ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ….

ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು.

ಅವರಮ್ಮ ಲಕ್ಷ್ಮಿ ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಅವರ ಕೈ ತುತ್ತು ತಿನ್ನದ ವ್ಯಕ್ತಿಗಳೇ ಪಾಪಿಗಳು. ಈ ಮನೆಯ ಹಿರಿಯ ಜೀವ ನಾರಾಯಣ ನಾಯ್ಕ ಕೋಟ್‌ ತೊಟ್ಟರಷ್ಟೇ ವಕೀಲರಲ್ಲ, ಕೋಟ್‌ ಇಲ್ಲದೆ ಕುಂತಲ್ಲಿ ನಿಂತಲ್ಲಿ ಪರಿಹಾರ ಸೂಚಿಸಬಲ್ಲರು. ಇವರೆಲ್ಲರೂ ಒಂದೇ ಮನೆಯಲ್ಲಿದ್ದಾಗ ಅಲ್ಲಿ ದಾಸೋಹ ನಡೆದಿದ್ದೇ ಹೆಚ್ಚು.

ಆರು ತಿಂಗಳ ಹಿಂದೆ ಕೃಷ್ಣಣ್ಣ ಅಕಾಲಿಕವಾಗಿ ನಿಧನರಾದ ವಾರ್ತೆ ಬಂತು,ಈಗ ಎರಡು ವಾರಗಳ ಕೆಳಗೆ ಅಮ್ಮನದ್ದು ಬಹುಶ: ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು.

ನಮಗೆ ಸುದ್ದಿಯ ಧಾವಂತಕ್ಕಿಂತ ನಮ್ಮಂಥ ಅದೆಷ್ಟೋ ಜನರಿಗೆ ವಿಷಯ ಮುಟ್ಟಿಸುವ ಜವಾಬ್ಧಾರಿ. ಒಳಿತು ಕೆಡುಕುಗಳೇನೇ ಇರಲಿ ಗುರು ಒಂದು ಸಂದೇಶ ಕಳಿಸುತ್ತಾರೆ, ದಿನೇಶಣ್ಣ ಸಿಕ್ಕರೆ ಒಂದ್ನಿಮಿಷದ ಮಾತು, ರಾಜೇಶ್‌ ಈಗ ಕರೆ ಪಡೆಯಲಿಕ್ಕಿಲ್ಲ ಅಂದುಕೊಂಡಾಗೆಲ್ಲಾ ಹಲೋ ಎನ್ನುತ್ತಾರೆ.

ಹೀಗೆ ವಕೀಲ ಎನ್.ಡಿ.ನಾಯ್ಕರಿಂದ ಹಿಡಿದು ಅವರ ಮೊಮ್ಮಗ ದಿಶಾಂತನ ವರೆಗೆ ಅವರ ಮನೆಯವರೆಲ್ಲಾ ನಮಗೆ ಆತ್ಮೀಯರೆ, ಕೆಲಸವಿಟ್ಟುಕೊಂಡು ಅವರ ಮನೆಗೆ ಹೋಗಿದ್ದಕ್ಕಿಂತ ವಿನಾಕಾರಣ ಎನ್ನುವಂತೆ ಹೋಗಿದ್ದೇ ಹೆಚ್ಚು.

ಅಮ್ಮ ಒಳಗಿಂದ ಬಂದವರು ಸುಮಾರ್‌ ದಿವ್ಸಾತಲ್ಲ ಬರಲಿಲ್ಲ ಎನ್ನುತಿದ್ದರು. ಚಾ ಕುಡಿಸದೆ ಕಳುಹಿಸುತ್ತಿರಲಿಲ್ಲ. ಇಂಥ ಮನೆಯಲ್ಲಿ ಸೂತಕವಾದರೆ ಅರಗಿಸಿಕೊಳ್ಳುವುದು ಕಷ್ಟ.

ಎಲ್ಲರನ್ನೂ ಇವ ನಮ್ಮವ…. ಎಂದೆಣಿಸುತ್ತಲೇ ಎಲ್ಲರ ಅಮ್ಮನಾಗಿದ್ದ ಲಕ್ಷ್ಮೀ ಸಿದ್ಧಾಪುರದ ಹೆಗ್ಗೇರಿಯ ಪಟೇಲರ ಮಗಳು, ಅಪ್ಪ ತನ್ನ ಮಗಳು ವಿದ್ಯಾವಂತೆಯಾಗಲಿ ಎಂದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಹುಬ್ಬಳ್ಳಿಯ ಸೈನಿಕ ಶಾಲೆಗೆ ಸೇರಿಸಿದ್ದರು!

ನಮ್ಮೂರಲ್ಲಿ ಹುಡುಗಿಯರಿಗ್ಯಾಕೆ ಕಲಿಕೆ ಎಂದು ಉಪೇಕ್ಷಿಸಿ ವಯಸ್ಸು ತುಂಬುವ ಮೊದಲೇ ಮದುವೆ ಮಾಡಿ ಜವಾಬ್ಧಾರಿ ಕಳೆದುಕೊಳ್ಳುತಿದ್ದ ಕಾಲದಲ್ಲಿ ಲಕ್ಷ್ಮಿ ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. ಅದೇ ಅವಧಿಯಲ್ಲಿ ಅವರ ದೂರದ ಸಂಬಂಧಿ ಐಸೂರು ನಾರಾಯಣ ನಾಯ್ಕ ವಕೀಲರಾಗಿ ಸಮೂದಾಯದ ಮೆರವಣಿಗೆಯೊಂದಿಗೆ ಕೋರ್ಟ್‌ ಮೆಟ್ಟಿಲೇರಿದ್ದರು.

ಆಗತಾನೆ ಪಕ್ಕದ ಕಾಗೋಡಿನಲ್ಲಿ ಗೇಣಿ ರೈತರ ಚಳವಳಿ ನಡೆದು ಜನ ಸಂಘಟಿತರಾಗುತಿದ್ದರು. ಊಳುವವನೇ ಒಡೆಯ ಕಾನೂನು ಬಂತು ಗೇಣಿದಾರರ ಅರ್ಜಿ ತುಂಬಲು ಎನ್.ಡಿ. ನಾಯ್ಕರ ಮನೆಯೇ ಛತ್ರ. ಪುಟ್ಟಮಕ್ಕಳ ಸಂಸಾರದ ನೊಗ ಹೊತ್ತಿದ್ದ ಯುವ ವಕೀಲ ನಾರಾಯಣ ನಾಯ್ಕ ಹೊತ್ತಿಂದೊತ್ತಿಗೆ ಮನೆ ಸೇರುತ್ತಿರಲಿಲ್ಲ, ಬಂದರೆ ಒಬ್ಬರೇ ಬರುತ್ತಿರಲಿಲ್ಲ. ಎಳೆ ಮಕ್ಕಳ ತಾಯಿ ಬೇಸರಿಸದೆ ಮನೆ ಸಾಗಿಸುತಿದ್ದಳು, ಬಂದವರಿಗೆಲ್ಲಾ ಚಾ, ಊಟ ಕೊಟ್ಟು ಓಟ ಕೀಳುವ ಸ್ಥಿತಿ. ಆದರೆ ಆಕೆಗೆ ಮನೆಯ, ಶಿಕ್ಷಣದ ಸಂಸ್ಕಾರ ನೆರವಿಗೆ ಬಂತು ಮನೆ ಸಂಭಾಳಿಸುವ ಜೊತೆಗೆ ಊರು ಸಂತೈಸಿದರು. ಅವರೇ ಹಿರಿಯವಕೀಲ ಎನ್.ಡಿ. ನಾಯ್ಕರ ಪತ್ನಿ ಲಕ್ಷ್ಮಿ ನಾಯ್ಕ ಈಗ ಎರಡು ವಾರಗಳ ಹಿಂದೆ ಗತಿಸಿದರು.

ಇವರ ಕಿರಿಯ ಮಗ ರಾಜೇಶ್‌ ರಾಷ್ಟ್ರಪತಿ ಭವನದಲ್ಲಿ ಹಿರಿಯ ಅಧಿಕಾರಿ ಊರಿಗೆ ಬಂದಾಗ ಯಾವ ಹಮ್ಮಿಲ್ಲದೆ ಹುಟ್ಟೂರು ಐಸೂರಿನಲ್ಲಿ ಇರಬಲ್ಲರು, ಅವರ ಊರಿಗೆ ಬಂದಾಗ ತಮ್ಮ ಪೇಟೆ ಮನೆಯಲ್ಲಿರುವುದಕ್ಕಿಂದ ಕುಗ್ರಾಮ ಐಸೂರಿನಲ್ಲಿರುವುದೇ ಹೆಚ್ಚು ಅವರ ಪತ್ನಿ ಮಗಳು ಕೂಡಾ!

ಹೀಗೆ ತಾಯಿ ಸೈನಿಕ ಶಾಲೆಯಲ್ಲಿ ಓದಿ ಗ್ರಹಿಣಿಯಾಗಬಲ್ಲರು, ಮಗ ಆಯ್.‌ ಎ. ಎಸ್.‌ ಅಧಿಕಾರಿಯಾಗಿ ಹಳ್ಳಿ ಹೈದನಂತಿರಬಲ್ಲರು ಅವರ ಉಳಿದ ಮಕ್ಕಳು ಎಲ್ಲರೊಳಗೊಂದಾಗಿ ಸರಳವಾಗಿ ಇರಬಲ್ಲರು. ಇಂಥ ಸರಳ ಕುಟುಂಬದ ಕೆಲವರು ಅನೇಕ ವೇದಿಕೆಗಳಲ್ಲಿ ಸನ್ಮಾನಿತರಾಗಿದ್ದಾರೆ. ನಮ್ಮ ಸಾಹಿತ್ಯ ಪರಿಷತ್‌ ಚಟುವಟಿಕೆಗಳ ಅವಧಿಯಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಎನ್.ಡಿ. ನಾಯ್ಕರನ್ನು ಭುವನಗಿರಿಯಲ್ಲಿ ಸನ್ಮಾನಿಸಿ ಈ ದಂಪತಿಗಳಿಂದ ಸಮಾಜಕ್ಕೆ ದೊರೆತದ್ದು ಅನೇಕ ಆದರೆ ಇವರ ಕುಟುಂಬದ ಕುಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾಗಿದ್ದು ಈ ಕುಟುಂಬದ ಮೇಲೆ ಸಮಾಜಕ್ಕಿರುವ ಅನ್ನದ ಋಣಭಾರದಿಂದ ಎಂದು ಬಣ್ಣಿಸಿದ್ದೆವು.

ಅದೇ ಕುಟುಂಬ ಈಗ ದೇಶದ ಉಪರಾಷ್ಟ್ರಪತಿಗಳನ್ನು ಮನೆಗೆ ಕರೆಸಿ ಸತ್ಕರಿಸಿದೆ. ಗೌರವಾಧರ, ಪ್ರೀತಿ-ವಿಶ್ವಾಸಗಳ ಆ ಮನೆಯಲ್ಲಿ ಈಗ ಹಿರಿಯಮ್ಮನಿಲ್ಲ ಅವರ ಜಾಗ ತುಂಬಲು ಮೂರುಜನ ಸೊಸೆಯರು, ಮೊಮ್ಮಕ್ಕಳಿದ್ದಾರೆ. ಹಿರಿಯ ಅಧಿಕಾರಿಯಾಗಿರುವ ರಾಜೇಶ್‌ ಮೊನ್ನೆಯ ಕಾರ್ಯಕ್ರಮದಲ್ಲಿರಲಿ ಅದರ ಹಿಂದಿನ ದಿನಗಳಲ್ಲಿರಲಿ ಒಟ್ಟಾರೆ ಬದುಕಿನುದ್ದಕ್ಕೂ ತುಂಬಿದ ಕೊಡದಂತಿದ್ದಾರೆ. ಸಿದ್ಧಾಪುರ ಉತ್ತರ ಕನ್ನಡದ ಹಿರಿಮೆಗೆ ಗರಿ ಮೂಡಿಸಿರುವ ರಾಜೇಶ್‌ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸುತ್ತಿರುವುದು ಈ ಮಣ್ಣಿನ ಹಿರಿಮೆ, ಮತ್ತು ಅವರದ್ದೇ ಆದ ವೈಯಕ್ತಿಕ ಘನತೆಯಿಂದ. ಈ ಕುಟುಂಬ ತಣ್ಣಗಿರಲಿ ಎಂದು ಹಾರೈಸಲು ಅಶ್ರುತರ್ಪಣದ ಸಂದರ್ಭ ಸಾಕ್ಷಿಯಾಗಿರುವುದು ವೇದನೆ. ದೇವರಿದ್ದರೆ ಅವರ ಕುಟುಂಬವನ್ನು ನೆಮ್ಮದಿಯಿಂದ ಇಡಲಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ…. ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು. ಅವರಮ್ಮ ಲಕ್ಷ್ಮಿ ಸಾಕ್ಷಾತ್‌...

ಜಾಗತಿಕ ಪ್ರಜೆಗಳಾಗಲು ಉಪರಾಷ್ಟ್ರಪತಿ ಕರೆ

ಈ ವಿಶ್ವ ಪರಿಸರದಿಂದ ಉಳಿದಿದೆ. ಮರ,ನೀರು,ಮಣ್ಣು ಉಳಿಸಿಕೊಳ್ಳದಿದ್ದರೆ ಪ್ರಪಂಚವೇ ಉಳಿಯಲ್ಲ ಎಂದು ಎಚ್ಚರಿಸಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉತ್ತರ ಕನ್ನಡ ಜಿಲ್ಲೆಯಂಥ ಶ್ರೀಮಂತ ಪರಿಸರ...

ಸರಳತೆಯಿಂದ ಗಮನ ಸೆಳೆದ ಉಪರಾಷ್ಟ್ರಪತಿ ಜಗದೀಪ ಧನಕರ್!‌

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉಪಸ್ಥಿತಿಯ ಸಿದ್ದಾಪುರದ ಬಹುನಿರೀಕ್ಷಿತ ಕಾರ್ಯಕ್ರಮ ನುಡಿನಮನ ಇಂದು ಸಂಪನ್ನವಾಯಿತು. ಹಿರಿಯ ವಕೀಲ ಎನ್‌,ಡಿ.ನಾಯ್ಕ ರ ಪತ್ನಿ, ಉಪ ರಾಷ್ಟ್ರಪತಿಗಳ ವಿಶೇಶ...

vp visit @ siddapur ಉಪ ರಾಷ್ಟ್ರಪತಿಗಳ ಭೇಟಿಗೆ ಸಿದ್ಧ (ವಾದ) ಪುರ

ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದ ನೆಲಕ್ಕೆ ಮೊಟ್ಟಮೊದಲ ಬಾರಿಯೆಂಬಂತೆ ಭಾರತದ ಉಪರಾಷ್ಟ್ರಪತಿಗಳ ಆಗಮನವಾಗುತ್ತಿದೆ. ಉಪರಾಷ್ಟ್ರಪತಿಗಳ ಕಛೇರಿಯ ವಿಶೇಶ ಅಧಿಕಾರಿ ರಾಜೇಶ್‌ ನಾಯ್ಕರ ತಾಯಿ ಲಕ್ಷ್ಮಿ ನಾರಾಯಣ...

SSLC Results-1 2025 : ಎಸ್ ಎಸ್ ಎಲ್ ಸಿಯಲ್ಲಿ ಶೇ.66.14 ವಿದ್ಯಾರ್ಥಿಗಳು ತೇರ್ಗಡೆ, 22 ಮಂದಿ ರಾಜ್ಯಕ್ಕೆ ಪ್ರಥಮ, ದಕ್ಷಿಣ ಕನ್ನಡ ಮೊದಲ ಸ್ಥಾನ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ...

Latest Posts

ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ…. ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು. ಅವರಮ್ಮ ಲಕ್ಷ್ಮಿ ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಅವರ ಕೈ ತುತ್ತು ತಿನ್ನದ ವ್ಯಕ್ತಿಗಳೇ ಪಾಪಿಗಳು. ಈ ಮನೆಯ ಹಿರಿಯ ಜೀವ ನಾರಾಯಣ ನಾಯ್ಕ ಕೋಟ್‌ ತೊಟ್ಟರಷ್ಟೇ ವಕೀಲರಲ್ಲ, ಕೋಟ್‌ ಇಲ್ಲದೆ ಕುಂತಲ್ಲಿ ನಿಂತಲ್ಲಿ ಪರಿಹಾರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *