

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಸುರೇಶ್ಚಂದ್ರ ಹೆಗಡೆ, ಮೋಹನ ನಾಯಕ, ರಾಮಕೃಷ್ಣ ಹೆಗಡೆ ಕಡವೆ, ಗಜಾನನ ಪೈ ಕುಮಟಾ, ಬಾಬು ನಾಯ್ಕ ಸುಂಕೇರಿ (ಅಂಕೋಲಾ) ಶಿವಾನಂದ ಹೆಗಡೆ, ಎಲ್.ಟಿ. ಪಾಟೀಲ್, ಜಿ.ಆರ್. ಹೆಗಡೆ ಸೋಂದಾ ಹಾಗೂ ಷಣ್ಮುಖ ಗೌಡರ್ ಆಯ್ಕೆಯಾಗಿದ್ದಾರೆ.


ಕಾಂಗ್ರೆಸ್ ಹಿಡಿತದಲ್ಲಿದ್ದ ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯನ್ನು ಸಂಸದ ಅನಂತಕುಮಾರ್ ಹೆಗಡೆ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರೆ, ಇವರಿಗೆ ಎದುರಾಗಿ ಹಾಲಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ್ ಸವಾಲಾಗಿ ಸ್ವೀಕರಿಸಿದ್ದರು.
ಅಂಕೋಲಾದ ಮೂವರಲ್ಲಿ ವಸಂತ್ ನಾಯಕ ಸೋತು ಮೋಹನ ನಾಯಕ ಮತ್ತು ಬಾಬು ನಾಯ್ಕ ಆಯ್ಕೆಯಾಗಿದ್ದಾರೆ. ಸಿದ್ಧಾಪುರದ ಪ್ರಾಥಮಿಕ ಸಹಕಾರಿ ಸಂಘಗಳಿಂದ ಹಳೆಹುಲಿ ಷಣ್ಮುಖ ಗೌಡರಿಗೆ ಪ್ರಬಲ ಪೈಪೋಟಿ ನೀಡಿದ್ದ ವಿವೇಕ ಭಟ್ ಗೌಡರಷ್ಟೇ ಮತ ಪಡೆದರಾದರೂ ಚೀಟಿ ಎತ್ತುವ ಪ್ರಕ್ರೀಯೆಯಲ್ಲಿ ಜಯ ಗೌಡರ ಮುಡಿಗೇರಿತು.


ಅನುಭವಿ ಭಾಸ್ಕರ್ ಹೆಗಡೆ ಕಾಗೇರಿಯವರ ವಿರುದ್ಧ ಕೆ.ಎಂ. ಎಫ್. ನಿರ್ಧೇಶಕ ಸುರೇಶ್ಚಂದ್ರ ಹೆಗಡೆ ಗೆಲುವು ಅಚ್ಚರಿಗೆ ಕಾರಣವಾಗಿದೆ. ವಾಸ್ತವದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕಿಗೆ ಆಯ್ಕೆಯಾದ ನಿರ್ಧೇಶಕರಲ್ಲಿ ಬಹುಮತ ಕಾಂಗ್ರೆಸ್ ಮತ್ತು ಘೊಟ್ನೇಕರ್ ಪರವಾಗಿದ್ದರೂ ಸಚಿವ ಶಿವರಾಮ ಹೆಬ್ಬಾರ್ ಮತ್ತು ಅನಂತಹೆಗಡೆಯವರ ಆಪರೇಷನ್ ಕಮಲದ ಕರಾಮತ್ತು ಕಾಂಗ್ರೆಸ್ ಗೆ ಮಾರಕವಾಗುವ ಹಿನ್ನೆಲೆಯಲ್ಲಿ ಜಾತಿ ಕೆಲಸಮಾಡಲಿದೆ ಎನ್ನುವ ಅಂಶವನ್ನು ನಿರ್ಲಕ್ಷಿಸುವಂತಿಲ್ಲ.!

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






