

ಕಳೆದ 20 ದಿವಸಗಳಿಂದ ಕೋವಿಡ್ ಪ್ರಕರಣಗಳಿಲ್ಲದೆ ಗ್ರೀನ್ ಜೋನ್ ಆಗುವತ್ತ ಹೆಜ್ಜೆ ಇಟ್ಟಿದ್ದ ಉತ್ತರ ಕನ್ನಡ ಜಿಲ್ಲೆಗೆ ಇಂದಿನ ಹೊಸ ಪ್ರಕರಣ ತಲೆನೋವು ಉಂಟುಮಾಡಿದೆ. ಜಿಲ್ಲೆಯ 12 ತಾಲೂಕು ಗಳಿಗೆ ದಿಗ್ಭಂಧ ನ ವಿಧಿಸಿದ್ದ ಭಟ್ಕಳ ದಲ್ಲಿ 18 ವರ್ಷದ ಯುವತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿ ಸಹಜಸ್ಥಿತಿಯತ್ತ ಮರಳುತ್ತಿದ್ದ ಉತ್ತರ ಕನ್ನಡವನ್ನು ಮತ್ತೆ ಬಿಗು ಮಾಡಿದಂತಾಗಿದೆ. ಹೋಟೆಲ್ ಉದ್ಯಮಿಯೊಬ್ಬರ ಮಗಳಿಗೆ ಕೋವಿಡ್ ಸೋಂಕು ತಗುಲಿಸಿದ ಸಂಪರ್ಕ ಚರಿತ್ರೆ ಒಂದು ತಿಂಗಳ ಹಿಂದಿನದ್ದಾಗಿದೆ. ಭಟ್ಕಳದ ಹೊಟೆಲ್ ಉದ್ಯಮಿಯೊಬ್ಬರ ಪುತ್ರಿ ನಾಲ್ಕು ಜನರೊಂದಿಗೆ ಮಾರ್ಚ್ ಕೊನೆಯ ವಾರ ಮಂಗಳೂರಿನ ಆಸ್ಫತ್ರೆಗೆ ತೆರಳಿದ್ದರು. ಈ ನಾಲ್ವರಲ್ಲಿ ಒಬ್ಬರು ಏಫ್ರಿಲ್ ನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರೂ ಅವರು ಕೋವಿಡ್ ಸೋಂಕಿತೆ ಎಂಬುದು ಸ್ಪಸ್ಟವಾಗಿಲ್ಲ. ಈಗ ಕರೋನಾ ಸೋಂಕು ದೃಢಪಟ್ಟ ಯುವತಿ ಇರುತಿದ್ದ ಮನೆಯಲ್ಲಿ 7 ಜನರು ಇರುತಿದ್ದರು. ಇವರ ರಕ್ತದ ಮಾದರಿಗಳನ್ನೂ ಪರೀಕ್ಷೆಗೆ ಕಳಿಸಿದ್ದು ಈ ಪ್ರಕರಣ ಭಟ್ಕಳದಲ್ಲಿ ಭೀತಿ ಹೆಚ್ಚಿಸಿದ್ದರೆ, ಉತ್ತರಕನ್ನಡ ಜಿಲ್ಲೆಯ ಸ್ಥಿತಿಯನ್ನು ಬದಲಾಯಿಸಿದೆ. ಜಿಲ್ಲಾಡಳಿತ ಭಟ್ಕಳದಲ್ಲಿ ಬೀಡುಬಿಟ್ಟಿದ್ದು ತಕ್ಷಣ ಮತ್ತು ಮುಂಜಾಗೃತಾ ಕ್ರಮಗಳನ್ನು ಮುತುವರ್ಜಿಯಿಂದ ನಿರ್ಹಿವಸಿದೆ ಎಂದು ಸ್ಥಳಿಯ ಮೂಲಗಳು ಸ್ಪಸ್ಟಪಡಿಸಿವೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






