

ಸರಿಬರುತ್ತಿಲ್ಲ. ಹೊಂದಾಣಿಕೆಯಾಗುತ್ತಿಲ್ಲ, ಹಾಗಾಗಿ ನಾನು….!
ಎಂದು ಸರಕ್ಕನೆ ಗಂಡನನ್ನು ಎಳೆದೊಯ್ದು, ಗೋಳಾಟದ ಬದುಕಿಗೆ ನಾಂದಿ ಹಾಡಿದವರಿದ್ದಾರೆ.
ಗಂಡ-ಮನೆ ಎಂಬುದು ಸಂಬಾಳಿಸುವಂಥದ್ದು ಎಂದು ಕಣ್ಣಿರಲ್ಲೇ ಜೀವ ತೇಯ್ದ ಗರತಿಯರಿದ್ದಾರೆ. ನನ್ನ ಪ್ರಕಾರ ಇವ್ಯಾವೂ ಅಸಂಭವಗಳಲ್ಲ.
ಆದರೆ, ಮಹಿಳಾ ಹೋರಾಟ ಗಾರ್ತಿಯರು ಬಹುಸಂಖ್ಯೆಯ ಮೂರನೇ ಪ್ರಭೇದವನ್ನು ‘ಕಾದು’ ಎನ್ನುತ್ತಾರೆ. ಪ್ರೀತಿಯ ಹೆಂಡತಿ ಗಂಡನನ್ನು ಬಿಡುವುದು, ಸೊಸೆ ಮನೆಯನ್ನು ಬಿಡುವುದು. ಕೆಲವೊಮ್ಮೆ ಗಂಡನೆ ಹೆಂಡತಿಯನ್ನು ಬಿಡುವುದು ಇವೆಲ್ಲಾ ಸಾಮಾನ್ಯ ಸಂಗತಿಗಳೇ! ಆದರೆ….
‘ನೀ…..ನಿಲ್ಲದೆ…. ಎಂದು ಹಾಡುವ ಅಮಾಯಕ ಹುಡುಗನನ್ನು ಪ್ರೀತಿಸಿದ ಹುಡುಗಿ, ಮನೆ, ಅಪ್ಪ, ಅಮ್ಮ ಎಂದು ಬಿಟ್ಟು ಹೋಗುತ್ತಾಳಲ್ಲ, ಆಗ ಯಾರಿರುತ್ತಾರೆ ಸಂತೈಸಲು?
ಅಮ್ಮನಿಗೆ (ಕೆಲವೊಮ್ಮೆ) ಹೇಳಿಕೊಳ್ಳಲಾಗದ ರಹಸ್ಯವಿದು, ಅಪ್ಪ ಕೇಳದ ಬೇಡಿಕೆಯಿದು. ಗೆಳೆಯರು? ಬಹುತೇಕ ಗೆಳೆಯರಿಗೆ ಇದು ತಮಾಸೆ, ಅಪಹಾಸ್ಯಕ್ಕೆ ವಸ್ತು. ಆತ ಅನುತ್ತೀರ್ಣನಾದಾಗ ಸೋಲನ್ನು ಒಪ್ಪಿಕೊಳ್ಳಬಲ್ಲ, ಯಾಕೆಂದರೆ, ಬಚ್ಚಿಡಲಾಗದ ಸತ್ಯವದು, ಉದ್ಯಮ, ವ್ಯಾಪಾರ, ವ್ಯವಹಾರಗಳ ಸೋಲು ಆತ ಸಮರ್ಥಿಸಿಕೊಳ್ಳಬಲ್ಲ. ಹಾಗಾಗಿ ಹೇಳಿಕೊಳ್ಳುತ್ತಾನೆ, ಕೇಳುತ್ತಾನೆ. ಆದರೆ, ಪ್ರೇಮವೈಫಲ್ಯವಿದೆಯಲ್ಲ. ಅದು ಹೇಳಲಾರದ,ಹೇಳಿಕೊಳ್ಳಲಾಗದ, ಸಹಿಸಿಕೊಳ್ಳಲಾಗದ ಅಸಾಧ್ಯಸಂಕಟ.
ಆತ ಕನಸು ಮನಸ್ಸಿನಲ್ಲೂ ಒಬ್ಬನೇ ಗೋಗರೆಯುತ್ತಾನೆ. ತನ್ನ ಅದೃಷ್ಟ ಹೀಗಳೆಯುತ್ತಾನೆ, ಉತ್ತರವೇ ಸಿಗದ ಪ್ರಶ್ನೆ, ಪರಿಹಾರವೇ ಇಲ್ಲದ ತೊಂದರೆ ಆತನಿಗೆ ಈಗೊಂದು ನಿರ್ಧಾರವಾಗಿ ಬಿಡಬೇಕು. ನಾನು ಅವಳು(ಅವನು) ಸೇರಿ ಬದುಕಬೇಕು, ಸಾಧ್ಯವಿಲ್ಲವಲ್ಲ. ನೀನು ಇನ್ನೊಬ್ಬನೊಂದಿಗೆ ಬದುಕಲೇಬಾರದು! ಅಂತಿಮವಾಗಿ ನಿನ್ನಿಂದ ತಿರಸ್ಕೃತನಾದ ನಾನೂ ಬದುಕಬಾರದು !
ಅದೃಷ್ಟದ ಅವಕಾಶವಾದರೆ…….
ಮತ್ತೆ ಮುಂದಿನ ಜನ್ಮದಲ್ಲಿ ಜೊತೆಯಾಗೋಣ, ಪ್ರೇಮಿಗಳಾಗಿ, ಪ್ರೇಮಿಸಿ ಮದುವೆಯಾದದಂಪತಿಗಳಾಗಿ!
ಊಹಿಸಿ, ಇಂಥ ನಿರ್ಧಾರಕ್ಕೆ ಬಂದವನ ಸ್ಥಿತಿ ಊಹಿಸಿ, ಆತನ ಪಾಲಿಗೆ ಸ್ನೇಹಿತರು, ಸಂಬಂಧಿಗಳು, ಹಿತೈಸಿಗಳು ಎಲ್ಲರೂ ಸತ್ತಿರುತ್ತಾರೆ!
ಆಗ, ಪುಸ್ತಕವೊಂದನ್ನು ಬಿಟ್ಟು ಬೇರೇನೂ ಕೈ ಹಿಡಿಯಲಾರದು.
ಬಾಳೇ ಬೇಡವೆನಿಸಿದವನಿಗೆ ಊರು, ಮನೆ, ಸಂಬಂಧ, ಸಹೃದಯರು? ಊಹೂಂ ಯಾರೂ ಬೇಕೆನಿಸುವುದಿಲ್ಲ. ಇಂಥ ಕೆಲವರು ಹುಡುಗರಿಗೆ ‘ನಾನೂ’ ಅಣ್ಣನಾಗುತ್ತೇನಿ.
ಮೊನ್ನೆ ಒಬ್ಬ ಅರೆಪರಿಚಿತ ಬಂದ, ಆತನೊಂದಿಗೆ ಆತನ ಎಳೆ ಹೆಂಡತಿ. ಆಕೆಯ ಮೇಲೆ ಗುರುತರ ಆರೋಪಗಳಿವೆಯಂತೆ! ನನಗೆ ಗೊತ್ತಿರುವ ಆತನವಿಚಾರಗಳಿಗಿಂತಲೂ ಕಡಿಮೆ ಆತ ಹೇಳಿದ.
ಆಕೆ, ‘ಇವರ ಬಗ್ಗೆ ಹೇಳಿದ್ರೆ….’ ಎನ್ನುತ್ತಾ ಕಣ್ಣೀರಿಟ್ಟಳು. ಅಲ್ಲಿ ವಿಶ್ವಾಸ, ಸ್ನೇಹ, ಪ್ರೀತಿ, ನಂಬಿಕೆಗಳೆಲ್ಲಾ ಮರೆಯುತ್ತಿರುವಂತೆ ಭಾಸವಾಯಿತು.
infact, ಆ ಹುಡುಗನಿಗೆ ಚಿಕ್ಕ ಆತ್ಮದ್ರೋಹ, ಆಘಾತವಾಗಿದೆ. ಆತ ಕೊಲೆ, ವಿಚ್ಚೇದನ, ವಿದಾಯಗಳ ಬಗ್ಗೆ ಎಲ್ಲಾ ಯೋಚಿಸಿದ್ದಾನೆ. ಆತನಿಗಾದ ವಿಶ್ವಾಸದ್ರೋಹ ಆತನನ್ನು ಹಿಂಡಿದೆ, ಆತ ಮುಂದೇನು? ಎನ್ನುವ ಸಂದಿಗ್ಧನೀರವತೆಯಲ್ಲಿಮುಳುಗಿದ್ದಾನೆ.
ಅವರ ಪ್ರೇಮ, ದಾಂಪತ್ಯಕ್ಕೆ ಸಾಕ್ಷಿಯಾದ ಮಗು ಅನ್ಯರೊಂದಿಗೆ ಅಮಾಯಕನಾಗಿ ನಿಂತಿದೆ. ಹಿರಿಯರೊಬ್ಬರ ‘ಬಾಟಮ್ ಐಟಮ್’ ಕೊಟ್ಟು ಸಾಂತ್ವನ ಹೇಳಿ ಕಳಿಸಿದೆ.
ಮತ್ತೆ ನನಗೆದುರಾದಾಗ ನೀವಿಬ್ಬರೂ ನಗುತ್ತಾ ವಿಶ್ ಮಾಡಬೇಕು ಎಂದು ಷರತ್ತು ವಿಧಿಸಿದೆ, ವಿಚ್ಚೇದನಕ್ಕಾಗಿ ಬಂದ ಎಳೆದಂಪತಿಗಳು ಪರಸ್ಪರ ನಕ್ಕರು, ಬಹುಶಃ ನನ್ನ ಕೆಲಸ ಮುಗಿದೇ ಹೋಯಿತು.
ಹುಡುಗ, ಹುಡುಗಿಯರಲ್ಲಿ ಅದೆಂಥದ್ದೊ ಅಸಹಾಯಕತೆ, ಅನುಮಾನ ವ್ಯಾಕುಲತೆ, ಅಸಮರ್ಥತೆ ಇರುತ್ತದೆ. ಅದನ್ನು ಹೇಳಿ ಅರ್ಥೈಸಿ, ಪರಿಹರಿಸಿಕೊಳ್ಳದಿದ್ದರೆ, ಚಿಂತೆಯಾಗಿಬದುಕನ್ನೇಸುಡತೊಡಗುತ್ತದೆ. ಮದುವೆಯಾದವರಿಗೆ ಅವರವರ ತಂದೆ-ತಾಯಿ, ಅಮ್ಮ-ಅಪ್ಪ, ಭಾವ-ಮಾವ ಹಿತೈಸಿ, ಯಾರ್ಯಾರೋ ಇರುತ್ತಾರೆ. ಆದರೆ, ಅವರಿಗೂ ತಮ್ಮ ಸ್ಥಿತಿಯಂತೆಯೇ ಅನೇಕರ ಬಗ್ಗೆ ಉಪೇಕ್ಷೆ, ಅಂತರ, ಹೇಳಿಕೊಳ್ಳಲಾರದ ಅಸೂಯೆ! ಎಲ್ಲವೂ ಜೊತೆಗೇ ಇರುತ್ತವೆ.
ಹಾಗಾಗಿ ಪ್ರೇಮ, ದಾಂಪತ್ಯ, ಸಂಬಂಧಗಳ ನಡುವೆ ಬಿರುಕು, ಗುಡುಗು-ಸಿಡಿಲುಗಳು ಬಂದಾಗ ತಂಪನ್ನೆರೆಯಲು ನಿಸ್ವಾರ್ಥಿ ದೇವರಂಥ ಒಬ್ಬ ನಿಷ್ಪಾಪಿಮನುಷ್ಯ! ಬೇಕು.
ಆತ, ಎದುರಿನವರ ದೌರ್ಭಲ್ಯ, ಅಸಹಾಯಕತೆ, ತೊಂದರೆ, ಅಂತರ, ಅಗೋಚರ ಕಷ್ಟ ಎಲ್ಲವನ್ನೂ ಕೇಳುವ ಕಿವಿಯಾಗಬೇಕು.
ಆತ ‘ನೀವಿಬ್ಬರೂ ದಿನಕ್ಕೆ ಕನಿಷ್ಟ ಎರಡು ಬಾರಿ ಹಲ್ಲು ಉಜ್ಜುತ್ತೀರಾ?’ ಎಂದು ಪ್ರಾರಂಭಿಸಿ, ನಿಮ್ಮ ವಿರಸಕ್ಕೆ ಕಾರಣ ನಿಮ್ಮ ಕೊಳೆಯತ್ತಿರುವ ಬಾಯಿಯಾ? ಯೋಚನೆಯಾ, ನಿಮ್ಮೊಳಗಿನ ಮಿತಿಯಾ, ಅಹಂ, ಏನೆಲ್ಲಾ ವಿಚಿತ್ರ ಕಾರಣಗಳು. ಉಪೇಕ್ಷಿತ ಬಾಯಿ, ತಲೆ, ಸಂಪರ್ಕ, ಸಂಬಂಧಗಳಂತೆ ಕೊಳೆಯಲು ಪ್ರಾರಂಭವಾಗಿದೆಯಾ? ಎಂದು ಕೇಳಿ, ತಿಳಿಯುವವನಾಗಿರಬೇಕು.
ಯಾಕೆಂದರೆ, ಸಂಬಂಧಗಳ ಸಾವಿರುತ್ತಾವಲ್ಲ, ಅವು ಸಾಯುವ ಮೊದಲೇ ನಾರತೊಡಗಿರುತ್ತವೆ. ನಾರುವ ಅಂಗಕ್ಕೆ ‘ಚಿಕಿತ್ಸೆ’ ಸಿಕ್ಕಿಬಿಟ್ಟರೆ ಆರಾಂ. ಇಲ್ಲದಿದ್ದರೆ ಗಲಾಟೆ, ವಿಚ್ಚೇದನ, ಸಾವು-ನೋವು, ಸರಿಪಡಿಸಬಹುದಾದುದನ್ನು ಸರಿಪಡಿಸಲಾರದ ಲೋಕ ಸಂತೈಸಬಹುದೆ?ಹೆಂಡತಿ,ಸಂಬಂಧಗಳ ಬಗ್ಗೆ ಮದುವೆಯಾದವರಿಗಿಂತ ಹೆಚ್ಚು ತಿಳಿದಿರುಯತ್ತಾರಂತೆ ಅವಿವಾಹಿತರು!.(march 17-2014)

App is good