ಸಿಎಂ ಆಗಿ ಸುದೀರ್ಘ ಕಾಲ ರಾಜ್ಯದ ಆಡಳಿತ ನಡೆಸುವ ಹೆಬ್ಬಯಕೆ ಹೊಂದಿದ್ದ ದೇವೇಗೌಡರಿಗೆ ಪ್ರಧಾನಿಯಾಗಲು ಮನಸ್ಸಿರಲಿಲ್ಲ!

ಅದು 1996ನೇ ಇಸವಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ದೇವೇಗೌಡ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

HD Devegowda

ಬೆಂಗಳೂರು: ಅದು 1996ನೇ ಇಸವಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ದೇವೇಗೌಡ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಆದರೆ ಕರ್ನಾಟಕ ರಾಜಕೀಯದಲ್ಲಿ ಮುಂದುವರಿಯಲು , ತಮ್ಮ ವೃತ್ತಿಜೀವನವನ್ನು ರಾಜ್ಯದಲ್ಲೇ ಮುಂದುವರಿಸಲು ಬಯಸಿದ್ದ ಅವರು ಉನ್ನತ ಹುದ್ದೆಯನ್ನು ಅಲಂಕರಿಸಲು ಹಿಂಜರಿದಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆತ್ಮ ಚರಿತ್ರೆ ಬರೆದಿದ್ದು, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪಬ್ಲಿಷ್ ಮಾಡಿರುವ ಫರ್ರೋಸ್ ಇನ್ ಎ ಫೀಲ್ಡ್: ದಿ ಅನ್ ಎಕ್ಸ್‌ಪ್ಲೋರ್ಡ್ ಲೈಫ್ ಆಫ್ ಎಚ್‌ಡಿ ದೇವೇಗೌಡ ಎಂಬ ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ.

ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರಲ್ಲಿ ಒಂದು ವಿನಂತಿ ಮಾಡಿಕೊಂಡಿದ್ದರು.  ಸರ್,  ನಾನು ಮುಖ್ಯಮಂತ್ರಿಯಾಗಿ 2 ವರ್ಷ ಕಳೆದಿಲ್ಲ, ನನ್ನ ರಾಜಕೀಯ ವೃತ್ತಿ ಜೀವನ ಥಟ್ ಎಂದು ಮುಗಿದು ಹೋಗುತ್ತದೆ, ಏಕೆಂದರೇ ಕಾಂಗ್ರೆಸ್ ಪಕ್ಷ ನಮಗೆ ಹೆಚ್ಚು ಕಾಲ ಸರ್ಕಾರ ನಡೆಸಲು ಬಿಡುವುದಿಲ್ಲನಿಮ್ಮಂತೆ ನಾನು ಇರುತ್ತೇನೆ, ನಾನು ಕರ್ನಾಟಕವನ್ನು ಹಲವು ವರ್ಷಗಳ ಆಳಲು ಬಯಸುತ್ತೇನೆ ಎಂದು ಹೇಳಿದ್ದರಂತೆ.

1994 ರಲ್ಲಿ ರಾಜ್ಯದ ಸಿಎಂ ಸ್ಥಾನ ಅಲಂಕರಿಸುವ ಸಲುವಾಗ ದೇವೇಗೌಡರು ಸುದೀರ್ಘ ಕಾಲಗಳ ಹೋರಾಟ ನಡೆಸಿದ್ದರು, ರಾಜಕೀಯದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅರಸಿ ಬಂದಿತ್ತು. 1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು, ತಮ್ಮ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ನಂಂತರ, ದೇವೇಗೌಡರ ಜನತಾ ದಳ ಪಕ್ಷವೂ ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಯುನೈಟೆಡ್ ಫ್ರಂಟ್ ನಾಯಕರು ತಮ್ಮ ಹೆಸರನ್ನು ಸ್ಥಾನಕ್ಕೆ ಪ್ರಸ್ತಾಪಿಸಿದಾಗ ದೇವೇಗೌಡರು ಆಘಾತಕ್ಕೊಳಗಾದರು.  ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ದೀರ್ಘಕಾಲದವರೆಗೆ ಮುಂದುವರಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅವರ ಊಹೆ ಸರಿ ಎಂದು ಅವರ ರಾಜಕೀಯ ಚಾಣಾಕ್ಷತೆ ಸಾಬೀತು ಪಡಿಸಿತ್ತು. (kpc)

ಕನ್ನಡಿಗರ ಯುವರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಭಾವಪೂರ್ಣ ಶೃದ್ದಾಂಜಲಿ

  ಯುವರತ್ನ ಪುನಿತ್ ರಾಜಕುಮಾರ ಅಕಾಲಿಕ ಸಾವು ಇಡಿ ದೇಶವೇ ತಲ್ಲಣಿಸುವಂತೆ ಮಾಡಿದೆ.  ಅವರೊಬ್ಬ ಕೇವಲ ನಟರಾಗಿರಲಿಲ್ಲ, ಮಾನವೀಯತೆಯ ಸಾಕಾರಮೂರ್ತಿಯಾಗಿದ್ದರು. ಹಲವಾರು ಅನಾಥಾಶ್ರಮಗಳು, ಅನಾಥ ಮಕ್ಕಳ ನೇತಾರ, ಸುಮಾರು1800  ಅನಾಥ ಹೆಣ್ಣು ಮಕ್ಕಳ ಆಶಾಕಿರಣ. ಅದೆಷ್ಟೋ ಉಚಿತ ಶಾಲೆಗಳನ್ನು ನಡೆಸುವ ಶೈಕ್ಷಣಿಕ ಪರಿವರ್ತನಾ ಶೀಲ ವ್ಯಕ್ತಿಯಷ್ಟೇ ಅಲ್ಲ ,ಶಕ್ತಿಯಾಗಿದ್ದರು.
ಇಂತಹ ಮಹಾನ್ ಮಾನವೀಯ ನಟನನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರ ಕೆಲವು ಆದರ್ಶ ಮಾನವೀಯ ಗುಣಗಳನ್ನಾದರೂ ನಾವೆಲ್ಲ ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸೋಣ ಎಂದು ಸಾಹಿತಿ, ಶಿಕ್ಷಕ ಗೋಪಾಲ ನಾಯ್ಕ ಹೇಳಿದರು. ಅವರು  ಇತ್ತೀಚೆಗೆ ಸಿದ್ದಾಪುರ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದವರು ಹಮ್ಮಿಕೊಂಡ  ಕಾರ್ಯಕ್ರಮದಲ್ಲಿ ನುಡಿದರು. 

ಅಭಿಮಾನಿಗಳಾದ ವಸಂತ ನಾಯ್ಕ ಮನಮನೆ,  ಗುರುರಾಜ ಶಾನಭಾಗ, ಪ್ರಕಾಶ್ ಮೌರ್ಯ  ಶಿಕ್ಷಕರು, ಅಣ್ಣಪ್ಪ ಕಡಕೇರಿ( ಎ.ಜಿ.ನಾಯ್ಕ) ಸುರೇಶ್ ಮಡಿವಾಳ ಮಾತನಾಡಿ ಅಪ್ಪು ಸರ್ ಗುಣಗಾನ ಮಾಡಿದರು. ಆರ್ ಟಿ ನಾಯ್ಕ, ಮಹೇಂದ್ರ ಬಾಲಿಕೊಪ್ಪ, ಸಚಿನ್,ಮಣಿ,  ವಿನಾಯಕ ಕಾನಗೋಡ,ಆನಂದ ಕೊಂಡ್ಲಿ ಮತ್ತು ಕರಾಟೆ ತಂಡ,  ಶಿಕ್ಷಕರಾದ ಎಮ್ ಪಿ ರಾಯ್ಕರ ಮೋಹನ ಪಟಗಾರ ಎಮ್ ಜಿ ನಾಯ್ಕ ಬೇಡ್ಕಣಿ,ಗಣೇಶ ಪಿ.ಹಾಗೂ ನೂರಾರು ಯುವಕರು ಭಾಗವಹಿಸಿ ದೀಪ ಬೆಳಗಿ ಪುಷ್ಪವೃಷ್ಠಿ ಗೈದು ಭಾವುಕರಾದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *