ ವಾರಣಾಸಿ ಸುಬ್ರಾಯಭಟ್ಟರು ಇದೇ ಸಹಕಾರಿ ಸಂಘಗಳ ಮೂಲಕ ಕ್ಯಾಂಪ್ಕೋ ಕೋಕೋ ಹಸಿ ಬೀಜವನ್ನು ಖರೀದಿಸುವ ವ್ಯವಸ್ಥೆ ಮಾಡಿದರು. ಆದರೆ ದೂರಗಾಮಿಯಾಗಿ ಕ್ಯಾಡ್‍ಬರಿಗೆ ಸಡ್ಡು ಹೊಡೆಯುವ ದೃಷ್ಟಿಯಿಂದ ಚಾಕಲೇಟ್ ಫ್ಯಾಕ್ಟರಿಯನ್ನೂ ಸ್ಥಾಪಿಸಿದರು. ಅಂದಿನ ರಾಷ್ಟ್ರಪತಿಯವರೇ ಸ್ವತಃ ಇದನ್ನು ಉದ್ಘಾಟಿಸಿದ್ದರು. ಏಷ್ಯಾ ಅತೀ ದೊಡ್ಡ ಸಹಕಾರಿ ಎಂಬ ಹೆಸರೂ ಕ್ಯಾಂಫ್ಕೋಗೆ ಸಂದಿತ್ತು. ಕ್ರಮೇಣ ಬಸವಳಿದ ಕ್ಯಾಡ್‍ಬರಿ ಕ್ಯಾಂಪ್ಕೋದೊಂದಿಗೇ ಸ್ಪರ್ಧಿಸಿ ಕೋಕೋ ಖರೀದಿಸಬೇಕಾದ ಸ್ಥಿತಿಗೆ ಬಂದಿತ್ತು.

ಈ ಎರಡೂ ಸಂದರ್ಭದಲ್ಲಿ ಕ್ಯಾಂಪ್ಕೋ ಎಂಬ ಸಹಕಾರಿ ಮಾಡಿದ್ದು ಎ.ಪಿ.ಎಂ.ಸಿ ಮಾಡಿದ ಕೆಲಸವನ್ನೇ. ಖರೀದಿಯ ಭರವಸೆ ಮತ್ತು ಕನಿಷ್ಠ ಬೆಲೆ ಎರಡನ್ನೂ ಖಚಿತಪಡಿಸಿ ಖಾಸಗಿಯವರು ಇದನ್ನೇ ರೆಫರೆನ್ಸ್ ಆಗಿ ಖರೀದಿಸುವ ಅನಿವಾರ್ಯತೆಯನ್ನು ತಂದಿತು. ಈ ಚರಿತ್ರೆಯೇ ಮರೆತಂತೆ ಇತ್ತೀಚೆಗಿನ ಗೇಲಿ, ತಾತ್ಸಾರದ ಪ್ರತಿಕ್ರಿಯೆಗಳಿವೆ. ಅಡಿಕೆಗಿಂತ ಎಷ್ಟೊ ಪಾಲು ರಿಸ್ಕು ಇರುವ ಬೇಗ ಹಾಳಾಗುವ ತರಕಾರಿ ಮತ್ತಿತರ ಬೆಳೆಗಳಲ್ಲಿ ರೈತ ಎಷ್ಟು ಹಣ್ಣಾಗಬಹದು ಎಂಬ ಕನಿಷ್ಠ ಕಲ್ಪನೆ ಇದ್ದರೂ ಅನುಕಂಪ ಹುಟ್ಟುತ್ತಿತ್ತು. ಹೊಸ ಕಾನೂನುಗಳಲ್ಲಿ ರೆಫರೆನ್ಸ್ ಬೆಲೆಯ ಗ್ಯಾರಂಟಿಯೂ ಇಲ್ಲ. ಎಲ್ಲವನ್ನು ಕೊಳ್ಳುವ ಭರವಸೆಯೂ ಇಲ್ಲ. ಇಷ್ಟು ಅರ್ಥವಾಗಿದ್ದರೆ ಸಾಕಿತ್ತು.

ಹರೆಯದಲ್ಲಿ ನಾನು ಆರೆಸ್ಸೆಸ್ಸಿನಲ್ಲಿದ್ದಾಗ ಆರೆಸ್ಸೆಸ್ ನಾಯಕ ಹೊ.ವೆ.ಶೇಷಾದ್ರಿಯವರು ಒಂದು ಉದಾಹರಣೆ ಕೊಡುತ್ತಿದ್ದರು. ದೇಹಕ್ಕೆ ಒಂದು ಸೂಜಿ ಚುಚ್ಚಿದರೂ ಇಡೀ ದೇಹ ಪ್ರತಿಕ್ರಿಯಿಸುತ್ತೆ. ದೇಹದ ಗಾತ್ರ ವಿಸ್ತಾರಕ್ಕೆ ಆ ಸೂಜಿ ಬಾಧಿಸುವ ಏರಿಯಾ 0.0001 ಇರಬಹುದು. ಆದರೆ ಹಾಗೆಂತ ದೇಹ ಸುಮ್ಮನಿರುತ್ತದೆಯೇ? ಹಾಗೇ ರಾಷ್ಟ್ರಪುರುಷನೂ!! ದೇಶದ ಯಾವ ಭಾಗದಲ್ಲಿ ಯಾರಿಗೆ ತೊಂದರೆಯಾದರೂ ಎಲ್ಲರೂ ಇದು ನಮ್ಮ ನೋವು ಎಂಬಂತೆ ಪ್ರತಿಕ್ರಿಯಿಸಬೇಕು ಎಂಬುದು ಅವರ ವಿವರಣೆಯ ಸಾರಾಂಶ. ಅದು ಕೇವಲ ಭಾವನಾತ್ಮಕ ಕೋಮು ಕಿಚ್ಚು ಹಬ್ಬಿಸುವ ತಂತ್ರಗಾರಿಕೆ ಆಗಿ ಬಳಕೆಯಾಯಿತೇ ವಿನಃ ನಮ್ಮ ರೈತ/ ದಲಿತರ ಕಷ್ಟ ನಷ್ಟಗಳ ಸರಕಾರದ ನೀತಿ, ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯಾಗಿ ಬೆಳೆಯಲೇ ಇಲ್ಲ. ಇದರಲ್ಲೂ ಶ್ವಾನನಿಷ್ಠೆ ಯಾವ ಮಟ್ಟಕ್ಕೆಂದರೆ ತಮ್ಮ ಭಾಜಪ ಆಳುತ್ತಿದ್ದಾಗ ಸಮರ್ಥನೆಗೂ; ಬೇರೆ ಪಕ್ಷ ಆಳುತ್ತಿದ್ದರೆ ಪ್ರತಿಭಟನೆಗೂ ಇಳಿವಷ್ಟು.

ನಿನ್ನೆ, ಮೊನ್ನೆ, ಇಂದಿನ ಪ್ರತಿಕ್ರಿಯೆಗಳೂ ಈ ಆಳದ ಸಂವೇದನಾ ಶೂನ್ಯತೆಯ ಪ್ರತೀಕ. ಕುಷ್ಠ ರೋಗ ಬಂದಾಗ ಸ್ಪರ್ಶ ಜ್ಞಾನ ಇರುವುದಿಲ್ಲವಂತೆ. ಇದನ್ನೇ ರೂಪಕವಾಗಿ ಬಾಬಾ ಅಮ್ಟೆ ( ಬಾಬಾ ರಾಮದೇವ್ ಅಲ್ಲ!! ) ನೈತಿಕ ಕುಷ್ಠ ಎಂದಿದ್ದರು. ಅಂದರೆ ನೈತಿಕವಾಗಿ ಸ್ಪಂದಿಸುವ ಸಂವೇದನಾ ಶೀಲತೆ ಕಳೆದುಕೊಳ್ಳುವುದು.ನಿಜಕ್ಕೂ ಸಂವೇದನಾಶೀಲತೆ ಇದ್ದಿದ್ದರೆ ತಮ್ಮ ಕ್ಯಾಂಪ್ಕೋ ಮಾದರಿಯಲ್ಲಿ ಎಪಿಎಂಸಿ ಯನ್ನು ಸುಧಾರಿಸಿ; ಅದನ್ನು ಸಾಯಿಸಬೇಡಿ ಎಂದು ಕೇಂದ್ರ, ರಾಜ್ಯ ಸರಕಾರಗಳಿಗೆ ಹೇಳಬೇಕಿತ್ತು. ಈ ಕಾನೂನುಗಳನ್ನು ವಿರೋಧಿಸುವುದರಲ್ಲಿ‌ಮುಂಚೂಣಿಯಲ್ಲಿರಬೇಕಿತ್ತು. (Suresha Kanjarpane) (ಆಧಾರ- ಕೇಸರಿ ಹರವೂ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *