ಒಂದೆಡೆ ಗೋಪೂಜೆ.. ಇನ್ನೊಂದೆಡೆ ವಿಧೇಯಕಕ್ಕೆ ತಡೆ

ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ತಡೆ: ಅಧಿವೇಷನ ಅನಿರ್ದಿಷ್ಟಾವಧಿ ಮುಂದೂಡಿಕೆ

ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿ ಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿ ಷ್ಟಾ ವಧಿವರೆಗೆ ಮುಂದೂಡಿ ಹಿನ್ನೆಲೆ ಯಲ್ಲಿ,ಈ ಬಾರಿಯ ಅಧಿವೇಶನದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯ ಕಕ್ಕೆ ವಿಧಾನ ಪರಿಷತ್‌ನಲ್ಲಿ ಬ್ರೇಕ್ ಹಾಕಿದೆ.ಆಮೂಲಕ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಹಿನ್ನಡೆಯುಂಟಾಗಿದೆ.

ಭಾರತೀಯ ಜನತಾ ಪಕ್ಷದ ರಹಸ್ಯ ಕಾರ್ಯಸೂಚಿ ಎನ್ನಲಾಗಿದ್ದ ಗೋಹತ್ಯೆ ನಿಶೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾದರೂ ವಿಧಾನಪರಿಷತ್ ನಲ್ಲಿ ಅನುಮೋದನೆ ಪಡೆದಿಲ್ಲ. ಗೋವು,ರಾಷ್ಟ್ರೀಯತೆ, ದೇಶಪ್ರೇಮಗಳ ವಿಜೃಂಬಣೆಯ ರಾಜಕಾರಣ ಮಾಡುವ ಬಿ.ಜೆ.ಪಿ., ಆರ್.ಎಸ್.ಎಸ್. ಪರಿವಾರ ಈ ವಿಷಯವನ್ನುರಾಜಕೀಯಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದಲೇ ಗೋಪೂಜೆ ನಾಟಕ ಆಡುತ್ತಿವೆ ಎನ್ನುವ ಆರೋಪ ವ್ಯಾಪಕವಾಗಿದೆ.

ಬೆಂಗ ಳೂರು: ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿ ಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿ ಷ್ಟಾ ವಧಿವರೆಗೆ ಮುಂದೂಡಿ ಹಿನ್ನೆಲೆ ಯಲ್ಲಿ,ಈ ಬಾರಿಯ ಅಧಿವೇಶನದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯ ಕಕ್ಕೆ ವಿಧಾನ ಪರಿಷತ್‌ನಲ್ಲಿ ಬ್ರೇಕ್ ಹಾಕಿದೆ.ಆಮೂಲಕ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಹಿನ್ನಡೆಯುಂಟಾಗಿದೆ.

ವಿಧಾನಪರಿಷತ್‌ನಲ್ಲಿ ಗುರುವಾರ ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು.ಅದರ ನಡುವೆಯೇ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಸಚಿವರು ಸಭೆಗೆ ಹಾಜರಾಗದ ಹಿನ್ನಲೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು.ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವು ಅಜೆಂಡಾದಲ್ಲಿದ್ದು,ವಿಧೇಯಕವನ್ನು ಇಂದೇ ಮಂಡಿಸುವಂತೆ ಆಗ್ರಹಿಸಿದರು.ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕೆಲಸ ಮಾಡಬೇಕಿದ್ದು,ಸದನ ಇಂದೇ ಅಂತ್ಯಗೊಳಿಸುವಂತೆಯೂ ಸಭಾಪತಿಯವರನ್ನು ಒತ್ತಾಯಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಶೇ.90ಕ್ಕೂ ಹೆಚ್ಚು ಕಾರ್ಯಕಲಾಪ ಪೂರ್ಣ : ಸ್ಪೀಕರ್

ನಾಲ್ಕು ದಿನ ನಡೆದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.ಡಿ.7 ರಿಂದ ಪ್ರಾರಂಭವಾದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್ ಕಾಗೇರಿ‌ ಕಲಾಪದ ಸಂಕ್ಷಿಪ್ತ ವರದಿ ನೀಡಿದರು.ನಾಲ್ಕು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಒಟ್ಟು 20 ಗಂಟೆಗಳ ಕಾಲ ಕಾರ್ಯಕಲಾಪ ನಡೆಯಿತು. ಈ ಅವಧಿಯಲ್ಲಿ ಸದನವೂ ಶೇ. 90ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದೆ‌ ಎಂದು ಸ್ಪೀಕರ್ ತಿಳಿಸಿದರು.

ಕರ್ನಾಟಕ ವಿಧಾನಮಂಡಲ, ವಿಧಾನಸಭೆಯ ಸಮಿತಿಗಳ ಹಾಗೂ ಜಂಟಿ ಪರಿಶೀಲನಾ ಸಮಿತಿಯ ವರದಿಯು ಸೇರಿದಂತೆ ಒಟ್ಟು 14 ವರದಿಗಳು, 09 ಅಧಿಸೂಚನೆಗಳು,04 ಅಧ್ಯಾದೇಶ ಗಳು,46 ವಾರ್ಷಿಕ ವರದಿಗಳು, 18 ಲೆಕ್ಕ ಪರಿಶೋಧನಾ ವರದಿ, 02 ಅನುಪಾಲನಾ ವರದಿ ಹಾಗೂ 02 ತಪಾಸಣಾ ವರದಿಗಳನ್ನು ಮಂಡಿಸಲಾಗಿದೆ.

ಭೂ ಸೂಧಾರಣಾ ತಿದ್ದುಪಡಿ ಮಸೂದೆ ಹಾಗೂ ಗೋ ಹತ್ಯೆ ನಿಷೇಧ ವಿಧೇಯಕ ಸೇರಿದಂತೆ ಒಟ್ಟು 8 ವಿಧೇಯಕಗಳ ಅಂಗೀಕಾರ ಸೇರಿ ಮಹತ್ವದ ವಿಧೇಯಕ ಮಂಡನೆಯಾಗಿದೆ. ಪ್ರತಿಪಕ್ಷಗಳ  60 ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ.  (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *