ಈಡಿಗ ಸಮುದಾಯದ ಕುಲಕಲ್ಪನೆ ಮತ್ತು ಒಳಪ್ರಭೇದಗಳು

————————————

ಈಡಿಗರಲ್ಲಿ ಹಲವಾರು ಉಪಜಾತಿಗಳು ಮತ್ತು ಒಳಪ್ರಭೇದಗಳಿವೆ. ಪ್ರಾದೇಶಿಕವಾಗಿ ಅನೇಕ ಹೆಸರುಗಳಿಂದ ಈಡಿಗ ಸಮುದಾಯವನ್ನು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳೆಪೈಕರು ಅಥವಾ ನಾಮದಾರಿಗಳು, ಕಲಾಲ, ನಾಯ್ಕ ಎಂಬ ಹೆಸರುಗಳಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೀವರು, ಸುವರ್ಣ, ಬಿಲ್ಲವ, ಪೂಜಾರಿ ಎಂಬ ಹೆಸರುಗಳಿಂದ, ಬಯಲುಸೀಮೆಯಲ್ಲಿ ಈಡಿಗ, ಈಡಿಗ ಗೌಡ, ಆರ್ಯ ಈಡಿಗ ಎಂಬ ಹೆಸರುಗಳಿಂದ, ಉತ್ತರ ಕರ್ನಾಟಕದಲ್ಲಿ ಈಡಿಗ, ಈಳಿಗ, ಈಳಿಗೇರ್, ಗುತ್ತೇದಾರ, ಗೊಂಡ್ಲ, ಗೌಂಡಾಲ ಹೆಸರುಗಳಿಂದ, ತಮಿಳುನಾಡಿನಲ್ಲಿ ನಾಡಾರ, ಕೇರಳದಲ್ಲಿ ಈಳವ- ಈಳಿಗ- ತಿಯ್ಯಾ ಎಂಬ ಹೆಸರುಗಳಿಂದ, ಆಂಧ್ರಪ್ರದೇಶದಲ್ಲಿ ಈಡಿಗೋಳ್ಳು, ಈಡಿಗ, ಈಡಿಗ್ಲು, ಗೌಂಡಲು, ಈತಿಗೌಂಡ್ಲು, ಕಳಲಿ ಹೆಸರುಗಳಿಂದ, ಮಹಾರಾಷ್ಟ್ರದಲ್ಲಿ ಪಟೇಲ್, ಮಧ್ಯಪ್ರದೇಶದಲ್ಲಿ ಕಲಾಲ- ಜೈಸ್ವಾಲ್ ಹಾಗೂ ಪಂಜಾಬಿನಲ್ಲಿ ಅಲುವಾಲಿಯಾ ಎಂಬ ಹೆಸರಿನಿಂದ ಗುರುತಿಸಲಾಗಿದೆ.

ಇವರೆಲ್ಲರೂ ಹೆಂಡ ಇಳಿಸಿ ಮಾರಾಟ ಮಾಡುವ ವೃತ್ತಿಯ ನೆಲೆಯಿಂದ ಒಂದೇ ಎಂದು ಗುರುತಿಸಲ್ಪಡುತ್ತಿರುವರಾದರೂ ತಮ್ಮದೇ ಆದ ಕೆಲವು ವಿಶಿಷ್ಠವಾದ ಸಾಂಸ್ಕೃತಿಕ ಅನನ್ಯತೆಗಳಿಂದ ಪ್ರತ್ಯೇಕತೆಯನ್ನು ‌ಕಾಯ್ದುಕೊಂಡಿರುವುದನ್ನು ಕೂಡಾ ನೋಡುತ್ತೇವೆ. ಏನೇ ಇರಲಿ ಇವರೆಲ್ಲರೂ ಒಂದೇ ದ್ರಾವಿಡ ಮೂಲದ ತಾಯಿಬೇರಿನಿಂದ ಒಡಮೂಡಿ ದೇಶಾದ್ಯಂತ ಹರಡಿಕೊಂಡಿರುವ ಕಾರಣ ಕರ್ನಾಟಕದ ಮಟ್ಟಿಗಾದರೂ ಈಡಿಗ ಎಂಬ ಒಂದೇ ಹೆಸರಿನಿಂದ ಗುರುತಿಸಿಕೊಂಡಾಗ ಮಾತ್ರ ಒಂದು ದೊಡ್ಡ ರಾಜಕೀಯ ಶಕ್ತಿಯಾಗಲು ಸಾಧ್ಯವಿದೆ.

ಬಯಲುಸೀಮೆಯ ಈಡಿಗರಲ್ಲಿ ಕಾಡು ಈಡಿಗರು (ಬೆಲ್ಲದ ಈಡಿಗರು) ಮತ್ತು ಊರು ಈಡಿಗರು (ಸಾಚಾ ಈಡಿಗರು) ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಈ ಪ್ರಭೇದಗಳಲ್ಲಿ ಸಾಸುಮೆ ಈಡಿಗರು, ದಂಡಿನ ಈಡಿಗರು, ಮುದ್ದೆ ಈಡಿಗರು ಹಾಗೂ ಬಡ್ಡಿ ಈಡಿಗರೆಂಬ ಬಳಿ ಬೆಡಗುಗಳಿವೆ. ಸಂಸ್ಕೃತಾನುಕರಣದಿಂದಾಗಿ ಈಡಿಗರು ತೀರಾ ಇತ್ತೀಚೆಗೆ ಈ ಬೆಡಗುಗಳನ್ನು ಗೋತ್ರಗಳೆಂದು ಹೇಳಲು ಶುರುವಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಸಮುದಾಯಗಳಲ್ಲಿ ಸಗೋತ್ರ ವಿವಾಹ ನಿಷಿದ್ಧವಾಗಿರುವಂತೆ ಈಡಿಗರಲ್ಲಿಯೂ ಸಗೋತ್ರ ವಿವಾಹ ನಿಷಿದ್ಧವಾಗಿದೆ. ಬಡ್ಡಿ ಈಡಿಗರು ಸಾಸುಮೆ ಈಡಿಗರೊಂದಿಗೆ ಪರಸ್ಪರ ವೈವಾಹಿಕ ಸಂಬಂಧ ಬೆಳೆಸಬೇಕೇ ಹೊರತು ಸಾಸುಮೆ ಈಡಿಗರು ಅದೇ ಸಾಸುಮೆ ಈಡಿಗರಲ್ಲಿ ಮದುವೆಯಾಗುವಂತಿಲ್ಲ. ಒಂದೇ ಬೆಡಗಿನವರು ಅಣ್ತಮ್ಮಿಕೆಯಾಗುತ್ತಾರೆ.

ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ದಂಡಿನ ಈಡಿಗರು ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಸೈನಿಕರಿಗೆ ಹೆಂಡ ಒದಗಿಸುತ್ತಿದ್ದರು. ಸಮರ ವೀರರಿಗೆ ಹೆಂಡ ಸರಬರಾಜು ಮಾಡುತ್ತಿದ್ದ ಕಾರಣದಿಂದಲೇ ಅವರಿಗೆ ದಂಡಿನ ಈಡಿಗರು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಈಳಿಗರು ತಿರುವಾಂಕೂರಿನ ರಾಜನ ಸೇನೆಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ತಿರುವಾಂಕೂರಿನ ಪ್ರಸಿದ್ಧ ರಾಜನಾದ ರಾಮವರ್ಮನ ಸೇನೆಯಲ್ಲಿ ತಿಯ್ಯಾ ಈಳಿಗರ ‘ತಿಯ್ಯಾ ತುಕಡಿಗಳು’ ಇದ್ದವು. ತಮ್ಮ ಶೌರ್ಯದ ನೆನಪುಗಳನ್ನು ಉಳಿಸಿಕೊಳ್ಳಲು ತಿಯ್ಯಾ ಈಳಿಗರು ತಮ್ಮ ಮದುವೆಯ ಸಂದರ್ಭದಲ್ಲಿ ವರ ಮತ್ತು ಅವನ ಇಬ್ಬರು ಗೆಳೆಯರಿಗೆ ಸೈನಿಕರ ವೇಷವನ್ನು ತೊಡಿಸಿ ಅವರ ಕೈಗಳಿಗೆ ಕತ್ತಿ ಗುರಾಣಿಗಳನ್ನು ಕೊಟ್ಟು ಕತ್ತಿವರಸೆಯ ಅಣಕು ನೃತ್ಯ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಕತ್ತಿವರಸೆಯ ಅಣಕು ನೃತ್ಯ ಪ್ರದರ್ಶನ ಏರ್ಪಡಿಸದ ಹೊರತು ವಿವಾಹ ಪೂರ್ಣವಾಗುವುದಿಲ್ಲ.

ಹಾಲಕ್ಕಿ ಬುಡಕಟ್ಟು ಸಮುದಾಯವನ್ನು ಕುರಿತು ‘ಹಾಲಕ್ಕಿಗಳು : ಒಂದು ಅಧ್ಯಯನ’ ಎಂಬ ಸಂಶೋಧನಾ ಗ್ರಂಥವನ್ನು ಬರೆದಿರುವ ವಿಷ್ಣು ನಾಯ್ಕರು ಹೇಳುವಂತೆ, ‘ಮಯೂರವರ್ಮನು ಪಲ್ಲವರ ಮೇಲೆ ದಾಳಿಮಾಡಿ ಕದಂಬ ಸಾಮ್ರಾಜ್ಯವನ್ನು ಕಟ್ಟುವಾಗ ಈಡಿಗರು ದೊಡ್ಡ ಸಂಖ್ಯೆಯಲ್ಲಿ ಅರಣ್ಯವಾಸಿಗಳಾಗಿದ್ದರು. ಮಾತ್ರವಲ್ಲದೆ ಬಿಲ್ಲು ಬಾಣಗಳನ್ನು ಬಂದೂಕನ್ನು ಬಳಸುವಲ್ಲೂ ನಿಷ್ಣಾತರಾಗಿದ್ದರು. ಈಡಿಗರ ಹಳೆಪೈಕರನ್ನು ಕುರಿತು ಅಧ್ಯಯನ ಮಾಡಿ ‘ಹಳೆಪೈಕರು: ಒಂದು ಅಧ್ಯಯನ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸಿರುವ ‌ಮತ್ತು ಸ್ವಯಂ ನಾಮದಾರಿ ಹಳೆಪೈಕ ಸಮುದಾಯದವರೇ ಆಗಿರುವ ಉಮೇಶ್ ನಾಯ್ಕರು ಪ್ರಜಾವಾಣಿ ಪತ್ರಿಕೆಯಲ್ಲಿ ಷ.ಶೆಟ್ಟರ್ ಅವರು ಕದಂಬ ಸಾಮ್ರಾಜ್ಯ ಕುರಿತು ಬರೆದು ಪ್ರಕಟಿಸಿದ್ದ ಲೇಖನವನ್ನು ಆಧಾರವಾಗಿರಿಸಿಕೊಂಡು ಕದಂಬ ಸಾಮ್ರಾಜ್ಯವನ್ನು ಶೂದ್ರ ಹಳೆಪೈಕರು ಕಟ್ಟಿದ್ದು ಎಂದು ಪೂರಕ ಚಾರಿತ್ರಿಕ ದಾಖಲೆಗಳಿಂದ ವಿಶ್ಲೇಷಿಸಿರುತ್ತಾರೆ.

ಇಷ್ಟು ಮಾತ್ರವಲ್ಲದೇ ಉಮೇಶ್ ನಾಯ್ಕ ಅವರು, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆ ಈಡಿಗರ ಹಳೆಪೈಕದವಳೆಂದು,‌ ಕೃಷ್ಣದೇವರಾಯನ ಸೈನ್ಯದಲ್ಲಿ ಹಳೆಪೈಕರ ದೊಡ್ಡ ಕಾಲ್ದಳ ಇತ್ತೆಂದು ವಿವರಿಸಿರುತ್ತಾರೆ. ಉಮೇಶ್ ನಾಯ್ಕ ಹೇಳುವ ಪ್ರಕಾರ ಹೆಂಡಗಾರ ಸಮುದಾಯವಾದ ಕರಾವಳಿಯ ಬಿಲ್ಲವರು ಕೂಡಾ ಸೈನಿಕ ಮೂಲದವರೇ ಆಗಿದ್ದು ಬಿಲ್ಲು ಬಾಣ ಹಿಡಿದು ಯುದ್ಧ ಮಾಡುತ್ತಿದ್ದ ಬಿಲ್ಲುಗಾರರಾಗಿದ್ದರಿಂದ ಬಿಲ್ಲವರು ಎಂದು ಕರೆಸಿಕೊಂಡಿದ್ದಾರೆ.

ಈಡಿಗ ಸಮುದಾಯ ಮೂಲದ ಹಿರಿಯ ಪತ್ರಕರ್ತ ವಿದ್ವಾಂಸರಾದ ಲಕ್ಷ್ಮಣ ಕೊಡಸೆಯವರು ‘ಈಡಿಗ ಜನಾಂಗದ ಇತಿಹಾಸ ಒಂದು ನೋಟ’ ಎಂಬ ಲೇಖನದಲ್ಲಿ ಹೆಂಡ ಇಳಿಸುವ ದೀವರು, ಬಿಲ್ಲವರು ಮತ್ತು ಹಳೆಪೈಕರು ಯುದ್ಧಗಳಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಬಿ.ಸಿದ್ಧಗಂಗಯ್ಯ ಕಂಬಾಳು ಅವರು ತಮ್ಮ ‘ಈಡಿಗರ ಸಂಸ್ಕೃತಿ’ ಎಂಬ ಸಂಶೋಧನಾ ಗ್ರಂಥದಲ್ಲಿ ‘ದೀವರನ್ನು ಹಳೆಪೈಕರು ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಈಡಿಗ ಗೌಡರ ಮುಖ್ಯಸ್ಥನಾದ ನಾರಾಯಣ ಗೌಡನು ನಿಷ್ಠೆಯಿಂದ ಸೇವೆ ಸಲ್ಲಿಸಿದುದರಿಂದ ಶ್ರೀ ಕೃಷ್ಣರಾಯ ಸಾರ್ವಭೌಮನು ಸಂತೃಪ್ತಿಗೊಂಡು ಆ ಗೌಡರಿಗೆ ಹಳೆಪೈಕ ಎಂಬ ಗ್ರಾಮವನ್ನು ಉಂಬಳಿ ಕೊಟ್ಟನು. ಅಂದಿನಿಂದ ಹಳೆಪೈಕರು ಎಂಬ ಹೆಸರು ಜನಾಂಗಕ್ಕೆ ಬಂದಿದೆ’ ಎಂದು ‘ಕೌಂಡಿನ್ಯ ವಂಶವೃಕ್ಷ’ ಎಂಬ ಕೃತಿಯಿಂದ ಉದ್ಧರಿಸಿರುತ್ತಾರೆ.

ಮುಂದುವರೆಯುತ್ತದೆ…

ಡಾ.ವಡ್ಡಗೆರೆ ನಾಗರಾಜಯ್ಯ

8722724174

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *