ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್

ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ... Read more »

ಯುವರತ್ನ, ಜೇಮ್ಸ್ ಟ್ರೆಂಡಿಂಗ್

ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ. ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ... Read more »

ಕೋವಿಡ್೧೯ ಪರಿಣಾಮ- ಸರ್ಕಾರ, ವೈದ್ಯರ ರಗಳೆಗಳಿಂದ ಬಡವಾಗುತ್ತಿರುವ ಹೊರರೋಗಿಗಳು

ಕರೋನಾ ವೈರಸ್ ಮತ್ತು ಮಂಗನಕಾಯಿಲೆಗಳ ಬಗ್ಗೆ ವಿಶೇಶ ಗಮನ ಹರಿಸುತ್ತಿರುವ ಸರ್ಕಾರ, ಆಸ್ಫತ್ರೆಗಳ ಕ್ರಮದಿಂದ ಸರ್ಕಾರಿ ಆಸ್ಫತ್ರೆಗಳ ಇತರ ಹೊರರೋಗಿಗಳಿಗೆ ತೊಂದರೆಯಾಗುತ್ತಿರುವ ವಿದ್ಯಮಾನ ವರದಿಯಾಗಿದೆ. ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಸರ್ಕಾರಿ ಆಸ್ಫತ್ರೆಗಳಲ್ಲಿ ಕರೋನಾ ಸೋಂಕು ಮತ್ತು ಮಂಗನಕಾಯಿಲೆಗಳ ಬಗ್ಗೆ... Read more »

ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುವೆ: ರಂಜನ್ ಗೊಗೊಯ್

ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ರಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ನಾಮನಿರ್ದೇಶನದ ಬಗ್ಗೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ. ಗೋಗೊಯ್ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆ ಅವರು ನ್ಯಾಯಮೂರ್ತಿಗಳಾಗಿದ್ದಾಗ ಮೋದಿ... Read more »

ಕರೋನಾ ಪರಿಣಾಮ: ವಾರದ ಸಂತೆಯ ಜಾಗ ಬದಲು

ಸಿದ್ಧಾಪುರ,ಮಾ.೧೭- ಕರೋನಾ ಎಲ್ಲರನ್ನೂ ನಡುಗಿಸುತಿದ್ದು ಇಲ್ಲಿಯ ಮಾರುಕಟ್ಟೆ ಇಲ್ಲದ ರಸ್ತೆಯ ಮೇಲೆ ನಡೆಯುತಿದ್ದ ಬುಧವಾರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ನೆಹರೂ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. (ಸಮಯ ಸಂಜೆ 5-30 ರ ಮೊದಲು) ಈ ಬಗ್ಗೆ ಇಂದು ನಡೆದ ತಾಲೂಕಾ ಆಡಳಿತದ ಸಭೆಯಲ್ಲಿ... Read more »

ಮೊದಲು ಮಾನವನಾಗು ಸೂಲಿಬೆಲೆ

ಹೀಗೆಂದು ಟ್ವೀಟ್ ಮಾಡುವ ಮೂಲಕ ನಟ ಧನಂಜಯ್ ಚಕ್ರವರ್ತಿ ಸೂಲಿಬೆಲೆಯವರಿಗೆ ಟಕ್ಕರ್ ನೀಡಿದ್ದಾರೆ. ಇಂದು ಕರೋನಾ ಬಗ್ಗೆ ನಂಜಿನ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ ಇಟಲಿಯಲ್ಲಿ ಜನ ಸಾಯುತ್ತಿರುವ ಬಗ್ಗೆ ಏಸು ಕ್ರಿಸ್ತರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರೀಯೆ... Read more »

ಕೋವಿಡ್೧೯ ಪರಿಣಾಮ- ಬೀದಿಬದಿ ಅಂಗಡಿಗಳು ಕ್ಲೋಜ್,ಶಿರಸಿಯಲ್ಲಿ ದೇವಸ್ಥಾನದಲ್ಲಿ ಊಟ

ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಭೀತಿ ಹಿನ್ನೆಲೆಯಲ್ಲಿ ಬೀದಿ ಬದಿ ಫಾಸ್ಟ್ಫುಡ್ ಅಂಗಡಿ ಬಂದ್ ಹಾಗೂ ನಾಟಕ, ಸಿನೆಮಾ, ಸಾರ್ವಜನಿಕ ತಾತ್ಕಾಲಿಕ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದರಿಂದ ಸಿದ್ಧಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಜಾತ್ರೆ,ಉತ್ಸವಗಳ ತಾತ್ಕಾಲಿಕ ಅಂಗಡಿಗಳನ್ನು ಮುಚ್ಚಲಾಗಿದೆ. ಬೀದಿಬದಿ ಫಾಸ್ಟ್ಫುಡ್... Read more »

ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ ಸಿದ್ಧಾಪುರದ ಯುವಕರು

ಕೃಷಿ-ಖುಷಿ- ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಬಯಸುವ ವಿರಳ ಯುವಕರಲ್ಲಿ ತಾಲೂಕಿನ ಹೆಮಟೆಮನೆಯ ಎಚ್.ಎಲ್. ವೇಣು ಮತ್ತು ಬೇಡ್ಕಣಿಯ ಜಯಪ್ರಕಾಶ ನಾಯ್ಕ ಪ್ರಮುಖ ಯುವಕರಾಗಿದ್ದಾರೆ. ವೇಣು ಬಿದ್ರಕಾನ ಹೆಮಟೆಮನೆಯ ಯುವಕ. ಜನಾನುರಾಗಿಯಾಗಿದ್ದ ಇವರ ತಂದೆ ಎಲ್.ಕೆ.ಹೆಗಡೆ ಅಕಾಲಿಕವಾಗಿ ಮರಣ ಹೊಂದಿದ ನಂತರ... Read more »

ನೀತಿವಂತ ನಾಯಕರಿಲ್ಲದ ವೆನೆಜುವೆಲಾ ನೆಲಕಚ್ಚಿದ ರೀತಿ -ಡಿ. ರಾಮಪ್ಪ ಸಿರಿವಂತೆ, (ಅಂಕೋಲಾ)

ಪ್ರಪಂಚದಲ್ಲಿಯೇ ಅತೀ ಹೆಚ್ಚು ಪೆಟ್ರೋಲಿಯಂ ಮತ್ತು ಖನಿಜಗಳಿರುವ ಆದರೆ ಇಂದು, ಊಟಕ್ಕೂ ಗತಿಯಿಲ್ಲದ ಅತ್ಯಂತ ಬಡ ದೇಶ ವೆನೆಜುವೆಲಾ! 1940ರ ದಶಕದವರೆಗೂ ಕೃಷಿ ಮತ್ತು ಮೀನುಗಾರಿಕೆ ನೆಚ್ಚಿಕೊಂಡು ಸ್ವಲ್ಪವಾದರೂ ನೆಮ್ಮದಿಯಿಂದಿದ್ದ ನಾಡಿಗೆ, ಭೂಮಿಯಲ್ಲಿ ಅಡಗಿದ್ದ ಪೆಟ್ರೋಕೆಮಿಕಲ್ಸ್ ಸಿಕ್ಕ ಕೂಡಲೆ, ಸಂಪದ್ಭರಿತ... Read more »

ಡಿ.ಕೆ.ಶಿ.ಪರಿಣಾಮ:ಪಕ್ಷತ್ಯಜಿಸಲಿದ್ದಾರಾ ಜೆ.ಡಿ.ಎಸ್.ನಾಯಕರು?

ಹಲವು ಸುತ್ತಿನ ಕಸರತ್ತಿನ ನಂತರ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅಂತೂ ಇಂತೂ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದಾರೆ. ಡಿ.ಕೆ.ಶಿ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಲು ವಿರೋಧಿಸಿದ್ದರು ಎನ್ನಲಾದ ಕೆಲವು ಮುಖಂಡರ ಒಪ್ಪಿಗೆ ಇಲ್ಲದೆ ಶಿವಕುಮಾರ ಮತ್ತು ಸಿದ್ಧರಾಮಯ್ಯ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಡಿ.ಕೆ.ಶಿವಕುಮಾರ ಸಮರ್ಥ ಮತ್ತು... Read more »