ರೊಟ್ಟಿ ಜಾರಿ ಕೈ ಗೆ ಬೀಳಲಿದೆಯೆ?…ಉತ್ತರ ಕನ್ನಡ ಕ್ಷೇತ್ರದಲ್ಲಿ ತೀರದ ಗೊಂದಲ

ಅವರ್ನಬಿಟ್ಟ್ ಇವರ್ಯಾರು?

ಲೋಕಸಭೆಗೆ ಆಮದು ಅಭ್ಯರ್ಥಿಗಳು!

ಮುಂದಿನ ಎರಡು ತಿಂಗಳು ನಡೆಯುವ ಲೋಕಸಭಾ ಚುನಾವಣೆಗೆ ಅಂಕಣ ಸಿದ್ಧವಾಗಿದೆ. ಆದರೆ ಅಭ್ಯರ್ಥಿಗಳ್ಯಾರು? ಎನ್ನುವ ರಹಸ್ಯ ಇನ್ನೂ ಮುಂದುವರಿದಿದೆ. ಇದು ಈ ದೇಶದ, ರಾಜ್ಯದ ಜೊತೆಜೊತೆಗೆ ಜಿಲ್ಲೆಯ ವಿದ್ಯಮಾನ ಕೂಡಾ.

ಹಸಿಸುಳ್ಳು ಅಧಿಕಾರ ತಂದುಕೊಡುತ್ತದೆ ಎಂದು ಬಲವಾಗಿ ನಂಬುವ ಪರಿವಾರ ಸುಳ್ಳಿನಿಂದಲೇ ಎರಡು ಬಾರಿ ಜನಾದೇಶ ಪಡೆದ ಅನುಭವದಿಂದ ಈ ಚುನಾವಣೆಯಲ್ಲಿ  ಕೂಡಾ ಸುಳ್ಳಿನ ಸುಳಿಗಳಿಗೆ ಸಿಲಿಕಿಕೊಂಡಿದೆ.

ಮೋದಿಅಮಿತ್‌ ಶಾ ಜೋಡಿ ಈ ಬಾರಿ ಕಟ್ಟರ್‌ ಹಿಂದೂ ವಾದಿಗಳನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹೌದು ದೇಶದಾದ್ಯಂತ ಮತಿವಿಕಲರಂತೆ ಅರಚುತಿದ್ದ ವಿವೇಕಶೂನ್ಯರು ಅವಕಾಶ ಕಳೆದುಕೊಂಡಿದ್ದಾರೆ. ಅವರ ಬದಲು ಸಜ್ಜನರು ಬರುವರೆ? ಅನುಮಾನ.

ಮೋದಿಗೆ ಸೆಡ್ಡು ಹೊಡೆದಿರುವ ರಾಹುಲ್‌, ಪರಿವಾರದ ಷಡ್ಯಂತ್ರಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದಾರೆ. ಆದರೆ ಅವರ ಚಾಣಾಕ್ಷತೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮುಂದುವರಿಯುತ್ತಾ ಕಾಲವೇ ಉತ್ತರಿಸಬೇಕು.

ಇಂಡಿಯಾದಲ್ಲಿ ಗುಜರಾತ್‌, ಉತ್ತರ ಪ್ರದೇಶ,ಮಧ್ಯ ಪ್ರದೇಶ ಸೇರಿದ ಕೆಲವು ರಾಜ್ಯಗಳಲ್ಲಿ ಬಿ.ಜೆ.ಪಿ. ಗೆ  ಸಂಖ್ಯೆಹೆಚ್ಚು ಮಾಡಿಕೊಳ್ಳುವ ಅವಕಾಶ ಕಡಿಮೆ.

 ಇತ್ತ ಬಂದರೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಇಲ್ಲಿ ಬಿ.ಜೆ.ಪಿ ಗಳಿಸಿಕೊಳ್ಳುವ ಸಾಧ್ಯತೆ ಕಡಿಮೆ.

ಇದೇ ಲೆಕ್ಕಾಚಾರದಲ್ಲಿ ಬಿ.ಜೆ.ಪಿ.೨೦೦ ಸ್ಥಾನಗಳನ್ನು ದಾಟಲ್ಲ ಎನ್ನುವುದಕ್ಕೆ ಬಲವಾದ ಕಾರಣಗಳಿವೆ. ಇತರ ಪಕ್ಷಗಳನ್ನು ಹೊರತು ಪಡಿಸಿ ಬಿ.ಜೆ.ಪಿ. ನಂತರ ಅತಿದೊಡ್ಡ ಪಕ್ಷವಾಗುವ ಅವಕಾಶ ಕಾಂಗ್ರೆಸ್‌ ಗೆ ಇತ್ತು, ಇರುತ್ತದೆ,ಇರಲಿದೆ ಕೂಡಾ.

ಈ ಸಮೀಕರಣದ ಪ್ರಕಾರ ಬಿ.ಜೆ.ಪಿ.ಗಿಂತ ಹೆಚ್ಚು ಸ್ಥಾನಗಳನ್ನು ಯು.ಪಿ.. ಪಡೆದರೆ ಆಗ ಎನ್.ಡಿ.. ಅಂಗಪಕ್ಷಗಳು ವಿರೋಧಿ ಒಕ್ಕೂಟದ ಕೈ ಹಿಡಿಯಬಹುದು. ಅಥವಾ ಮೋದಿಯೋಗಿ ಎನ್ನುವ ಆರೆಸ್ಸೆಸ್‌ ಕುಟಿಲತೆ ವಿರೋಧಿಸಿ ಬೇರೆಯವರನ್ನು ಪ್ರಧಾನಿ ಮಾಡಬಹುದು.

  ಇದು ದೇಶದ ವಿದ್ಯಮಾನವಾದರೆ ರಾಜ್ಯದಲ್ಲಿ ಬಿ.ಜೆ.ಪಿ. ಬಂಡಾಯ, ಜೆ.ಡಿ.ಎಸ್.ಹೊಂದಾಣಿಕೆ ಕೊರತೆ ಇವುಗಳ ಪರಿಣಾಮ ಬಿ.ಜೆ.ಪಿಗೆ .ಹತ್ತರಿಂದ ಹದಿನೈದು ಸ್ಥಾನಗಳು ಕಡಿಮೆ ಆಗಬಹುದು ಆಗ ಕಾಂಗ್ರೆಸ್‌ ಗೆ ಒಂದರಿಂದ ಒಂದು ಡಜನ್‌ ದಾಟಿ ಬಿ.ಜೆ.ಪಿ. ಒಂದಂಕಿ ಗಿಳಿದರೂ ಆಶ್ಚರ್ಯವಿಲ್ಲ.

 ಈ ಸ್ಥಿತಿಯಲ್ಲಿ ಶಿವಮೊಗ್ಗದಲ್ಲಿ ರಾಜ್ಯ ಬಿ.ಜೆ.ಪಿ. ನಾಯಕತ್ವಕ್ಕೇ ಸವಾಲು ಎದುರಾಗಿದೆ. ಹಳೆಮೈಸೂರಿನಲ್ಲಿ ಜೆ.ಡಿ.ಎಸ್.‌ ಕಬಳಿಸುತಿದ್ದ ಜಾತ್ಯಾತೀತ ಮತಗಳು ಕಾಂಗ್ರೆಸ್‌ ಪಾಲಾದರೆ ಕಾಂಗ್ರೆಸ್‌ ಹೆಚ್ಚು ಸಂಸದರನ್ನು ಪಡೆಯುವ ಅವಕಾಶ ಸೃಷ್ಟಿಯಾಗಿಬಿಡುತ್ತದೆ. ಈ ವಾತಾವರಣದಲ್ಲಿ ಉತ್ತರ ಕನ್ನಡಕ್ಕೆ ಬಂದರೆ ಅನಂತಕುಮಾರ ಕಳೆದುಕೊಳ್ಳುವ ಬಿ.ಜೆ.ಪಿ. ಅವಕಾಶ ಕ್ಕಾಗಿ ಕಾಗೇರಿ ವಿಶ್ವೇಶ್ವರ ಹೆಗಡೆ ಕಾದು ಕುಳಿತಿದ್ದಾರೆ. ಇದರ ಮಧ್ಯೆ ಹೈಕಮಾಂಡ್‌ ಚಕ್ರವರ್ತಿ ಸೂಲಿಬೆಲೆ ನಿಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣರ ಪರಿವಾರ,ಬಿ.ಜೆ.ಪಿ. ಪ್ರೇಮ ಪರೀಕ್ಷಿಸಲು ಹೊರಟಂತಿರುವಾಗ ಅನಂತಕುಮಾರ ಹೆಗಡೆ ತಾನಲ್ಲದಿದ್ದರೆ ಸೂಲಿಬೆಲೆ, ವಿಶ್ವೇಶ್ವರ ಹೆಗಡೆ ಬೇಡ ಶಶಿಭೂಷಣ ಹೆಗಡೆ ಯವರಿಗೆ ಅವಕಾಶ ನೀಡಿ ಎಂದಿದ್ದಾರಂತೆ. ಇವರ ಮಧ್ಯೆ ರದ್ದಿ ಪತ್ರಿಕೆಯಿಂದ ತಲೆ ಎತ್ತುತ್ತಿರುವ ಕೋಣೆಮನೆಮನೆಮೂಲೆ ಸೇರುವ ಸಾಧ್ಯತೆ ದಟ್ಟವಾಗಿದೆ.

ಬಿ.ಜೆ.ಪಿ.ಯಲ್ಲಿ ಮೋದಿ ಅಲೆ ಎಂದು ಅಪನಂಬಿಕೆಯಿಂದ ಟಿಕೇಟ್‌ ಮೇಲಾಟ ಪ್ರಾರಂಭವಾಗಿದ್ದರೆ. ಉತ್ತರ ಕನ್ನಡ ಕಾಂಗ್ರೆಸ್‌ ಉತ್ತರ ದ್ರುವ, ದಕ್ಷಿಣದ್ರುವ ಎನ್ನುವಂತಿದೆ.

ಅಂಜಲಿ ನಿಂಬಾಳ್ಕರ್‌ ಗೆ ಟಿಕೆಟ್‌ ಕೊಡಲು ಸಿದ್ಧರಾಗಿರುವ ಮಂಕಾಳು, ದೇಶಪಾಂಡೆ ನಡುವೆ ಶಿರಸಿಯ ಮಾವ- ಅಳಿಯ  ಶಿವರಾಮ್‌ ಹೆಬ್ಬಾರ್‌ ,ಅಂಜಲಿ, ರವೀಂದ್ರ ನಾಯ್ಕ ಬದಲು ಬೇರೆ ಅಭ್ಯರ್ಥಿ ತರೋಣ ಎನ್ನುತಿದ್ದಾ ರಂತೆ!

 ಆ ಬೇರೆ ಅಭ್ಯರ್ಥಿ ಕುಮಾರ ಬಂಗಾರಪ್ಪನವರ? ಸ್ವಯಂ ಭೀಮಣ್ಣ ನಾಯ್ಕರ? ಅಥವಾ ಜಿ.ಟಿ. ನಾಯ್ಕರ ? ಎಂಬುದು ಸದ್ಯಕ್ಕೆ ಬಿಡಿಸಲಾಗದ ಒಗಟು.

ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಭೀಮಣ್ಣ ಅಥವಾ ಕುಮಾರ ಬಂಗಾರಪ್ಪ ಅಥವಾ ಬಿ.ಕೆ.ಹರಿಪ್ರಸಾದ್‌ ಕಾಂಗ್ರೆಸ್‌ ಅಭ್ಯರ್ಥಿಗಳಾದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಸಮೀಕ್ಷೆಗಳಿವೆಯಂತೆ. ಕೊನೆ ಹಂತದಲ್ಲಿ ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಉತ್ತರ ಕನ್ನಡದ ಮೇಲ್ವರ್ಗದ ಜಾತಿ ಪ್ರೇಮ ಸಾಬೀತಾಗಲಿದ್ದು ಕಾಂಗ್ರೆಸ್‌ ಅನಯಾಸವಾಗಿ ಗೆಲ್ಲುವ ಅವಕಾಶವಿದೆ.ಇನ್ನುಳಿದಂತೆ ಈ ವಾರದ ಕೊನೆಗೆ ಎಲ್ಲವೂ ಬಟಾಬಯಲಾದ ಮೇಲೆ ಮತ್ತೆ ಸಮೀಕ್ಷೆಯ ದಾರಿ ಬೇರೆ ಆಗಲಿದೆ. (tEjaswi)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *