ಮಲೆನಾಡಿನ ಮಹರಾಯ ಕೊನೆಗೌಡ

ಮಲೆನಾಡಿನಲ್ಲೀಗ ಅಡಿಕೆ ತೋಟಗಳಲ್ಲೆಲ್ಲಾ ಸೊಂಯ್‌,ಟಪಕ್‌,ರಪಕ್‌ ಎನ್ನುವ ಶಬ್ಧ ಕೇಳಲಾರಂಭಿಸಿದೆ. ಇಂಥ ಶಬ್ಧ,ಗದ್ದಲ ಸೌಂಡುಗಳನ್ನು ಅರಸಿ ಹೊರಟರೆ ಅಡಿ ಕೆ ಮರಗಳ ಮೇಲೆ ಮಂಗನಂತೆ ಜಿಗಿಯುತ್ತಾ ನೆಗೆಯುತ್ತಾ ಅಡಿಕೆ ಕೊಯ್ಯುವ ಜನ ಕಾಣುತ್ತಾರೆ. ತಮ್ಮ ಪೂರ್ವಜರಾದ ವಾನರರನ್ನು ನೆನಪಿಸುವಂತೆ ಮರ ಏರಿ, ಮರದಿಂದ ಜಿಗಿದು,ನೆಗೆದು ಅಡಿಕೆ ಗೊನೆ ಕೀಳುವ ಈ ಮನುಷ್ಯರನ್ನು ಕೊನೆಗೌಡರು ಎನ್ನುತ್ತಾರೆ.


ಒಂದಾನೊಂದು ಕಾಲದಲ್ಲಿ ಕರಾವಳಿ ಭಾಗದಿಂದ ಮರ ಏರಿ ಮಾಡುವ ಸಾಹಸದ ಕೆಲಸಕ್ಕೆ ಮಲೆನಾಡಿಗೆ ಬಂದ ಗೌಡರನ್ನು ಕೊನೆಗೌಡ ಎಂದು ಕರೆಯುವುದು ರೂಢಿಯಾಯಿತು ಎನ್ನುವ ಮಾತಿದೆ. ಈ ಕೊನೆಗೌಡರು ಮಳೆಗಾಲದಲ್ಲಿ ಅಡಿಕೆ ಮರ ಏರಿ ಔಷಧಿ ಸಿಂಪಡಿಸಿದರೆ ಚಳಿಗಾಲದ ಪ್ರಾರಂಭದಲ್ಲಿ ಮರ ಏರಿ ಅಡಿಕೆ ಗೊನೆ ಕೆಳಗಿಳಿಸುತ್ತಾರೆ.
ನೂರಾರು ಅಡಿ ಎತ್ತರದ ಮರಗಳನ್ನು ಸರಾಗವಾಗಿ ಏರಿ ಮರದಿಂದ ಇನ್ನೊಂದು ಮರವನ್ನು ಬಾಗಿಸಿ ಕಟ್ಟಿ ಅಡಿಕೆ ಗೊನೆಯನ್ನುನೆಲಕ್ಕಿಳಿಸುವ ಈ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಸದೃಢವಾಗಿರುವ ಧೈರ್ಯಶಾಲಿಗಳು ಮಾತ್ರ ಮಾಡುವ ಈ ಸಾಹಸದ ಕೆಲಸ ಅಪಾಯಕಾರಿ ಕೂಡಾ.

ಮಲೆನಾಡಿನಲ್ಲಿ ಶ್ರಮಿಕ ವರ್ಗದವರೇ ಹೆಚ್ಚಾಗಿ ಮಾಡುವ ಈ ಕೆಲಸ ಸುಲಭ ಸಾಧ್ಯವಿಲ್ಲವಾದ್ದರಿಂದ ಈ ಕೊನೆಗೌಡರಿಗೆ ಹೆಚ್ಚಿನ ಬೇಡಿಕೆ. ನಿಗದಿತ ಮತ್ತು ನಿಯಮಿತ ವಯೋಮಾನದವರು ಮಾತ್ರ ಮಾಡುವ ಈ ಕೆಲಸವನ್ನು ಅಭ್ಯಾಸ ರೂಢಿಯಿಂದಾಗಿ ಕೆಲವು ಹಿರಿಯರೂ ಮಾಡುವುದುಂಟು ಆದರೆ ಈಗಿನ ತಲೆಮಾರು ಈ ಕೆಲಸ ಮಾಡಲು ಮುಂದಾಗುತ್ತಿಲ್ಲ. ವಿರಳವಾಗಿ ಈ ಕಾಯಕ ಮಾಡುವ ಕೊನೆಗೌಡರಿಗೆ ಅಡಿಕೆ ಸುಗ್ಗಿಯಲ್ಲಿ ಹೆಚ್ಚಿನ ಬೇಡಿಕೆ.ಒಂದೊಂದು ತಲೆಮಾರು ಮುಗಿಯುತ್ತಿದ್ದಂತೆ ಹೊಸ ತಲೆಮಾರು ಈ ಕೆಲಸಕ್ಕೆ ಮುಂದಾಗದಿರುವುದರಿಂದ ಕೆಲವು ಕಡೆ ಕೊನೆಗೌಡರಿಗೆ ಬದಲಾಗಿ ಯಂತ್ರಗಳನ್ನೂ ಬಳಸುವ ಹೊಸ ವಿಧಾನಗಳು ಈಗ ಪರಿಚಯವಾಗುತ್ತಿವೆ. ಆದರೆ ಕೊನೆಗೌಡಿಕೆಯ ಸಾಂಪ್ರದಾಯಿಕ ವಿಧಾನಕ್ಕೆ ಈವರೆಗೂ ಬೇಡಿಕೆ ಕಡಿಮೆಯಾಗಿಲ್ಲ. ಮನುಷ್ಯ ಮಾಡಬಹುದಾದ ಸಾಹಸದ ಕೆಲಸಗಳಲ್ಲಿ ಈ ಕಾಯಕವೂ ಒಂದಾಗಿರುವುದರಿಂದ ಮಲೆನಾಡಿನ ಕೊನೆಗೌಡರಿಗೆ ವಿಶೇಶ ಮಹತ್ವ. ಇವರ ಆರೋಗ್ಯ,ಇವರ ಕುಟುಂಬದ ಭವಿಷ್ಯಗಳ ಹಿನ್ನೆಲೆಯಲ್ಲಿ ಮಲೆನಾಡಿನ ಸಹಕಾರಿ ಸಂಘಗಳು ಈ ಕೊನೆಗೌಡರಿಗೆ ವಿಶೇಶ ಮಹತ್ವ ನೀಡಿ ಸೌಲಭ್ಯಗಳನ್ನೂ ಒದಗಿಸುತಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *