


ಕಾಂಗ್ರೆಸ್ ಆಡಳಿತದಲ್ಲಿ ಮಡಿವಾಳರಿಗೆ ಅವಮಾನವಾಗಿದೆ ಎಂದು ಉಲ್ಲೇಖಿಸಿರುವ ಯುವ ಮಡಿವಾಳ ಸಂಘ ಶುಕ್ರವಾರದ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿ ವಿನಾಯಕ ಮಡಿವಾಳರ ವಿರುದ್ಧ ಮನವಿ ನೀಡಿರುವುದನ್ನು ಖಂಡಿಸಿದೆ.
ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ನೀಡಿರುವ ಸಂಘ ಮನವಿಯನ್ನು ತಹಸಿಲ್ಧಾರರಿಗೂ ನೀಡಿದೆ.
ತಾಲೂಕಾ ಕಾಂಗ್ರೆಸ್ ನ ಕೆಲವರ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ವಿನಾಯಕ ಮಡಿವಾಳರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇಂಥ ರಾಜಕೀಯ ಹಿತಾಸಕ್ತಿಗೆ ಮಣಿದು ಪ್ರಾಮಾಣಿಕ ಅಧಿಕಾರಿ ವಿನಾಯಕ ರನ್ನು ತಾಲೂಕಿನಿಂದ ವರ್ಗಾವಣೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಸಂಘ ಅವರ ಸೇವೆ ಸಮಾಧಾನಕರವಾಗಿರದಿದ್ದರೆ ಇಲಾಖೆಯಿಂದ ಕ್ರಮವಾಗಲಿ ಅದನ್ನು ಬಿಟ್ಟು ಶಾಸಕರು, ಸಚಿವರು ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಯೊಬ್ಬರ ವರ್ಗಾವಣೆ ನೆಪ ಮಾಡಿ ರಸ್ತೆ ತಡೆ ನಡೆಸುವುದು, ಪ್ರತಿಭಟನೆ ನಡೆಸುವುದು ಖಂಡನೀಯ ಎಂದು ನಿನ್ನೆಯ ಪ್ರತಿಭಟನೆಯ ವಿರುದ್ಧ ಮನವಿ ನೀಡುವ ಪ್ರತಿಕ್ರೀಯೆ ಮಾಡಿದೆ.
