similarities of nayagara & joga-ನಯಾಗಾರಕ್ಕೂ ನಮ್ಮ ಜೋಗಕ್ಕೂ ಇರುವ ಸಾಮ್ಯತೆ ಏನು ಗೊತ್ತಾ?

ನಯಾಗರಾ ಜಲಪಾತವು ಎಷ್ಟು ಸುಂದರವೋ ಅಷ್ಟೇ ಆಸಕ್ತಿಕರ ಅಂಶಗಳನ್ನ ಹೊಂದಿದೆ

-೧. ಚಿತ್ರದಲ್ಲಿ ದೂರದಲ್ಲಿ ಕಾಣುವ ಕುದುರೆಲಾಳದ ಜಲಪಾತದಲ್ಲಿ ನಯಾಗರ೯೦% ನೀರು ಸುರಿದರೆ ಉಳಿದ ೧೦% ನೀರು ಅಮೆರಿಕಾದ ಜಲಪಾತ ಮತ್ತು ಮದುವಣಗಿತ್ತಿಯಮುಸುಕಿನ ಜಲಪಾತಗಳಲ್ಲಿ ಸುರಿಯುತ್ತದೆ. ಹಾಗೇ ಈ ಕುದುರೆಲಾಳದ ಜಲಪಾತ ೯೦ ಪ್ರತಿಶತ ಕೆನಡಾದಲ್ಲಿದ್ದರೆ ೧೦ ಪ್ರತಿಶತ ಅಮೆರಿಕಾದಲ್ಲಿದೆ.

೨. ಚಿತ್ರದಲ್ಲಿ ಎಡಭಾಗದಲ್ಲಿರುವ ಅಮೆರಿಕಾದ ಜಲಪಾತದ ಮೂಲೆಯಲ್ಲೆಲ್ಲೋ ಕಂಡೂ ಕಾಣದಂತಿರುವುದು ಮದುವಣಗಿತ್ತಿಯಮುಸುಕಿನ ಜಲಪಾತ. ಕ್ರೈಸ್ತ ಸಂಪ್ರದಾಯದಲ್ಲಿ ಮದುಮಗಳು ಧರಿಸುವ ತೆಳುವಾದ ಬಿಳಿ ಮುಸುಕಿನಂತೆ ಯಾರಿಗೋ ಕಂಡಿರಬೇಕು ಅದಕ್ಕೇ ಈ ಹೆಸರು. ಉಳಿದೆರಡು ದೈತ್ಯರ ಮುಂದೆ ಇದು ಪ್ರಪಂಚದ ಪಾಲಿಗೆ ಬಹುಪಾಲು ಅಜ್ಞಾತವಾಗಿಯೇ ಇದೆ.

೩. ಅಮೆರಿಕಾ ಈ ಜಲಪಾತದ ಸುತ್ತ ಕೈಗಾರಿಕಾ ಅವಕಾಶಗಳನ್ನ ಹುಡುಕಹೊರಟರೆ ಕೆನಡಾ ಪ್ರವಾಸೋದ್ಯಮದತ್ತ ಗಮನ ಹರಿಸಿತು. ಅಮೆರಿಕಾದ ಪರಿಸರ ಹೋರಾಟಗಾರರಿಗೆ ಇಲ್ಲಿನ ಉದ್ಯಮ ಲಾಬಿಯ ಎದುರು ಹೋರಾಡಿ ಗೆಲ್ಲಲು ಬಹಳ ಸಮಯ ಬೇಕಾಯಿತು.ಈಗಲೂ ಅಮೆರಿಕಾ ಭಾಗದ ಬಹುಪಾಲು ನೀರು ಜಲವಿದ್ಯುತ್ ಸ್ಥಾವರಕ್ಕೆ ಹರಿವುದರಿಂದ ಜಲಪಾತಕ್ಕೆ ಪ್ರವಹಿಸುವ ನೀರಿನ ಅಗಾಧತೆ ಕಮ್ಮಿಯೇ. ಹಾಗೇ ಕೈಗಾರಿಕೆಗಳಿಂದಾದ ಹಾನಿಯಿಂದ ನಯಾಗರಾ ಪೂರ್ಣ ಚೇತರಿಸಿಕೊಂಡಿಲ್ಲ ಅನ್ನುವುದು ಕೂಡಾ ಸತ್ಯ.

೪. ನಯಾಗರ ನದಿ ಪಂಚಮಹಾಸರೋವರಗಳಲ್ಲಿ ಎರಡಾದ ಈರಿ ಮತ್ತು ಓಂಟಾರಿಯೋಗಳನ್ನ ಸಂಪರ್ಕಿಸುವ ಕಾಲುವೆಯಾದುದರಿಂದ ಇದರ ನೀರೆಂದೂ ಬತ್ತದು ಇಲ್ಲಾ ಕಮ್ಮಿಯಾಗದು (off course yes ಮಾನವನ ಹಸ್ತಕ್ಷೇಪವಿಲ್ಲದಿದ್ದರೆ). ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆಯಷ್ಟೇ.

೫. ನಯಾಗರಾ ಭೌಗೋಳಿಕವಾಗಿ ತೀರಾ ಹೊಸರಚನೆ. ಅಂದರೆ ಕೇವಲ ೧೨೦೦೦ ವರ್ಷಗಳ ಹಿಂದಿನದು‌. ೧೯೬೯ ರಲ್ಲಿ ನಯಾಗರಾದ ಶಿಲಾರಚನೆ ಸಡಿಲವಾಗುತ್ತಿದೆಯೆಂದು ವಿಜ್ಞಾನಿಗಳು ಅನುಮಾನಪಟ್ಟ ಹಿನ್ನೆಲೆಯಲ್ಲಿ ಅಧ್ಯಯನಕ್ಕಾಗಿ ಸಂಪೂರ್ಣ ಅಮೆರಿಕಾದ ಜಲಪಾತವನ್ನು ಬತ್ತಿಸಲಾಗಿತ್ತು. ಆ ಸಮಯದಲ್ಲಿ ಲಕ್ಷಾಂತರ ನಾಣ್ಯಗಳು ಸಿಕ್ಕವಂತೆ. ದಯವಿಟ್ಟು ನಮ್ಮದೇಶ ಮಾತ್ರ ಮೂಢನಂಬಿಕೆಗಳ‌ ಕಂತೆ ಪಾಶ್ಚಾತ್ಯ ದೇಶದವರೆಲ್ಲಾ ಮಹಾನ್ ವೈಜ್ಞಾನಿಕ ದೃಷ್ಟಿಕೋನವುಳ್ಳವರೆಂದು ನಮ್ಮ ದೇಶದ ಬಗ್ಗೆ ಕರುಣಾಜನಕವಾದ ಮೀಮ್‌ಗಳನ್ನು ಸೃಷ್ಟಿಸುವ ಮೊದಲು ಅಥವಾ ಶೇರ್ ಮಾಡುವ ಮೊದಲು ಇಂತದ್ದನ್ನ ಸ್ವಲ್ಪ ಯೋಚಿಸಿ.

೬. ನಯಾಗರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲು ನಿಕೋಲಸ್ ಟೆಸ್ಲಾ ಎಂಬ ಅದ್ಭುತ ಪ್ರತಿಭಾವಂತ ಆದರೆ ಅತ್ಯಂತ ದುರದೃಷ್ಟವಂತ, ಅಂದರೆ ಪ್ರತಿಭೆಗೆ ತಕ್ಕ ಫಲ ಪಡೆದುಕೊಳ್ಳದ ಅತ್ಯಂತ ಮಾನವೀಯ ಕಳಕಳಿಯುಳ್ಳ ವಿಜ್ಞಾನಿಯ ಕೊಡುಗೆ ಅಪಾರ. ಅದಕ್ಕೇ ಅಲ್ಲಿ ಅವರ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಹೆಸರು ಪರಿಚಿತ. ಹಾಗೇ ಅವರ ಜೀವನ ಚರಿತ್ರೆಯನ್ನೂ ಓದಿ ಒಮ್ಮೆ.

೭. ಅಮೆರಿಕಾಗೆ ಬರುವ / ತಮ್ಮವರ ಕರೆಸಿಕೊಂಡ ಭಾರತೀಯರೆಲ್ಲರೂ ಖಾಯಂ ಆಗಿ ಭೇಟಿ ಕೊಡುವ ಜಾಗವಾದುದರಿಂದ ಸಸ್ಯಾಹಾರಿ ಆಯ್ಕೆಗಳು ಹಲವಾರಿವೆ. ಸಸ್ಯಾಹಾರವಿರಲೀ ಮಾಂಸಾಹಾರವಿರಲಿ ಭಾರತೀಯ ಊಟವೇ ಬೇಕೆನ್ನುವುದು ನಮ್ಮವರ ಸಿದ್ಧಾಂತವಾಗಿದ್ದರಿಂದ ಸಾಕಷ್ಟು ಭಾರತೀಯ ರೆಸ್ಟೋರೆಂಟುಗಳೂ ಇವೆ.

೮. ಇನ್ನೂ ಬಹಳ ಇವೆ ಇಷ್ಟು ಸಾಕು. ಹಾಗೇ ಕೊನೆ ಮಾತು, ಜೋಗ ಜಲಪಾತದ ಬಹುಭಾಗ ಉತ್ತರಕನ್ನಡ ಜಿಲ್ಲೆಯಲ್ಲಿದ್ದರೂ ಅದರ ಸುಂದರ ನೋಟ ಸಿಗುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಉತ್ತರ ಕನ್ನಡ ಭಾಗದಿಂದ ಪಾರ್ಶ್ವ ನೋಟ ಮಾತ್ರ ಲಭ್ಯ. ಹಾಗೇ ನಯಾಗರಾದ ಸುಂದರ ನೋಟ ಕಾಣುವುದು ಕೆನಡಾ ಕಡೆಯಿಂದ.

#ನಾನುನೋಡಿದಸ್ಟೇಟುಗಳು#ನ್ಯೂಯಾರ್ಕ್

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *