ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ !

(ನಾಳಿನ ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ ದೊಡ್ಡ ಕಾರಣಗಳು)ಹಿಂದೆಂದೂ ಕಂಡಿರದಷ್ಟುದೊಡ್ಡ ಸಂಖ್ಯೆಯಲ್ಲಿ ನಾಳೆ ರೈತರು ಮುನ್ನೆಲೆಗೆ ಬರಲಿದ್ದಾರೆ. ಹೊಟ್ಟೆಗೆ ಹಿಟ್ಟು/ಅನ್ನ ತಿನ್ನುವವರೆಲ್ಲ ಜಾತಿ/ಧರ್ಮ/ರಾಜಕೀಯ ಪಕ್ಷಭೇದ ಮರೆತು ರೈತರನ್ನು ಬೆಂಬಲಿಸಬೇಕು. ಏಕೆ ಬೆಂಬಲಿಸಬೇಕು ಎಂಬುದಕ್ಕೆ ಮುಖ್ಯ ಕಾರಣಗಳು ಇಂತಿವೆ:

1. ಎಲ್ಲ ಸುಧಾರಿತ ದೇಶಗಳಲ್ಲೂ ರೈತರ ಶ್ರಮಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಅಮೆರಿಕದಲ್ಲಿ ರೈತರ ಉತ್ಪಾದನಾ ವೆಚ್ಚದ ಶೇ 12ರಷ್ಟು, ಐರೋಪ್ಯ ಸಂಘದವರು ಶೇ. 20ರಷ್ಟು ಮತ್ತು ಜಪಾನ್‌, ದ.ಕೊರಿಯಾ, ನಾರ್ವೆ, ಐಸ್ಲಾಂಡ್‌ ದೇಶಗಳಲ್ಲಿ ಶೇಕಡಾ 40-60ರಷ್ಟು ಸಬ್ಸಿಡಿ ನೀಡಿವೆ (2019ರಲ್ಲಿ). ಆದರೆ ಭಾರತ ದೇಶದಲ್ಲಿ ಶೂನ್ಯಕ್ಕಿಂತ ಶೇ 5ರಷ್ಟು ಕೆಳಗೆ! ಅಂದರೆ ರೈತರೇ ಬಳಕೆದಾರರಿಗೆ ಶೇಕಡಾ 5ರಷ್ಟು ಸಬ್ಸಿಡಿ ಕೊಡುತ್ತಾರೆ. ಜಗತ್ತಿನ ಅತಿ ಬಡ ಕೃಷಿಕರ ಬೆವರಿನ ದುಡಿಮೆಯ ಫಲ ಪಡೆಯುವ ನಾವು ಅದರ ಮೌಲ್ಯದಲ್ಲೂ ವಿನಾಯ್ತಿ ಕೇಳುತ್ತೇವೆ. ಅಷ್ಟೇ ಅಲ್ಲ

;2. ಅನುಕೂಲಸ್ಥ ದೇಶಗಳು ಹೊಸ ಹೊಸ ಮಾರ್ಗಗಳ ಮೂಲಕ ರೈತರಿಗೆ ಇನ್ನಷ್ಟು ವಿನಾಯ್ತಿ ಕೊಡುವ ಯೋಜನೆ ಹಾಕಿವೆ. ಅಂದರೆ ಉತ್ಪಾದನೆಗೆ ಅಷ್ಟೇ ಅಲ್ಲ; ಭೂಮಿಯ ಒಟ್ಟಾರೆ ಒಳಿತಿಗೆ (ಭೂತಾಪವನ್ನು ಕಡಿಮೆ ಮಾಡುವತ್ತ ರೈತರು ನೀಡುವ ಕೊಡುಗೆಗೆ) ಬೆಲೆ ಕಟ್ಟಿ ಅದಕ್ಕೂ ಪರಿಹಾರ ನೀಡತೊಡಗಿವೆ. ಅದನ್ನ ಪರಿಸರ ಕಲ್ಯಾಣ ಕೊಡುಗೆ ಎಂದು ಹೆಸರಿಸಿ ರೈತರ ಕೈಗೆ ಇನ್ನೂ ತುಸು ಹಣ ಸೇರುವಂತೆ ಮಾಡುತ್ತಿದ್ದಾರೆ.

3. ಸುಧಾರಿತ ದೇಶಗಳ ಆ ಅನುಕೂಲಸ್ಥ ರೈತರೊಂದಿಗೆ ನಮ್ಮ ಬಹುತೇಕ ಬಡ, ಹಿಂದುಳಿದ, ಅನಕ್ಷರಸ್ಥ ಕೃಷಿಕರು ಪೈಪೋಟಿ ಮಾಡಬೇಕು. ವಿಶೇಷವಾಗಿ ಬರ, ನೆರೆ ಹಾವಳಿಗೆ ತುತ್ತಾಗಿ ಯಾವುದೇ ಫಸಲಿನ ಬೆಲೆ (ಉದಾ ಈರುಳ್ಳಿಯ ಬೆಲೆ) ಜಾಸ್ತಿಯಾದಾಗ ಅದನ್ನು ತಗ್ಗಿಸಲೆಂದು ಸರಕಾರ ವಿದೇಶದಿಂದ ಅದನ್ನು ಆಮದು ಮಾಡಿಕೊಳ್ಳುತ್ತದೆ. ಮಳೆಯಲ್ಲಿ ನೆನೆದ ಈರುಳ್ಳಿಯನ್ನು ರೈತ ಮಹಿಳೆ ಕಷ್ಟಪಟ್ಟು ಹೆಕ್ಕಿ ಹೇಗೋ ಒಣಗಿಸಿ ಮಾರುಕಟ್ಟೆಗೆ ಸಾಗಿಸಿ, ತುಸು ಜಾಸ್ತಿ ಬೆಲೆ ಕೇಳಿದರೆ “ಇಲ್ಲ! ಈಜಿಪ್ತಿನಿಂದ ಈರುಳ್ಳಿ ಕಮ್ಮಿ ಬೆಲೆಗೆ ಬಂದಿದೆ, ನಿಮ್ಮದು ಬೇಡ” ಎನ್ನುತ್ತಾರೆ ವರ್ತಕರು.

4. ಈ ಕಾರಣಕ್ಕಾಗಿಯೇ ರೈತರು ತಮ್ಮ ಫಸಲಿಗೆ ಕನಿಷ್ಟ ಬೆಂಬಲ ಬೆಲೆಯನ್ನಾದರೂ (ಕಬೆಂಬೆ) ಕೊಡಿ ಎಂದು ಕೇಳುತ್ತಿದ್ದಾರೆ. ಅಂಥ 22 ಬೆಳೆಗಳಿಗೆ ಕಬೆಂಬೆ ಇದೆ ಹೌದು; ಆದರೆ ಅಕ್ಕಿ-ಗೋಧಿ ಬಿಟ್ಟರೆ ಇನ್ನುಳಿದವು ಹೆಸರಿಗಷ್ಟೆ. ಸರಕಾರ ಅವನ್ನು ಖರೀದಿ ಮಾಡುವುದಿಲ್ಲ. ಸರಕಾರದ್ದೇ ದಾಖಲೆಗಳ ಪ್ರಕಾರ ಹತ್ತು ಬೆಳೆಗಳ ಶೇ 70ರಷ್ಟು ಭಾಗ ಕಬೆಂಬೆಗಿಂತ ಕಡಿಮೆ ದರದಲ್ಲಿ ಮಾರಾಟವಾಗಿವೆ. ಅಕ್ಕಿ-ಗೋಧಿಗಿದ್ದ ಕಬೆಂಬೆಯನ್ನೂ ಸರಕಾರ ಹಿಂತೆಗೆದುಕೊಂಡೀತೆಂದು ಪಂಜಾಬ್‌ ರೈತರು ಭೀತರಾಗಿದ್ದಾರೆ.

5. ಕೃಷಿಯ ಕೂಲಿ ವೆಚ್ಚ, ಒಳಸುರಿಗಳ ಬೆಲೆ ವರ್ಷವರ್ಷಕ್ಕೂ ಹೆಚ್ಚುತ್ತಿದೆ. ಜೊತೆಗೆ ಹವಾಗುಣ ಸಂಕಷ್ಟಗಳಿಂದಾಗಿ ರೈತನ ಬೆಳೆ ಪ್ರಮಾಣ ಅನಿಶ್ಚಿತವಾಗುತ್ತಿದೆ. ಸರಕಾರಿ ನೌಕರರ ಸಂಬಳ ಕಳೆದ ಇಪ್ಪತ್ತು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಾಗಿದೆ. ರೈತರು ಮಾತ್ರ ಮೇಲೇಳುವ ಬದಲು ನಿಂತಲ್ಲೇ ಕುಸಿಯುತ್ತಿದ್ದಾರೆ.

6. ರೈತರು ಅನಿವಾರ್ಯವಾಗಿ ಖಾಸಗಿ ಧನಿಕರಿಂದ ಸಾಲ ಪಡೆಯುತ್ತಾರೆ. ಉದ್ಯಮಿಗಳು ಸರಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದು, ಮರುಪಾವ್ತಿ ಮಾಡಲಾಗದಿದ್ದರೆ ಸರಕಾರ ಅಂಥ ಸಾಲವನ್ನು ರೈಟ್‌ ಆಫ್‌ (ಮನ್ನಾ) ಮಾಡಿಬಿಡುತ್ತದೆ. 2019ರಲ್ಲಿ ಉದ್ಯಮಿಗಳು ಪಡೆದ 254 ಸಾವಿರ ಕೋಟಿ ರೂಪಾಯಿಗಳಷ್ಟು ಇಂಥ ಕೆಟ್ಟ ಸಾಲಗಳನ್ನು ಸರಕಾರ ಮನ್ನಾ ಮಾಡಿದೆ.ರೈತರಿಗೆ ಸರಕಾರ ಆಗೊಮ್ಮೆ ಈಗೊಮ್ಮೆ ನೆರವನ್ನು ಘೋಷಿಸುತ್ತದೆ. ಆದರೆ ಅದರ ವೈಖರಿ ಹೇಗಿರುತ್ತದೆ ಎಂದರೆ (ಇಂದಿನ ಡೆಕ್ಕನ್‌ ಹೆರಾಲ್ಡ್‌ ವರದಿಯ ಪ್ರಕಾರ) 2019ರಲ್ಲಿ ಘೋಷಿಸಿದ್ದ ನೆರೆ ಪರಿಹಾರ ಧನದಲ್ಲಿ ಶೇ. 10ಕ್ಕಿಂತ ಕಡಿಮೆ ಹಣವನ್ನು ಸರಕಾರ ಬಿಡುಗಡೆ ಮಾಡಿದೆ. (ಘೋಷಿಸಿದ್ದು 427 ಕೋಟಿ; ಬಿಡುಗಡೆ ಮಾಡಿದ್ದು 41ಕೋಟಿ. ಅದರಲ್ಲೂ ಎಷ್ಟು ಅಂಶ ರೈತರಿಗೆ ತಲುಪಿದೆ ಲೆಕ್ಕಕ್ಕೆ ಸಿಗಲಿಕ್ಕಿಲ್ಲ).

ಇದುವರೆಗಿನ ಎಲ್ಲ ಸರಕಾರಗಳೂ ರೈತರ ಹಿತವನ್ನು ಕಡೆಗಣಿಸಿದ್ದಕ್ಕೇ ಈಗ ಸ್ಫೋಟಕ ಸ್ಥಿತಿ ಬಂದಿದೆ. ದನಿ ಇಲ್ಲದ ಜನರು ಈ ಬಾರಿ ಹೇಗೋ ದೇಶಾದ್ಯಂತ ಒಗ್ಗಟ್ಟಾಗಿ ದನಿ ಎತ್ತಿದ್ದಾರೆ. ಅವರು ಆಹಾರವನ್ನಷ್ಟೇ ಅಲ್ಲ, ತಮ್ಮ ನಿತ್ಯದ ಶ್ರಮದ ಮೂಲಕ ಕ್ಲೈಮೇಟ್‌ ವಿಪತ್ತುಗಳಿಗೆ ಕೈಲಾದ ಪರಿಹಾರವನ್ನೂ ನಮಗಾಗಿ ಕಲ್ಪಿಸುತ್ತಿದ್ದಾರೆ. ಅವರ ದನಿಗೆ ನಮ್ಮ ದನಿಯನ್ನೂ ಸೇರಿಸೋಣ ಬನ್ನಿ. ಅಷ್ಟಾದರೂ ಅನ್ನದ ಋಣ ತೀರಿಸೋಣ. ನಮ್ಮ ಬೆಂಬಲವನ್ನು ತೋರಿಸೋಣ.

*[ಈ ಪೋಸ್ಟ್‌ನ ಮೊದಲರ್ಧದ ಮಾಹಿತಿ ಮೂಲ: ಡೌನ್‌ ಟು ಅರ್ಥ್‌ ಪಾಕ್ಷಿಕ 15-31, ಜನವರಿ 2021 ಸುನಿತಾ ನರೇನ್‌ ಸಂಪಾದಕೀಯ; ಇದರೊಂದಿಗೆ ಜೋಡಿಸಿದ ಚಿತ್ರಗಳು ಹಿಂದಿನವು= ಸಾಂದರ್ಭಿಕ ಅಷ್ಟೆ; ಮೊದಲನೆಯದು ಐಎನ್‌ಎಸ್‌, ಎರಡನೆಯದು ಪಿಟಿಐ ಕೃಪೆ; )

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *