ಸಚಿವಕಾಂಕ್ಷಿಗಳಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ: 4 ಶಾಸಕರಿಂದ ರಿಜೆಕ್ಟ್

ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ…

yeddyurappa

ಬೆಂಗಳೂರು: ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ನೇಮಕಕ್ಕೆ ಹಲವರು ಅಸಮಾಧಾನಗೊಂಡಿದ್ದು, 3 ಶಾಸಕರು ಹುದ್ದೆ ತಿರಸ್ಕರಿಸಿದ್ದಾರೆಂದು ತಿಳಿದುಬಂದಿದೆ. 

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಹಂಚಿಕೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ. ನಿಗಮ ಮಂಡಳಿಗೆ ಆಯ್ಕೆಯಾದ ಕೆಲ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವರು ಮುಖ್ಯಮಂತ್ರಿಗಳನ್ನೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. 

ಚಿತ್ರದುರ್ಗದ ಬಿಜೆಪಿ ಹಿರಿಯನಾಯಕ ಜಿಹೆಚ್.ತಿಪ್ಪಾರೆಡ್ಡಿಯವರು ಸಾರ್ವಜನಿಕವಾಗಿಯೇ ನೇಮಕಾತಿಯನ್ನು ತಿರಸ್ಕರಿಸಿದ್ದು, ಇದು ನಮಗೆ ಮಾಡಿದ ಅವಮಾನವೆಂದು ತಿಳಿಸಿದ್ದಾರೆ. 

ನಾನು ಆರು ಬಾರಿ ಶಾಸಕನಾದವರು. ನನಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಬೇಕಿಲ್ಲ. ನಾನು ಸಚಿವ ಸ್ಥಾನಕ್ಕೆ ಅರ್ಹನಾದ ವ್ಯಕ್ತಿ. ಇದು ನನ್ನ ಹಕ್ಕು ಕೂಡ ಹೌದು. ಸಂಜೆ ಮುಖ್ಯಮಂತ್ರಿಗಳು ಖುದ್ದು ಕರೆ ಮಾಡಿದ್ದು, ನೇಮಕದ ಆದೇಶ ತಡೆ ಹಿಡಿದಿರುವುದಾಗಿ ಹೇಳಿದ್ದಾರೆಂದು ತಿಪ್ಪಾರೆಡ್ಡಿ ತಿಳಿಸಿದ್ದಾರೆ. 

ಶಾಸಕ ಪ್ರೀತಂ ಗೌಡರನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷರಾಗಿ ಹಾಗೂ ದತ್ತಾತ್ರೇಯ ಪಾಟೀಲ್ ರೆವೂರ್ ಅವರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಅಸಮಾಧಾನವನ್ನು ವೈಯಕ್ತಿಕವಾಗಿ ಹಾಗೂ ನೇರವಾಗಿ ಮುಖ್ಯಮಂತ್ರಿಗಳ ಬಳಿಯೇ ಹೇಳಲು ನಿರ್ಧರಿಸಿದ್ದಾರೆ. 

ನಿಜಕ್ಕೂ ಈ ಬೆಳವಣಿಗೆ ಆಶ್ಚರ್ಯವನ್ನು ತಂದಿದೆ. ಇಂತಹ ದೊಡ್ಡ ಜವಾಬ್ದಾರಿ ನನಗೆ ಬೇಡ. ಇದಕ್ಕೆ ಮುಖ್ಯಮಂತ್ರಿಗಳು ಬೇರೆ ಯಾರನ್ನಾದರೂ ನೇಮಕ ಮಾಡಲಿ ಎಂದಿದ್ದಾರೆ. 

ಮಾಜಿ ಸಚಿವ ಹರತಾಳ್ ಹಾಲಪ್ಪ, ಎಂ.ಪಿ ಕುಮಾರಸ್ವಾಮಿ, ರಾಜು ಗೌಡ, ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಕಾಳಪ್ಪ ಬಂಡಿಯವರೂ ಕೂಡ ನೇಮಕಾತಿಗೆ ಅಸಮಾಧಾನಗೊಂಡಿದ್ದಾರೆ. ಆದರೆ, ಮೌನದಿಂದಿರುವ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

ಆದರೆ. ಎಂ.ಚಂದ್ರಪ್ಪ, ಅರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಜೊತೆಗೆ ಕೆಲಸ ಮಾಡಲು ಯಾವುದೇ ಸ್ಥಾನ ನೀಡಿದರೂ ಕೆಲಸ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ. 

ಈ ನಡುವೆ 20 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡವುದರಿಂದ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ. ಸಿಪಿ ಯೋಗೇಶ್ವರ್ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಕೊಂಚ ನಿರಾಳ ಎದುರಾದಂತಾಗಿದೆ. 

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ...

ರಾಜೀವ್ ಮೈದಾನಉಳಿಸಲು ಸೂಚನೆ

ಸಿದ್ಧಾಪುರ ‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ ​ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ...

Latest Posts

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ ಅಗಲಿದ ನಾಯ್ಕರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಕೃಷಿ, ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದಿದ್ದರು. ಕೇವಲ ನಾಲ್ಕನೇ ತರಗತಿಓದಿದ್ದ ಮಾಸ್ತ್ಯಾನಾಯ್ಕ ಯಕ್ಷಗಾನಕಲಾವಿದರಾಗಿ, ಹಲಗೇರಿ ಗ್ರಾಪಂ ಮತ್ತು vss ಸದಸ್ಯರಾಗಿಸೇವೆಸಲ್ಲಿಸಿದ್ದ ನಾಯ್ಕರು ಗ್ರಾಮಅರಣ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *