108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,

108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,
ಇದು ಕೇವಲ ಸಿದ್ಧಾಪುರದ ಸಮಸ್ಯೆಯಷ್ಟೇ ಅಲ್ಲ?
ಸಾರ್ವಜನಿಕರ ತುರ್ತು ರಗಳೆಗಳಿಗೆ ಸ್ಫಂದಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ತುರ್ತು ಆರೊಗ್ಯ ಸೇವೆಗೆ ವಾಹನಗಳ ನಿರ್ವಹಣೆಯ ಸಮಸ್ಯೆ ಎದುರಾಗಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ರಾಜ್ಯದ ಮೂಲೆಮೂಲೆಗೆ ತುರ್ತು ಆರೋಗ್ಯ ಸೇವೆ ದೊರಕಿಸಲು 108 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇಂಥ 108 ವಾಹನಗಳು ತಾಲೂಕಿಗೆ ಕನಿಷ್ಟ 1ರಿಂದ ಪ್ರಾರಂಭವಾಗಿ ಕೆಲವು ತಾಲೂಕುಗಳಲ್ಲಿ 4-5 ವಾಹನಗಳೂ ಕಾರ್ಯನಿರ್ವಹಿಸುತ್ತಿವೆ. ಈ ಸೇವೆ ಸರ್ಕಾರದ ನಿರ್ವಹಣೆ ಮತ್ತು ಜವಾಬ್ಧಾರಿಯಾದರೂ ಕರ್ನಾಟಕದ 108 ನಿರ್ವಹಣೆ ಜವಾಬ್ದಾರಿಯನ್ನು ಆಂಧ್ರ ಮೂಲದ ಜಿ.ವಿ.ಕೆ. ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತದೆ.
ಜಿ.ವಿ.ಕೆ. ತಾಲೂಕಿಗೆ ಕನಿಷ್ಟ ಒಂದು 108 ವಾಹನ ಅದರ ಜೊತೆಗೆ ಒಂದೊಂದು ವಾಹನಕ್ಕೆ 2ರಿಂದ 5 ಜನ ಸಿಬ್ಬಂದಿಗಳ ಮೂಲಕ ತುರ್ತು ಆರೋಗ್ಯ ಸೇವೆ ಒದಗಿಸುತ್ತದೆ. ಹೀಗೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳ ಸಂಖ್ಯೆ 100 ರಷ್ಟಿದ್ದರೆ ಇದರ ನಿರ್ವಹಣೆಯ ಸಿಬ್ಬಂದಿಗಳು ಸರಿಸುಮಾರು 500 ಜನ. ಹೀಗೇ ನೂರಾರು ವಾಹನಗಳು ಸಿಬ್ಬಂದಿಗಳ ಕೆಲಸದ ಪರಿಣಾಮವಾಗಿ ದೊರೆಯುತ್ತಿರುವ ತುರ್ತು ಆರೋಗ್ಯ ಸೇವೆ ಒದಗಿಸುವ ವಾಹನಗಳೇ ಸುಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಆಘಾತಕಾರಿ ಅಂಶವಾದರೂ ವಾಸ್ತವ ಸತ್ಯ.
ಸರಳ ಉದಾಹರಣೆಯೆಂದರೆ ಸಿದ್ದಾಪುರದ ಏಕೈಕ 108 ವಾಹನಕ್ಕೆ ಪ್ರತಿ 30 ಸಾವಿರ ಕಿ.ಮೀ.ಗಳಿಗೆ ಚಕ್ರದ ರಬ್ಬರ್ ಟೈರ್ ಗಳನ್ನು ಬದಲಿಸಬೇಕು. ಆದರೆ ಇಲ್ಲಿಯ 108 60ಸಾವಿರ ಕಿ.ಮೀ.ಕ್ರಮಿಸಿದ್ದರೂ ಅದರ ಟೈರ್ ಬದಲಾಯಿಸಿಲ್ಲ. ಸಿದ್ಧಾಪುರದಂಥ ಬಹುದೂರದ ಗುಡ್ಡಗಾಡು ಪ್ರದೇಶ ಸಂಚರಿಸುವ 108 ಕತೆಯೇ ಹೀಗಾದರೆ ಮಹಾನಗರ, ದೊಡ್ಡನಗರಗಳಲ್ಲಿ ಸಂಚರಿಸುವ ವಾಹನಗಳ ಸ್ಥಿತಿ ಹೇಗಿರಬೇಡ.
ಕೆಲವು ತಾಲೂಕುಗಳಲ್ಲಿ ತಾಲೂಕಿಗೆ 2-3 108 ವಾಹನಗಳಿವೆ. ಸಿದ್ದಾಪುರ ಸೇರಿದಂತೆ ಏಕೈಕ 108 ವಾಹನ ಹೊಂದಿರುವ ಕೆಲವು ತಾಲೂಕುಗಳಲ್ಲಿ 108 ತುರ್ತು ಸೇವೆ ಸಿಗುವುದೂ ದುಸ್ತರವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದು 108 ಸಂಖ್ಯೆಗೆ ಕರೆಮಾಡಿ ಈ ತೊಂದರೆ ಕೇಳಿದರೆ ಸಂಬಂಧಿಸಿದವರಿಗೆ ಕೇಳಿ ಉತ್ತರ ನೀಡುತ್ತೇವೆ ಎನ್ನುವ ಸಮಜಾಯಿಸಿ ನೀಡುತ್ತಾರೆ.
ಈ ಸೇವೆಯ ನಿರ್ವಹಣೆಯ ಜವಾಬ್ದಾರಿಯ ತಾಲೂಕಾ ಆರೋಗ್ಯಾಧಿಕಾರಿಗಳು 108 ವಾಹನದ ಟೈರ್ ಸಮಸ್ಯೆ ಬಗ್ಗೆ ಸಂಬಂಧಿಸದವರ ಗಮನ ಸೆಳೆಯಲಾಗಿದೆ. ಆ ತೊಂದರೆ ಬಗೆಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ಸಂಬಂಧಿಸಿದವರಿಂದ ದೊರೆತಿದೆ ಎನ್ನುತ್ತಾರೆ.
ಸರ್ಕಾರ,ಸರ್ಕಾರೇತರ ಸಂಸ್ಥೆ, ಅಧಿಕಾರಿಗಳು, ಸಿಬ್ಬಂದಿಗಳು ಹೀಗೆ ಅನೇಕ ಸ್ಥರವಿನ್ಯಾಸದ ಈ ವ್ಯವಸ್ಥೆಯಲ್ಲಿ ಬಾಧಿತರು ಮಾತ್ರ ಅಸಹಾಯಕ ಜನಸಾಮಾನ್ಯರು. ಈ ಬಗ್ಗೆ ಜನಪ್ರತಿನಿಧಿಗಳ ದಿವ್ಯ ಮೌನದ ಹಿಂದೆ ಸಹಸ್ರ ಕಾರಣಗಳಿರಬಹುದು ಆದರೆ ಸಾರ್ವಜನಿಕರ ಸಮಸ್ಯೆ ಕೇಳದ,ಅರಿಯದ ಜನಪ್ರತಿನಿಧಿಗಳ ಜಾಣ ಮೌನದ ಹಿಂದೆ ಮತದಾರರ ತಪ್ಪಿರುವುದೂ ಅಷ್ಟೇ ಸತ್ಯ. ಹಾಗಾಗಿ ಸಿದ್ಧಾಪುರ,ಉತ್ತರಕನ್ನಡ,ರಾಜ್ಯದ ಜನರ 108ರ ನೂರೆಂಟು ಸಮಸ್ಯೆ ಬಗೆಹರಿಯಬೇಕಿರುವುದಷ್ಟೆ ಈಗಿನ ತುರ್ತು ಅವಶ್ಯಕತೆ.

ರೈತರ ಮಕ್ಕಳೇಕೆ ಡಿ.ಸಿ.ಯಾಗಬಾರದು?
ಕೆ.ಎ.ಎಸ್. ಪಾಸಾದ ಕೃಷಿ ಅಧಿಕಾರಿ ‘ದೇವರಾಜ್ ಆರ್’ರ ಯಶೋಗಾಥೆ
ಕಾಗೋಡು ಸತ್ಯಾಗ್ರಹದ ಕಹಳೆ ಇಡೀ ದೇಶದ ದುಡಿಯುವ ಕೈಗಳಿಗೆ ಭೂಮಿಯ ಮಾಲಿಕತ್ವ ನೀಡಿದ ಮನ್ವಂತರದ ನೆಲಗಟ್ಟು. ಶಿವಮೊಗ್ಗ ಜಿಲ್ಲೆ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ರೈತ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜವಾದಿ ಚಿಂತಕರು, ಹಲವಾರು ಮೇರು ಸಾಧಕರ ತವರು ನೆಲ. ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟ ಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಗಳಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್ ಇವರೇ ಮೊನ್ನೆ ಬಿಡುಗಡೆಯಾದ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾದ ರೈತಪುತ್ರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *