ಅಯ್ಯಪ್ಪ ಇಲ್ಲಿದೆ ಉತ್ತರದ ಅಯ್ಯಪ್ಪ….

ಅಯ್ಯಪ್ಪನ ಭಕ್ತರು ಎಲ್ಲಿಲ್ಲ ಹೇಳಿ? ಕೇರಳದ ಶಬರಿಮಲೆ ಅಯ್ಯಪ್ಪ ಬಹುಪ್ರಸಿದ್ಧ ದೇವರು. ಈ ದೇವರ ಭಕ್ತರು ದೇಶ-ವಿದೇಶಗಳಲ್ಲೂ ಕಾಣ ಸಿಗುತ್ತಾರೆ. ವರ್ಷಕ್ಕೊಮ್ಮೆ ವೃತ ಮಾಡಿ ಚಟ ಮರೆತು ಅಯ್ಯಪ್ಪನನ್ನು ಆರಾಧಿಸುವ ಭಕ್ತರು ಮಾಡುವ ವೃತಾನುಷ್ಠಾನಗಳು ಬಹು ಕಠಿಣ. ಅಯ್ಯಪ್ಪ ಮಾಲೆ ಧರಿಸಿದ ಅಯ್ಯಪ್ಪನ ಆರಾಧಕರು ಕಠಿಣ ನೀತಿ-ನಿಯಮ ಪಾಲಿಸುವ ಜೊತೆಗೆ ದೈಹಿಕ ಸುಖ,ಭೋಗಗಳನ್ನೂ ತ್ಯಜಿಸುತ್ತಾರೆ. ಇಂಥ ಅಯ್ಯಪ್ಪ ಮಾಲಾಧಾರಿಗಳು ದೇಶದ ಉದ್ದ-ಅಗಲಗಳಿಂದಲೂ ಪಶ್ಚಿಮದ ಕೇರಳಕ್ಕೆ ತೆರಳಿ ತಮ್ಮ ದೈವೀಭಕ್ತಿ ಪ್ರದರ್ಶಿಸುತ್ತಾರೆ.

ಹೀಗೆ ದೇಶದುದ್ದಗಲದಿಂದಲೂ ದೇಶದ ತುದಿ ಕೇರಳಕ್ಕೆ ಬರುವ ಜನರಿಗೆ ಉತ್ತರ ಕನ್ನಡದಲ್ಲಿ ಒಂದು ಪರ್ಯಾಯ ಶಬರಿಮಲೆ  ನಿರ್ಮಾಣವಾಗಿದೆ. ಶಬರಿಮಲೆ ದೇವಸ್ಥಾನದ ಎಲ್ಲಾ ವೈಶಿಷ್ಯಗಳನ್ನೂ ಹೋಲುವ ಮಾದರಿಯಲ್ಲಿ ನಿರ್ಮಾಣವಾಗಿರುವ ಸಿದ್ದಾಪುರದ ಅಯ್ಯಪ್ಪ ದೇವಾಲಯ ಈಗ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಮಿನಿ ಶಬರಿಮಲೆ ಮಾದರಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಶಬರಿಮಲೆಯ ಎಲ್ಲಾ ವಿಶೇಶಗಳೂ ಇಲ್ಲಿವೆ. ಮಾಲಾಧಾರಿಗಳು ಹತ್ತುವ ೧೮ ಮೆಟ್ಟಿಲುಗಳ ಜೊತೆಗೆ ಶಬರಿಮಲೆಯ ಆಚಾರ- ವಿಚಾರಗಳ ಸಂಪೂರ್ಣ ರೀತಿ ಇಲ್ಲಿಯ ರಿವಾಜು. ಪ್ರತಿವರ್ಷ ಸಂಕ್ರಾಂತಿಯಲ್ಲಿ ಇಡೀ ವಾರ ಇಲ್ಲಿ ನಡೆಯುವ ಜಾತ್ರೆ ಶಬರಿಮಲೆಯ ನಕಲಿನಂತೆ.


ದೂರದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿಯ ದೇವಾಲಯವನ್ನು ಜೋಗ ಸಮೀಪದ ಸಿದ್ದಾಪುರದಲ್ಲಿ ನಿರ್ಮಾಣ ಮಾಡಲು ಅನೇಕ ಕಾರಣಗಳಿವೆ. ಶಬರಿಮಲೆ ಅಯ್ಯಪ್ಪ ದೇವರ ದರ್ಶನ, ವೃತಾಚರಣೆ ಅಷ್ಟು ಸುಲಭ ಸಾಧ್ಯವಲ್ಲ. ಕೇರಳದ ಅಯ್ಯಪ್ಪ ದೇವಾಲಯಕ್ಕೆ ಹೋಗುವ ಅನೇಕರು ಈ ಭಾಗದಿಂದ ಕೇರಳಕ್ಕೆ ತೆರಳುತ್ತಾರೆ. ಅವರಿಗೆ ಅನುಕೂಲವಾಗಲಿ, ಅಷ್ಟು ದೂರ ಕಷ್ಟ ಪಟ್ಟು ಹೋಗಲಾರದ ಇತರರಿಗೆ ಶಬರಿಮಲೆಯ ದರ್ಶನ ಸುಲಭದಲ್ಲಿ ಸಿಗುವಂತಾಗಲಿ ಎಂದು ಯೋಚಿಸಿದ ಸಿದ್ಧಾಪುರದ ಕೆಲವು ಸಮಾನಮನಸ್ಕರ ಸಂಘ ಸ್ಫಷ್ಟ ಕಲ್ಪನೆಯೊಂದಿಗೆ ಈ ದೇವಸ್ಥಾನದ ನಿರ್ಮಾಣದ ಯೋಜನೆ ಪ್ರಾರಂಭಿಸಿದ್ದೇ ಆರಂಭ ನಂತರ ಸಲೀಸಾಗಿ ಕೆಲವೇ ವರ್ಷಗಳಲ್ಲಿ ತಲೆ ಎತ್ತಿ ನಿಂತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಈಗ ಉತ್ತರ ಕನ್ನಡ, ಉತ್ತರ ಕರ್ನಾಟಕ ಜನರ ನೆಚ್ಚಿನ ತಾಣವಾಗಿದೆ.


ವೃತಾಧಾರಿಗಳಿಗೆ ಊಟ-ವಸತಿಯೊಂದಿಗೆ ದರ್ಶನ ವ್ಯವಸ್ಥೆ ಇರುವ ಇಲ್ಲಿ ಸಾವಿರಾರು ಜನರು ಬಂದು ಹೋಗುತ್ತಾರೆ. ದಕ್ಷಿಣದ ಕಾಶ್ಮೀರ ಎನ್ನುವ ಉತ್ತರ ಕನ್ನಡದಲ್ಲಿ ಈಗ ಉತ್ತರದ ಶಬರಿಮಲೆ ಎಂದು ಸಿದ್ದಾಪುರದ ಈ ಅಯ್ಯಪ್ಪ ದೇಗುಲ ಪ್ರಸಿದ್ಧವಾಗುತ್ತಿದೆ. ಗೋವಾಕ್ಕೆ ಹೋಗುವ ದಕ್ಷಿಣ ಕರ್ನಾಟಕದ ಜನರಿಗೆ. ಮಂಗಳೂರು, ಕೇರಳ,ಧರ್ಮಸ್ಥಳ. ಶೃಂಗೇರಿಗಳಿಗೆಲ್ಲಾ ಹೋಗುವವರಿಗೆ ಜೋಗ ಜಲಪಾತದ ವೀಕ್ಷಣೆಗೆ ಬರುವವರಿಗೆ ಸುಲಭದಲ್ಲಿ ಸಿಗುವ ಈ ಶಬರಿಮಲೆ ಅಯ್ಯಪ್ಪ ದೇವಸ್ಥಾನ ವಿಶೇಶ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *