

ಹಿರಿಯರ ಸಂಸ್ಮರಣೆ- ಸಭಾಭವನ ಉದ್ಘಾಟನೆ
ಸಾಂಸ್ಕøತಿಕ ಚಟುವಟಿಕೆಗಳು ಬದುಕಿಗೆ ಪೂರಕ
ನಮ್ಮ ಗ್ರಾಮೀಣ ಬದುಕಿನಲ್ಲಿ ಸಾಂಸ್ಕøತಿಕವಾಗಿ ಹೆಮ್ಮೆ ತರುವಂಥ ಅನೇಕ ವಿಶೇಷ ಕಲೆ, ನೃತ್ಯ,ಕ್ರೀಡೆಗಳಿವೆ. ಹಿರಿಯರು ಬೆಳೆಸಿದ ಹಳೆಯ ಸೊಗಡಿನ ವಿಶೇಷತೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಕೊರತೆ ಕಾಣುತ್ತಿದೆ. ಅಂಥ ಹಿರಿಯರ ಶ್ರಮ, ಸಾಧನೆಯನ್ನು ನೆನಪಿಸಿಕೊಳ್ಳುವದರ ಜೊತೆಗೆ ಈಗಿನ ಮತ್ತು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಕಶಿಗೆ – ಹೇಮಗಾರಿನಲ್ಲಿ ಶ್ರೀ ಭುವನೇಶ್ವರಿ ತಾಳಮದ್ದಳೆ ಕೂಟ, ಕೇಶವ ನಾರಾಯಣದೇವ ಟ್ರಸ್ಟ, ಅನಂತ ಯಕ್ಷಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಕೇಶವನಾರಾಯಣ ಸಭಾಮಂದಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅತಿಯಾದ ಮಳೆ, ಮಳೆಯ ಕೊರತೆ, ಕಾಡುಪ್ರಾಣಿಗಳ ಕಾಟ,ಮಾರುಕಟ್ಟೆ ಮತ್ತು ಬೆಲೆ ಸಮಸ್ಯೆ ಮುಂತಾದ ಹಲವು ಕಾರಣಗಳಿಂದ ಗ್ರಾಮೀಣ ಭಾಗದ ಬದುಕು ಕಷ್ಟಕರವೆನ್ನಿಸುತ್ತದೆ. ಪ್ರಕೃತಿಸಹಜವಾದ ಅವನ್ನು ಎದುರಿಸಿ ಬದುಕಬೇಕಾದ ಛಲ, ಧೈರ್ಯ ಬರಬೇಕಿದೆ. ಇಂದಿನ ಶಿಕ್ಷಣ ಪದ್ಧತಿ ಇಂಥ ಸ್ಥೈರ್ಯ ಕೊಡದೇ ಕೇವಲ ಅಂಕ ಗಳಿಕೆಗೆ ಸೀಮಿತವಾಗಿದೆ. ಶಿಕ್ಷಣ ಕ್ಷೇತ್ರ ಸರಿಪಡಿಸುವ ಜೊತೆಗೆ ಗ್ರಾಮೀಣ ಭಾಗಕ್ಕೆ ಆತ್ಕವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ನಗರ ವಲಸೆ ತಡೆದು ಗ್ರಾಮೀಣ ಬದುಕಿನ ಸಮೃದ್ಧಿಯನ್ನು ಪಡೆಯುವ ಪೂರಕ ವಾತಾವರಣ ಬರಬೇಕು. ಗ್ರಾಮೀಣ ಪ್ರದೇಶದ ಹಲವು ಮೂಲಭೂತ ಸೌಕರ್ಯದ ಅನುಷ್ಠಾನದ ಜೊತೆಗೆ ಸಾಂಸ್ಕøತಿಕವಾದ ಶಕ್ತಿಯನ್ನು ಉಳಿಸಿಕೊಳ್ಳಬೇಕಾದದ್ದು ಮುಖ್ಯ ಎಂದ ವಿಶ್ವೇಶ್ವರ ಹೆಗಡೆ ಸಭಾಮಂದಿರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಹಿರಿಯರ ಸಂಸ್ಮರಣೆ ಉದ್ಘಾಟಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ಎಲ್ಲ ಕ್ಷೇತ್ರಗಳಲ್ಲೂ ಪ್ರಸಿದ್ಧರ ನೆನಪು ಎಲ್ಲರಿಗೂ ಇರುತ್ತದೆ. ಆದರೆ ಆಯಾ ಕ್ಷೇತ್ರದಲ್ಲಿ ಅದರ ಬೆಳವಣಿಗೆಗೆ ಪೂರಕವಾಗಿ ಶ್ರಮಿಸಿದ,ಹಿರಿಯರ ನೆನೆಪು ಇತಿಹಾಸದಲ್ಲಿ ದಾಖಲಾಗುವದಿಲ್ಲ. ಯಕ್ಷಗಾನ ಕ್ಷೇತ್ರದಲ್ಲೂ ಯಕ್ಷಗಾನದ ಬೆಳವಣಿಗೆಗ ಅಸಾಮಾನ್ಯ ಕೊಡುಗೆ ನೀಡಿಯೂ ಅಪ್ರಿಸಿದ್ಧರಾದವರನ್ನು ಸ್ಮರಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ ಈ ಕಾರ್ಯಕ್ರಮ ಅನನ್ಯವಾದದ್ದು.ಯಕ್ಷಗಾನ ಕೇವಲ ಕಲೆಯಲ್ಲ, ಅದೊಂದು ವಿಶಿಷ್ಠ ಸಂಸ್ಕøತಿ. ಭಾರತೀ ಸಂಸ್ಕøತಿಯ ಜೀವಾಳ.ನಮ್ಮನ್ನ ಪರಕೀಯರಾಗದಂತೆ, ತೀರಾ ಆಧುನಿಕರಾಗದಂತೆ ತಡೆದ ಪೌರಾಣಿಕ ಕಥನಗಳ ಸತ್ವ ಯಕ್ಷಗಾನದಲ್ಲಿದೆ. ನಾವು ನಾವಾಗಿ ಉಳಿಯಲು, ಅಂತರಂಗ ಶುದ್ಧವಾಗಿರಲು ನಮ್ಮ ನೆಲದ ಕಲೆಗಳು ಸಹಕಾರಿ ತಾಂತ್ರಿಕ ಬೆಳವಣಿಗೆಗಳು ಮನುಷ್ಯನನ್ನು ರಾಕ್ಷಸನನ್ನಾಗಿಸುತ್ತವೆ. ಆರ್ಥಿಕವಾದ ಫಲಾಪೇಕ್ಷೆ ಪಡೆಯದೇ ಕಲೆಗಾಗಿ ಜೀವನವನ್ನೇ ಮುಡಿಪಿಟ್ಟ, ಹಿಂದಿನ ಕಾಲದ ಕಷ್ಟ, ಸಮಸ್ಯೆಗಳ ನಡುವೆ ಕಲೆಯನ್ನು ಉಳಿಸಿ, ಬೆಳೆಸಿದ ಹಿರಿಯರ ಸ್ಮರಣೆ ಕಾರ್ಯಕ್ರಮ ಎಲ್ಲಡೆಗೂ ನಡೆಯಬೇಕು ಎಂದು ಆಶಿಸಿದರು.
ಅಭ್ಯಾಗತರಾಗಿ ಪಾಲ್ಗೊಂಡ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಸಾಂಸ್ಕøತಿಕ ಚಟುವಟಿಕೆಗಳು ಬದುಕಿಗೆ ಪೂರಕವಾಗಿದ್ದು ಮಾನವೀಯತೆಯನ್ನು ಉಳಿಸುತ್ತವೆ ಎಂದರು. ಇನ್ನೊರ್ವ ಅಭ್ಯಾಗತ ವಕೀಲ ಜಿ.ಎಸ್.ಹೆಗಡೆ ಬೆಳ್ಳೆಮಡಿಕೆ ಶಿಕ್ಷಣ ಪಡೆದವರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಶಿಕ್ಷಣ ಪಡೆದವರಿಂದ ಅಂಥ ಜವಾಬ್ದಾರಿ ಮರುಪೂರಣವಾಗುವ ಅಗತ್ಯವಿದೆ ಎಂದರು. ಶಿ.ಪ್ರ.ಸಮಿತಿಯ ಗೌರವ ಕಾರ್ಯದರ್ಶಿ ಕೆ.ಐ.ಹೆಗಡೆ ತಾರಗೋಡ ಮಾತನಾಡಿದರು.
ಕೇಶವನಾರಾಯಣದೇವ ಟ್ರಸ್ಟನ ಅಧ್ಯಕ್ಷ ವೇ|ಕೃಷ್ಣ ಭಟ್ಟ ಅಡಿವತೋಟ ಅಧ್ಯಕ್ಷತೆವಹಿಸಿದ್ದರು.
ಕೇಶವನಾರಾಯಣದೇವ ಟ್ರಸ್ಟ ಕಾರ್ಯದರ್ಶಿ, ಕಾರ್ಯಕ್ರಮ ಸಂಘಟಕ ಜಿ.ಕೆ.ಭಟ್ಟ ಕಶಿಗೆ ಸ್ವಾಗತಿಸಿದರು. ಪ್ರೊ|ಎಂ.ಕೆ.ನಾಯ್ಕ ನಿರೂಪಿಸಿದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






