ಪೊಲೀಸ್‌ ಹವಾಲ್ಧಾರ ಜನಸ್ನೇಹಿ ಪೊಲೀಸಿಂಗ್‌ ಗೆ ಕಂಡುಕೊಂಡ ದಾನದ ಮಾರ್ಗಕ್ಕೆ ಜನಮೆಚ್ಚುಗೆ


ಮನಸ್ಸಿದ್ದರೆ ಕರ್ತವ್ಯದೊಂದಿಗೆ ಜನಸೇವೆ ಮಾಡುತ್ತಾ ಜನಸ್ನೇಹಿ ಪೊಲೀಸ್‌ ಆಗಬಹುದೆನ್ನುವುದನ್ನು ಸಾಬೀತು ಮಾಡಿದ ಹವಾಲ್ಧಾರ್ ರಾಘವೇಂದ್ರ ನಾಯ್ಕ

ಜನಸ್ನೇಹಿ  ಬೀಟ್‌, ಜನಸ್ನೇಹಿ ಪೊಲೀಸ್‌ ಎನ್ನುವುದೊಂದು ಗುರಿ ಮತ್ತು ಧ್ಯೇಯ. ಪೊಲೀಸ್‌ ಇಲಾಖೆ ಇಂಥ ಘೋಷಣೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸಂಪರ್ಕವನ್ನು ಸಾಧಿಸುವ ಗುರಿ ಹೊಂದಿದೆ. ಆದರೆ ಪೊಲೀಸ್‌ ಎಂದರೆ ಈಗಲೂ ಜನಮಾನಸದಲ್ಲಿ ಭಯ ಉಳಿದುಕೊಂಡಿದೆ. ಪೊಲೀಸ್‌ ಎಂದರೆ ಭಯ ಅಲ್ಲ ಭರವಸೆ ಎನ್ನುವ ಕಲ್ಪನೆಯನ್ನು ಸಾಕಾರಮಾಡಲು ಪೊಲೀಸರು ಶ್ರಮಿಸುತಿದ್ದಾರೆ.


ಇಲ್ಲೊಂದು ಜನಪರ ಪೊಲೀಸಿಂಗ್‌ ನ ಉದಾಹರಣೆ ‌ನಮ್ಮ ಮುಂದೇ ಇದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಹವಾಲ್ಧಾರ್‌ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ನಾಯ್ಕ ಪ್ರತಿವರ್ಷ ತಮ್ಮ ಬೀಟ್‌ ನಲ್ಲಿ ಒಂದೆರಡು ಕಾರ್ಯಕ್ರಮ ಮಾಡಿ ಅಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತಿದ್ದಾರೆ. ರಾಘವೇಂದ್ರ ನಾಯ್ಕ ತಮ್ಮ ಬೀಟ್‌ ನ ಒಂದೆರಡು ಶಾಲೆಗಳಿಗೆ ಪ್ರತಿವರ್ಷ ನೋಟ್ ಪುಸ್ತಕ, ಲೇಖನಿ ವಿತರಿಸುತ್ತಾರೆ. ಮೊದಮೊದಲು ತಾವೊಬ್ಬರೇ ಮಾಡುತಿದ್ದ ಈ ಪೊಲೀಸ್‌ ಜನಸ್ನೇಹಿ ಕೆಲಸಕ್ಕೆ ಈಗ ಅವರ ಸಮಾನ ಮನಸ್ಕ ಗೆಳೆಯರ ಸಹಕಾರ ಸಿಗುತ್ತಿದೆ.

ಮಕ್ಕಳಿಗೆ ಪೊಲೀಸರ ಕೆಲಸದ ಅರಿವು ಮೂಡಬೇಕು.ಶಾಲೆಯಲ್ಲಿ ಜನಸ್ನೇಹಿ ಪೊಲೀಸ್‌ ಕಾರ್ಯಕ್ರಮ ಮಾಡುವ ಮೂಲಕ ಮಕ್ಕಳೊಂದಿಗೆ ಪಾಲಕರು ಸೇರಬೇಕು.  ಮಕ್ಕಳ ಮೂಲಕ ಹಿರಿಯರು ಸಾರ್ವಜನಿಕರ ಸಂಪರ್ಕ ಹಿತಕಾರಿಯಾಗಿರಬೇಕು ಇದರಿಂದ ಪೊಲೀಸ್‌ ಕೆಲಸವೂ ಸರಳವಾಗುತ್ತದೆ. ಪೊಲೀಸರು ಮತ್ತು ಸಾರ್ವಜನಿಕರ ಸಂಪರ್ಕ ಸುಗಮವಾಗುತ್ತದೆ ಎನ್ನುವ ರಾಘವೇಂದ್ರ ನಾಯ್ಕ ತಮ್ಮ ಪೊಲೀಸ್‌ ಕೆಲಸದ ಜೊತೆಗೆ ಅಸಹಾಯಕ ಮಕ್ಕಳಿಗೆ ನೆರವೂ ನೀಡುತಿದ್ದಾರೆ.


ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಮನಾದ ಅನುಕೂಲ ಸೌಲಭ್ಯಗಳಿರುವುದಿಲ್ಲ ಆ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ತಮ್ಮ ಪುಟ್ಟ ಪ್ರಯತ್ನ ಎನ್ನುವ ಈ ಪೊಲೀಸ್‌ ತಮ್ಮ ಶಾಲಾದಿನಗಳಲ್ಲಿತಾವು ನೋಡಿದ ಅನುಭವಿಸಿದ ಕಷ್ಟಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ನೋಟ್‌ ಬುಕ್‌ ಪೆನ್ನು ವಿತರಿಸುವ ಮೂಲಕ ಈ ಕೆಲಸ ಇತರರಿಗೂ ಪ್ರೇರಣೆಯಾದರೆ ಯಾವ ವಿದ್ಯಾರ್ಥಿಗೂ ತನ್ನ ಕೊರತೆ, ಅಸಹಾಯಕತೆ ಎನಿಸುವುದಿಲ್ಲ ಎನ್ನುತ್ತಾರೆ ರಾಘವೇಂದ್ರ ನಾಯ್ಕ.

ಸಿದ್ದಾಪುರ ಪೊಲೀಸ್‌ ಠಾಣೆಯ ವ್ಯಾಪ್ತಿಯ ತಮ್ಮ ಕೆಲವು ಬೀಟ್‌ ಗಳಲ್ಲಿ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಪಟ್ಟಿ ಪೆನ್‌ ವಿತರಿಸಿ ಶಾಲೆಗಳಲ್ಲೇ ಜನಸ್ನೇಹಿ ಪೊಲೀಸ್‌ ಬೀಟ್‌ ಕಾರ್ಯಕ್ರಮ ಮಾಡಿದ್ದಾರೆ. ಪೊಲೀಸ್‌ ಹುದ್ದೆಯಿಂದ ಹವಾಲ್ಧಾರರಾಗಿ ಪದೋನ್ನತಿ ಹೊಂದಿರುವ  ರಾ ಘವೇಂದ್ರ ನಾಯ್ಕರ ಈ ಜನಸ್ನೇಹಿ ಪೊಲೀಸಿಂಗ್‌ ಗೆ ಅಪಾರ ಜನಬೆಂಬಲವೂ ವ್ಯಕ್ತವಾಗಿದೆ. ಪೊಲೀಸ್‌ ಪೇದೆಯೊಬ್ಬರ ಈ ಸಮಾಜಮುಖಿ ಮನಸ್ಥಿತಿ, ಜನಪರ ಕಾಳಜಿಗೆ ಅವರ ಹಿರಿಯ ಅಧಿಕಾರಿಗಳ ಬೆಂಬಲವೂ ದೊರೆಯುತಿದ್ದು ಇಲಾಖೆ ಈ ಪೊಲೀಸ್‌ ಬಗ್ಗೆ ಅಭಿಮಾನವನ್ನೂ ವ್ಯಕ್ತಮಾಡುತ್ತಿದೆ.
ರಾಘವೇಂದ್ರ ನಾಯ್ಕರ ಈ ಜನಸ್ನೇಹಿ ಕೆಲಸ ಇತರ ಪೊಲೀಸ್‌ ರಿಗೂ ಮಾದರಿಯಾಗಿದ್ದು ಸಮಾಜಮುಖಿ ಯಾದ ಯಾವುದೇ ಕೆಲಸಕ್ಕೆ ಜನಬೆಂಬಲ ದೊರೆಯುತ್ತದೆನ್ನುವ ದೃಷ್ಟಾಂತಕ್ಕೆ ಈ ಪೊಲೀಸರ ಜನಸ್ನೇಹಿ ಬೀಟ್‌ ಕಾರ್ಯಕ್ರಮ ಉತ್ತಮ ಉದಾಹರಣೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *