divali special-ದೀಪಾವಳಿಯ ಐದನೇ ದಿನದ ಆಚರಣೆಯೇನು?

ದೀಪಾವಳಿಯ ಐದನೇ ದಿನದ ಹಬ್ಬವೇ ಯಮದ್ವಿತೀಯ ಅಂತ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧಿಯಾಗಿದೆ. ನಮ್ಮಲ್ಲಿ ನಾಗರ ಪಂಚಮಿ ಹಬ್ಬ ಮಾಡುವಂತೆ ಅಲ್ಲಿ ಇದನ್ನು ಭಗಿನಿ ದ್ವಿತೀಯ, ಭಾಗಿನಿ ದ್ವಿತೀಯ, ಬಾಯಿಬೋಜ್ ಎಂದು ಕೂಡ ಕರೆಯುತ್ತಾರೆ, ಪ್ರಮುಖವಾಗಿ ಇದು ಸೋದರ-ಸೋದರಿಯರಿಗೆ ಸಂಬಂಧಿಸಿದ ಹಬ್ಬವಾಗಿದೆ. https://www.youtube.com/watch?v=ZYTbI_UwYMM

ದೀಪಾವಳಿಯ ಐದನೇ ದಿನದ ಹಬ್ಬವೇ ಯಮದ್ವಿತೀಯ ಅಂತ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧಿಯಾಗಿದೆ. ನಮ್ಮಲ್ಲಿ ನಾಗರ ಪಂಚಮಿ ಹಬ್ಬ ಮಾಡುವಂತೆ ಅಲ್ಲಿ ಇದನ್ನು ಭಗಿನಿ ದ್ವಿತೀಯ, ಭಾಗಿನಿ ದ್ವಿತೀಯ, ಬಾಯಿದೂಜ್ ಎಂದು ಕೂಡ ಕರೆಯುತ್ತಾರೆ, ಪ್ರಮುಖವಾಗಿ ಇದು ಸೋದರ-ಸೋದರಿಯರಿಗೆ ಸಂಬಂಧಿಸಿದ ಹಬ್ಬವಾಗಿದೆ. 

ಬಲಿಪಾಡ್ಯಮಿ ಕಳೆದ ಮರುದಿನ ಅಕ್ಕತಂಗಿಯರ ಮನೆಗೆ ಅಣ್ಣತಮ್ಮಂದಿರು ಹೋಗಿ ಹಬ್ಬದ ಊಟಮಾಡಿ ಕಾಣಿಗೆ ತೆಗೆದುಕೊಂಡು ಬರುತ್ತಾರೆ. ಪುರಾಣದಲ್ಲಿ ಯಮ ಮತ್ತು ಯಮುನಾ ಅಣ್ಣ ತಂಗಿಯರು ಇವರು ಸೂರ್ಯನ ಮಕ್ಕಳು, ಅವರ ಕುರಿತು ಆಚರಿಸುವ ಹಬ್ಬವೆಂದು ಉಲ್ಲೇಖವಿದೆ.

ಇಲ್ಲಿ ಯಮುನಾ ಅಂದರೆ ನದಿ ಯಮನ ತಂಗಿ. ಅವತ್ತಿನ ದಿನ ತಂಗಿ ಯಮುನಾ ಯಮನನ್ನು ಕರೆದು ಆತಿಥ್ಯ ನೀಡಿ ಕಳುಹಿಸುವಾಗ ಯಮ ತಂಗಿಗೆ ವರ ನೀಡುತ್ತಾನೆ. ನಿನಗೇನು ವರ ಬೇಕು ಎಂದು ತಂಗಿ ಯಮುನಾಳನ್ನು ಕೇಳಿದಾಗ, ನನಗೇನು ವರ ಬೇಡ, ನಾನು ಸಂತೋಷವಾಗಿದ್ದೇನೆ.ಇವತ್ತಿನ ದಿನ ಯಾವುದೇ ಸೋದರಿಯರು ತಮ್ಮ ಅಣ್ಣತಮ್ಮಂದಿರಿಗೆ ಆತಿಥ್ಯ ಕೊಡುತ್ತಾರೋ, ಅವರಿಗೆ ಆಯುರಾರೋಗ್ಯ, ಸಕಲ ಸಂಪತ್ತು ಕೊಟ್ಟು ಸೋದರ ಬಾಂಧವ್ಯ ಚೆನ್ನಾಗಿಟ್ಟಿರಲಿ ಎಂದು ಪ್ರಾರ್ಥಿಸುತ್ತಾಳೆ. ಯಮನಿಗೂ ಸಂತೋಷವಾಗಿ ಆಗಲಿ ಎಂದು ಹರಸುತ್ತಾನೆ.

ಹೀಗಾಗಿ ಆ ದಿನವನ್ನು ಯಮದ್ವಿತೀಯ ಹಬ್ಬ ಎಂದು ಆಚರಣೆ ಮಾಡುತ್ತಾರೆ. ಅಣ್ಣ-ತಮ್ಮಂದಿರು ಅಕ್ಕ-ತಂಗಿಯರ ಮನೆಗೆ ಹೋಗಿ ಇಡೀ ದಿನ ಸಂತೋಷದಿಂದ ಕಳೆದು ಊಟ-ತಿಂಡಿ ತಿಂದು ಬರುತ್ತಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *