

ಸಿದ್ದಾಪುರ ಕೋಲ್ಶಿರ್ಸಿಯ ಗೃಹಿಣಿ ಪದ್ಮಾವತಿ ಸೋಮಶೇಖರ ನಾಯ್ಕ ಹೃದಯಾಘಾತ ದಿಂದ ನಿಧನರಾಗಿರುವ ಬಗ್ಗೆ ವರದಿಯಾಗಿದೆ. ಇಂದು ಸಾಯಂಕಾಲದ ಸಮಯ ಹಠಾತ್ ಹೃದಯ ಸ್ತ oಬನ ದಿಂದ ಬಳಲಿದ ಅವರನ್ನು ಸಿದ್ದಾಪುರ ತಾಲೂಕಾ ಆಸ್ಪತ್ರೆ ಗೆ ದಾಖಲಿಸಿದರಾದರೂ ಪ್ರಯೋಜ ನವಾಗಲಿಲ್ಲ. ಮೃತರ ಅಂತಿಮ ಸಂಸ್ಕಾರ ಶನಿವಾರ ಮುಂಜಾನೆ ನಡೆಯಲಿರುವ ಬಗ್ಗೆ ಆಪ್ತರು ಮಾಹಿತಿ ನೀಡಿದ್ದಾರೆ. ಪದ್ಮಾವತಿ ನಾಯ್ಕ ಪತಿ, ಇಬ್ಬರು ಗಂಡು ಮಕ್ಕಳು ಮತ್ತು ವಯೋವೃದ್ಧ ತಂದೆ – ತಾಯಿ ಹಾಗೂ ಸಹೋದರರನ್ನು ಸೇರಿದ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.


ಸಿದ್ದಾಪುರ ತಾಲೂಕಿನ ಅರೆ oದೂರು ಗ್ರಾಮದ ಮಸೀದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂಭಂದ ಇತ್ತೀಚಿಗೆ ಗಲಾಟೆ ಮಾಡಿಕೊಂಡು ಅರೆಂದೂ ರ ಗ್ರಾಮದಲ್ಲಿ ಎರಡು ಗುಂಪುಗಳಾಗಿ ವೈಷ್ಯಮ್ಯ ಬೆಳೆದಿದ್ದು ಇಂದು ಬೆಳಿಗ್ಗೆ 11:30 ಗಂಟೆಗೆ ಗಲಾಟೆ ಪ್ರಾರಂಭವಾಗಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ 3 ಜನರಿಗೆ ಬಲವಾದ ಗಾಯಗಳಾ ಗಿವೆ. ಎರಡು ಗುಂಪಿನವರ ಮೇಲೆ ಪ್ರರಣಕ್ಕೆ ಮರು ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ. ಒಟ್ಟೂ 33 ಜನರ ಮೇಲೆ ಪ್ರಕರಣ ದಾಖಲಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






