ಕೆಲವು ಶಬ್ಧಗಳ ಉತ್ಫತ್ತಿ ವಿಶೇಶವಾಗಿರುತ್ತದೆ. ಕನ್ನಡದ ಹರಸಾಹಸ ಶಬ್ಧ ಹರಕ್ಯುಲಿಯನ್ ಟಾಸ್ಕ್ ಹರಕ್ಯುಲಸ್ ನಿಂದ ಬಂದ ಬಗ್ಗೆ ಹಿಂದೆ ಬರೆದಿದ್ದೆ.
ಈಗ ಅಕ್ಕದಾಸನ ಬಗ್ಗೆ ತಿಳಿಯೋಣ.
ಶಿರಸಿಯಲ್ಲಿ ಸಂಪ್ರದಾಯಸ್ಥ ಹವ್ಯಕ ಮನೆತನದಲ್ಲಿ ಗಣಪತಿ ಭಟ್ಟ ಎಂಬುವವನೊಬ್ಬನಿದ್ದ ಅವರ ಮನೆತನದ ಹೆಸರು ಅಕ್ಕದಾಸ ಅಂದರೆ ಅಕ್ಕದಾಸರ ಮನೆತನ.
ಈ ಅಕ್ಕದಾಸ ಗಣಪತಿ ಭಟ್ಟ ಕರ್ಮಠ ಹವ್ಯಕ ಆಚರಣೆಗಳ ವಿರುದ್ಧ ಸಿಡಿದೆದ್ದು ಸರಿಸುಮಾರು ಒಂದು ಶತಮಾನದ ಹಿಂದೆ ಸುಧಾರಣಾ ಚಳವಳಿ ಪ್ರಾರಂಭಿಸಿದ್ದಾತ. ವಿದವಾ ವಿವಾಹದ ಮೂಲಕ ಕ್ರಾಂತಿ ಮಾಡಿದ್ದ ಅಕ್ಕದಾಸ ಭಟ್ಟ ಲೌಕಿಕರ ಲೆಕ್ಕದಲ್ಲಿ ಲೇವಡಿಗೆ ಬಳಸುವ ಹೆಸರಾಗಿದ್ದ!
ಇವರ ನೊಬೆಲ್ ಕೆಲಸದ ಬಗ್ಗೆ ಕೆಲವರಿಗೆ ಒಪ್ಪಿಗೆ, ಮೆಚ್ಚುಗೆ ಇದ್ದರೆ ಬಹುಸಂಖ್ಯಾತ ಸಂಪ್ರದಾಯಸ್ಥರು ಇವರ ಕೆಲಸದ ವಿರುದ್ಧವಿದ್ದರು. ಇವರ ಸುಧಾರಣಾ ಕ್ರಮದಿಂದ ಸಮಾಜದಲ್ಲಿ ಪರಿವರ್ತನರಯಾದದ್ದಂತೂ ಸತ್ಯ
ಇಂಥ ಸುಧಾರಣಾ ವಾದಿ ಹೋರಾಟಗಾರನನ್ನು ಬಹುಸಂಖ್ಯಾತರು ಗೇಲಿ ಮಾಡುತಿದ್ದುದು ಇವನೊಬ್ಬ ಅಕ್ಕದಾಸನ ಥರದವನು ಅಥವಾ ಇವಳೊಂಥರಾ ಅಕ್ಕದಾಸನ ಥರದವಳು ಎಂದು.
ಈ ಅಕ್ಕದಾಸ ಮತ್ತು ಅಕ್ಕದಾಸನ ಥರದೋನು ಎನ್ನುವುದು ಈಗ ಅಷ್ಟು ಬಳಕೆಯಲ್ಲಿಲ್ಲ.
ಇತ್ತೀಚೆಗೆ ಸಾಗರದ ಕಲಗಾರಿನ ಲಕ್ಷ್ಮೀ ನಾರಾಯಣ ಶರ್ಮ ಈ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಪ್ರಕಟಿಸಿದವರು ಬೆಂಗಳೂರಿನ ಬಹುರೂಪಿ ಪ್ರಕಾಶನ. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶಿರಸಿ ಮುಂಡಗೆಸರದಲ್ಲಿ ನಡೆಯಿತು. ಯಥಾಪ್ರಕಾರ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೇರಿದವರು ಬಹುತೇಕ ಅದೇ ಕರ್ಮಠ ವ್ಯವಹಾರಿಗಳು ಎನ್ನುವುದು ಈ ಕಾರ್ಯಕ್ರಮದ ಬಗ್ಗೆ ಇದ್ದ ಟೀಕೆ. ಅದೇನೆ ಇರಲಿ, ಹಿರಿಯ ಸಾಹಿತಿ, ಸಂಶೋಧಕ ಮಧುರಾವ್ ಮಡೇನೂರು ಈ ಪುಸ್ತಕಕ್ಕೆ ಮುನ್ನುಡಿ ಬರೆದು ಆ ಬಗ್ಗೆ ಆಸಕ್ತಿಕಾರಕ ಕೆಲವು ವಿಚಾರಗಳನ್ನು ತಿಳಿಸಿದರು. ಇಂಥ ಚರ್ಚೆಗಳ ಮೂಲಕ ಕೆಲವು ಒಳನೋಟಗಳನ್ನು ಕೊಡುವ ಮಧುರಾವ್ ಹಳೆಪೈಕ ದೀವರ ಬಗ್ಗೆ ಮಾಹಿತಿಪೂರ್ಣ ಪುಸ್ತಕವೊಂದನ್ನು ಬರೆದಿದ್ದಾರೆ. ಅಕ್ಕದಾಸನನ್ನು ನೆನಪಿಸಿದ, ಬರೆದ, ಪ್ರಕಟಿಸಿದ ಮಧು ರಾವ್, ಶರ್ಮ, ಜಿ.ಎನ್.ಮೋಹನ್ ಈ ಕಾಲಕ್ಕೆ ಒಂದು ಶತಮಾನದ ಹಿಂದಿನ ಸುಧಾರಣಾವಾದಿ ಚಳವಳಿಯೊಂದನ್ನು ನೆನಪಿಸುವ ಮೂಲಕ ಸಾರಸ್ವತ ಲೋಕಕ್ಕೆ, ಕನ್ನಡ ಸಾಹಿತ್ಯಕ್ಕೆ ಅಪೂರ್ವ ಎನ್ನುಬಹುದಾದ ಕೊಡುಗೆ ನೀಡಿದ್ದಾರೆ ಎನ್ನುವುದು ನನ್ನ ಭಾವನೆ. …ಇಂತಿ ನಿಮ್ಮ ಕನ್ನೇಶ್…. ಕೋಲಶಿರ್ಸಿ