

ಹಲವು ಕ್ಷೇತ್ರ, ವಿಚಾರಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿರುವ ಸಿದ್ದಾಪುರ ಈಗ ಜಿಲ್ಲೆಯ ಅತಿ ಹೆಚ್ಚು ತಲಾ ಆದಾಯದ ತಾಲೂಕಾಗಿ ಹೊರಹೊಮ್ಮಿದೆ. ಅಭಿವೃದ್ಧಿ, ಮೂಲಭೂತ ಅನುಕೂಲಗಳ ವಿಚಾರದಲ್ಲಿ ಈಗಲೂ ಹಿಂದುಳಿದಿರುವ ಸಿದ್ದಾಪುರ ತಾಲೂಕು ತಲಾ ಆದಾಯದಲ್ಲಿ ಮುಂದಿರುವುದನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ಧೇಶನಾಲಯ ಖಚಿತಪಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ೧೨ ತಾಲೂಕುಗಳಲ್ಲಿ ಜೊಯಡಾ ಬಿಟ್ಟರೆ ಅತ್ಯಂತ ಹಿಂದುಳಿದ ತಾಲೂಕು ಸಿದ್ದಾಪುರ ಆದರೆ ಈ ತಾಲೂಕು ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿರುವುದು ವಿಶೇಶ.
ತಾಲೂಕುವಾರು ತಲಾ ಆದಾಯ… ಸಿದ್ದಾಪುರ- ೩೩೩೮೫೯ ರೂ.


ಶಿರಸಿ-೨೬೨೦೫೫, ಕುಮಟಾ ೨೫೦೬೧೭,ಹೊನ್ನಾವರ-೨೪೯೩೪೫, ಜೊಯಡಾ೨೦೮೩೫೦. ಹಳಿಯಾಳ-೨೦೬೦೬೦, ಕಾರವಾರ೨೦೫೬೦೮, ಮುಂಡಗೋಡು-೧೯೮೦೦೦,
ಯಲ್ಲಾಪುರ-೧.೯೨೩೯೪, ಅಂಕೋಲಾ..೧೮೯೦೬೩, ಭಟ್ಕಳ-೧೮೧೩೦೬, ದಾಂಡೇಲಿ೮೮.೦೬೦
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ಧಾಪುರದ ತಲಾ ಆದಾಯ ೩.೩೩ ಸಾವಿರಗಳಾಗಿದ್ದರೆ, ಅತಿ ಕಡಮೆ ತಲಾ ಆದಾಯದ ತಾಲೂಕಾಗಿ ದಾಂಡೇಲಿ ಗುರುತಿಸಿಕೊಂಡಿದೆ. ದಾಂಡೇಲಿ ತಾಲೂಕಿನ ತಲಾ ಆದಾಯ ಒಂದು ಲಕ್ಷರೂಪಾಯಿ ಕುಡಾ ತಲುಪದಿರುವುದು ಸೋಜಿಗ.
ಜಿಲ್ಲೆಯ ಆರ್ಥಿಕ ಮೂಲಗಳಾದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಎಲ್ಲಾ ತಾಲೂಕುಗಳಲ್ಲೂ ವಿಸ್ತರಿಸಿವೆ. ಆದರೆ ಸಿದ್ದಾಪುರದ ಜನಸಂಖ್ಯೆ ಕಡಿಮೆ, ವೈಯಕ್ತಿಕ ಜಮೀನು ಪ್ರಮಾಣ ಹೆಚ್ಚು. ಈ ಕಾರಣಗಳ ಜೊತೆಗೆ ಕೃಷಿ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಸಿದ್ಧಾಪುರದ ಪ್ರಗತಿ ಇಲ್ಲಿಯ ತಲಾ ಆದಾಯ ಹೆಚ್ಚಿಸಿರಬಹುದು ಎಂದು ಅಂದಾಜಿಸಲಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






