ರೋಗ ನಿರೋಧಕ ಶಕ್ತಿ ವರ್ಧನಗೆ ಸಹಾಯ ಮಾಡುವ ಎರಡು ಆಹಾರ ಪದಾರ್ಥಗಳು

ಮಾನವ ತಾನು ತಿನ್ನುವ ಆಹಾರ ಹಾಗೂ ಆರೋಗ್ಯ ಪರಸ್ಪರ ಸಂಬಂಧಹೊಂದಿದೆ. ಆಹಾರ ಜೀರ್ಣವಾಗುವ ಕ್ರಿಯೆ, ನರಮಂಡಲ, ದುಗ್ಧರಸ ವ್ಯವಸ್ಥೆ ಎಲ್ಲವೂ ಸಹ ಒಂದಕ್ಕೊಂದು ಕೊಂಡಿಯಾಗಿದೆ.  ದುಗ್ಧರಸ ವ್ಯವಸ್ಥೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿದೆ, ಆದ್ದರಿಂದ ಕೊರೋನಾವೈರಸ್ ಹಾವಳಿಯಿರುವ ಈ ಕಾಲಘಟ್ಟದಲ್ಲಿ  ಇದು ಇನ್ನೂ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ.

Source : The New Indian Express

ಮಾನವ ತಾನು ತಿನ್ನುವ ಆಹಾರ ಹಾಗೂ ಆರೋಗ್ಯ ಪರಸ್ಪರ ಸಂಬಂಧಹೊಂದಿದೆ. ಆಹಾರ ಜೀರ್ಣವಾಗುವ ಕ್ರಿಯೆ, ನರಮಂಡಲ, ದುಗ್ಧರಸ ವ್ಯವಸ್ಥೆ ಎಲ್ಲವೂ ಸಹ ಒಂದಕ್ಕೊಂದು ಕೊಂಡಿಯಾಗಿದೆ.  ದುಗ್ಧರಸ ವ್ಯವಸ್ಥೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿದೆ, ಆದ್ದರಿಂದ ಕೊರೋನಾವೈರಸ್ ಹಾವಳಿಯಿರುವ ಈ ಕಾಲಘಟ್ಟದಲ್ಲಿ  ಇದು ಇನ್ನೂ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ. ತೂಕ ಹೆಚ್ಚಾಗುವುದು, ಕಿಬ್ಬೊಟ್ಟೆಯ ಬೊಜ್ಜು ಹಾಗೂ ರೋಗನಿರೋಧಕ ಶಕ್ತಿಯ ಕುಂದುವಿಕೆ ಒತ್ತಡದ ಲಕ್ಷಣವಾಗಿರಬಹುದು ಎನ್ನುವುದನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು.

ದೇಹದ ನೈಸರ್ಗಿಕ ಒತ್ತಡದ ಪ್ರತಿಕ್ರಿಯೆ ಅನಪೇಕ್ಷಿತ ಅಥವಾ ಹಾನಿಕಾರಕವಲ್ಲ. ವಾಸ್ತವವಾಗಿ, ಇದು ಜೀವಿಸಬಲ್ಲ ಪ್ರವೃತ್ತಿಯ ನಿರ್ಣಾಯಕ ಅಂಶ.  ಆದರೆ ಇದೀಗ ಆಧುನಿಕ ಜೀವನ ಶೈಲಿಯಲ್ಲಿ ನಾವು ನಿರಂತರ ಒತ್ತಡಕ್ಕೆ ಸಿಲುಕುತ್ತೇವೆ.  ಈ ಅತಿಯಾದ ಮತ್ತು ನಿರಂತರ ಒತ್ತಡದ ಪ್ರತಿಕ್ರಿಯೆಯೇ ಹಾನಿಕಾರಕವಾಗಿದೆ. ಒತ್ತಡ-ಮುಕ್ತ ವಾಗಿದ್ದೇನೆ ಎನ್ನುವ ಯಾರೊಬ್ಬರನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ.  ಅದಕ್ಕಾಗಿಯೇ ಒತ್ತಡವನ್ನು ನಿರ್ವಹಿಸಲು ಕಲಿಯುವುದು ನಮ್ಮ ದಿನಚರಿಯ ಒಂದು ಭಾಗವಾಗಬೇಕು.

ಒತ್ತಡವನ್ನು ನಿವಾರಿಸಲು ಧ್ಯಾನ ತಂತ್ರಗಳನ್ನು ತಿಳಿದಿರಬೇಕು. ಆದರೆ ಅದನ್ನು ಪ್ರಾರಂಭಿಸುವುದು, ದಿನನಿತ್ಯ ತಪ್ಪದೇ ಮುಂದುವರಿಸಿಕೊಂಡು ಹೋಗುವುದೇನೂ ಸುಲಭದ ಮಾತಲ್ಲ. ಧ್ಯಾನ ತಂತ್ರಗಳೊಂದಿಗೆ, ದೇಹದ ಅತಿಯಾದ ಒತ್ತಡದ ಪ್ರತಿಕ್ರಿಯೆಯನ್ನು ತಗ್ಗಿಸಬಲ್ಲ ಆಹಾರದ ಬಗ್ಗೆ ಇಂದಿಲ್ಲಿ ನಾವು ಗಮನ ಹರಿಸೋಣ. ಅರಿಶಿಣ ಹಾಗೂ ತುಳಸಿ ಈ ಎರಡು ಈ ಹೊತ್ತಿನಲ್ಲಿ ನಮಗೆ ಪ್ರಧಾನವಾಗಿ ಕಾಣಿಸುತ್ತದೆ.

ಅರಿಶಿನವು ಅನೇಕ ಕಾಯಿಲೆಗಳ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯ ಹೊಂದಿದೆ. ಅರಿಶಿ ನದ ಕೆಲ ಅಂಶಗಳು ಳು ದೇಹದಲ್ಲಿನ ಕಾರ್ಟಿಸೋಲ್ (ಒತ್ತಡ-ಪ್ರೇರಿತ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದುಗ್ಧರಸ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಅರಿಶಿನದ ಬಗ್ಗೆ ಸಾಂಪ್ರದಾಯಿಕ ತಿಳುವಳಿಕೆಯಂತೆ ಅದರ ಸಾರಗಳು ಪ್ರತಿಕಾಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಆದ್ದರಿಂದ ದೇಹದಲ್ಲಿನ ಸೋಂಕಿನ ದಾಳಿಯ ವಿರುದ್ಧ ಹೋರಾಡುತ್ತವೆ ಎಂಬುದು ವಿಜ್ಞಾನದಿಂದ ಕೂಡ ಸಾಬೀತಾಗಿದೆ. ಅರಿಶಿನವು ದುಗ್ಧರಸ ವ್ಯವಸ್ಥೆಯ ಮೂಲಕ ವೈರಾಣುಗಳ ಹರಿವನ್ನು ತಡೆಯುವ ಮೂಲಕವೂ ಕಾರ್ಯನಿರ್ವಹಿಸುತ್ತದೆ. 

ಅರಿಶಿನ ಪುಡಿ ಸಾಂಪ್ರದಾಯಿಕ ಭಾರತೀಯ ಅಡುಗೆಯ ಒಂದು  ಭಾಗವಾಗಿದ್ದು ಇದರ ಹೆಚ್ಚಿನ ಪ್ರಮಾಣ ಒತ್ತಡ ತಗ್ಗಿಸುವುದಕ್ಕೆ ಸಹಕಾರಿಯಾಗಿದೆ.  ಅದಕ್ಕಾಗಿ ನೀವು ಅರಿಶಿನ ಪುಡಿ, ತುಪ್ಪ ಮತ್ತು ಕರಿಮೆಣಸಿನೊಂದಿಗೆ ತಯಾರಿಸಿದ ಪೇಸ್ಟ್ ಅನ್ನು ಸೇವಿಸಬಹುದು. ಪಾಶ್ಚಾತ್ಯರಿಂದ ಸಾಕಷ್ಟು ಹೆಸರಾದ  Turmeric latte, ಸೇವನೆ ಅದರ ಇನ್ನೊಂದು ರೂಪವಾಗಿದೆ. 

ತುಳಸಿ ನಮಗೆ ಪರಿಚಿತವಾಗಿರುವ ಮತ್ತೊಂದು ಮೂಲಿಕೆ. ಈ ಸಸ್ಯವು ದೇಹದಲ್ಲಿ ನಿರ್ವಹಿಸುವ ಅನೇಕ ಪಾತ್ರದ ಮಹತ್ವ ನಮಗೆ ಅರಿವಿದೆ.ಒತ್ತಡಕ್ಕೆ ಒಳಗಾದಾಗ ದೇಹವು ಬಿಡುಗಡೆ ಮಾಡುವ ಅತ್ಯಂತ ಹಾನಿಕಾರಕ ಅಣುಗಳನ್ನು ತಡೆಯಬಲ್ಲ ಶಕ್ತಿ ತುಳಸಿಗಿದೆ. ಅರಿಶಿನದಂತೆ, ತುಳಸಿಯು ದೇಹದ ಮೇಲೆ ಆಗುವ ಒತ್ತಡದ ದುಷ್ಪರಿಣಾಮವನ್ನು ತಗ್ಗಿಸಲಿದೆ. ನಿದ್ರೆಯು ಒತ್ತಡದಿಂದ ಪಾರಾಗುವ ಮತ್ತೊಂದು ಪ್ರಮುಖ ಮಾರ್ಗವಾಗಿದೆ. ತುಳಸಿಯ ನಿಯಮಿತ ಸೇವನೆ – ತಾಜಾ ಎಲೆಗಳನ್ನು ಪಾನೀಯಗಳಲ್ಲಿ ಸೇರ್ಪಡಿಸುವುದು ಅಥವಾ ಕಷಾಯ ತಯಾರಿಯಲ್ಲಿ ಬಳಕೆ  ಇದು ವಿಶ್ರಾಂತಿ ನಿದ್ರೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆಗೆ ಸಹಕಾರಿಯಾಗಿದೆ. 

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *