60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿಯಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ಪ್ರಕ್ರಿಯೆಯ ಮಾಹಿತಿ

ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಾಕ್ರಮದ ಮುಂದಿನ ಹಂತ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

COVID-19 vaccine

ನವದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಾಕ್ರಮದ ಮುಂದಿನ ಹಂತ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಸಿಕೆ ಅಭಿಯಾನದ ಮುಂದಿನ ಹಂತದಲ್ಲಿ 60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. ಈ ಪೈಕಿ 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. 

ನೋಂದಣಿ ಹೇಗೆ?
ಇನ್ನು ಕೊರೊನಾ ಲಸಿಕೆ ಪಡೆಯಲು ಮೊಬೈಲ್‌ ಮೂಲಕ ಮನೆಯಲ್ಲಿಯೇ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು. ಮೊದಲಾಗಿ www.cowin.gov.in ಗೆ ಹೋಗಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕು. ಮೇಲೆ ತಿಳಿಸಿದ ಕೊವಿನ್‌ ವೆಬ್‌ಸೈಟ್‌ಗೆ ಹೋದಾಗ ಅಲ್ಲಿ ರಿಜಿಸ್ಟರ್‌ ಫಾರ್‌ ವ್ಯಾಕ್ಸಿನೇಶನ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ‘ಗೆಟ್‌ ಒಟಿಪಿ’ ಪಟ್ಟಿ ಮೇಲೆ ಕ್ಲಿಕ್‌ ಮಾಡಬೇಕು. ಆ ಕೂಡಲೇ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. 

ಅದನ್ನು ದಾಖಲಿಸಿ ಅಲ್ಲಿ ಕಾಣಿಸುವ ‘ವೆರಿಫೈ ಬಟನ್‌’ ಕ್ಲಿಕ್‌ ಮಾಡಬೇಕು. ಒಟಿಪಿ ಸರಿಯಾಗಿ ನಮೂದಿಸಿದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಬಳಿಕ ಅಲ್ಲಿ ನಿಮ್ಮ ಕುರಿತು ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. (ಮೊದಲಾಗಿ ಯಾವ ಫೋಟೊ ಐಡಿ ಪ್ರೂಫ್ ಎಂಬುದನ್ನು ತಿಳಿಸಬೇಕು. ಉದಾ: ಡ್ರೈವಿಂಗ್‌ ಲೈಸನ್ಸ್‌, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಇತ್ಯಾದಿ. ಅನಂತರ ಕಾರ್ಡ್‌ನ ಸಂಖ್ಯೆ ನಮೂದಿಸಬೇಕು.

ಬಳಿಕ ಕಾರ್ಡ್‌ನಲ್ಲಿ ಇರುವ ರೀತಿಯಲ್ಲಿಯೇ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಈಗ ಲಸಿಕೆ ಪಡೆಯಲು ಅರ್ಹತೆಯ ಕುರಿತು ಮಾಹಿತಿ ನೀಡಬೇಕು. ಅಂದರೆ 60 ವರ್ಷ ಮೇಲ್ಪಟ್ಟವರು, ಜತೆಗೆ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವ 45ರಿಂದ 59 ವರ್ಷದೊಳಗಿನ ನಾಗರಿಕರು, ಪಟ್ಟಿ ಮಾಡಿರುವ 20 ರೀತಿಯ ಅನಾರೋಗ್ಯ ಸಮಸ್ಯೆ ಇರುವವರು. ಹೃದಯ ಸಮಸ್ಯೆ, ತೀವ್ರ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗೆ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವವರು, ಪಾರ್ಶ್ವವಾಯು ಸಂಬಂಧಿ ಕಾಯಿಲೆ ಉಳ್ಳವರು, 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು, ಕಿಡ್ನಿ, ಲಿವರ್‌, ಇತರ ಕ್ಯಾನ್ಸರ್‌ ಕಾಯಿಲೆ ಉಳ್ಳವರು, ಎಚ್‌ಐವಿ ಸೋಂಕಿತರು ತಮ್ಮ ಮಾಹಿತಿ ನೀಡಬೇಕು. ಇದಾದ ಬಳಿಕ ಕೆಳಬದಿಯಲ್ಲಿರುವ ರಿಜಿಸ್ಟರ್‌ ಬಟನ್‌ ಕ್ಲಿಕ್‌ ಮಾಡಿದಾಗ ನಿಮ್ಮ ನೋಂದಣಿ ಖಚಿತವಾಗಿರುವ ಕುರಿತು ಮಾಹಿತಿ ಬರುತ್ತದೆ.

ಒಂದು ಮೊಬೈಲ್‌ನಿಂದ ನಾಲ್ಕು ಸದಸ್ಯರ ನೋಂದಣಿ ಸಾಧ್ಯ
ಒಂದು ಬಾರಿ ಓರ್ವ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿದ ಬಳಿಕ ಇತರ ಮೂವರನ್ನು ಇದೇ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲಿ ಅಕೌಂಟ್‌ ಡಿಟೇಲ್ಸ್‌ ಎಂಬ ಪಟ್ಟಿ ಕಾಣಿಸುವುದು. ಅದರಲ್ಲಿ ಇತರೆ ಮೂವರ ಮಾಹಿತಿ (ಈ ಮೊದಲು ನೀಡಿದಂತೆಯೇ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಮೊಬೈಲ್‌ ನಂಬರ್‌ ಹೊರತುಪಡಿಸಿ ಇತರ ಎಲ್ಲ ಮಾಹಿತಿಗಳು ಪ್ರತ್ಯೇಕವಾಗಿರುತ್ತದೆ) ನೀಡಿ ಹೆಸರು ನೋಂದಾಯಿಸಬಹುದು. ಇಷ್ಟು ಮಾಹಿತಿ ನೀಡಿದ ಬಳಿಕ ಮತ್ತೂಮ್ಮೆ ನೋಂದಣಿ ಖಚಿತವಾದ ಮಾಹಿತಿ ಬರುತ್ತದೆ. ಅಗತ್ಯ ಬಿದ್ದರೆ ನೋಂದಣಿಯನ್ನು ಲಸಿಕೆ ಪಡೆಯುವ ಹಿಂದಿನ ದಿನದೊಳಗೆ ಡಿಲೀಟ್‌ ಮಾಡುವುದಕ್ಕೂ ಅವಕಾಶವಿರುತ್ತದೆ.

ದಿನಾಂಕ ಮತ್ತು ಸಮಯ ನಿಗದಿ
ಅಕೌಂಟ್‌ ಡಿಟೇಲ್‌ ಪೇಜ್‌ಗೆ ಹೋಗಿ ಅಲ್ಲಿ ನಿಮ್ಮ ಹೆಸರಿನ ಎದುರು ಇರುವ ಶೆಡ್ನೂಲ್‌ ಕೊಂಡಿಗೆ ಕ್ಲಿಕ್‌ ಮಾಡಿದಾಗ ಬುಕ್‌ ಅಪಾಯಿಂಟ್‌ಮೆಂಟ್‌ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್‌, ಪಿನ್‌ಕೋಡ್‌ ನಮೂದಿಸಿದಾಗ ನಿಮ್ಮ ಹತ್ತಿರದ ಕೇಂದ್ರಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿದಾಗ ಅಲ್ಲಿ ಲಭ್ಯವಿರುವ ದಿನಾಂಕ ಕಾಣಿಸುತ್ತದೆ. ಇವುಗಳಲ್ಲಿ ನಿಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು “ಬುಕ್‌’ ಬಟನ್‌ ಕ್ಲಿಕ್‌ ಮಾಡಿದರೆ ನೋಂದಣಿ ಪೂರ್ಣವಾದ ಮಾಹಿತಿ ಲಭ್ಯವಾಗುವುದು. 

ಅಲ್ಲಿರುವ ನಿಮ್ಮ ಹೆಸರು, ಕೇಂದ್ರ ಮೊದಲಾದ ಮಾಹಿತಿಗಳನ್ನು ಗಮನಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಕನ್ಫರ್ಮ್ ಬಟನ್‌ ಕ್ಲಿಕ್‌ ಮಾಡಿದರೆ “ಅಪಾಯಿಂಟ್‌ಮೆಂಟ್‌ ಸಕ್ಸಸ್‌ಫುಲ್‌’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಡೌನ್‌ಲೋಡ್‌ ಮಾಡಿಟ್ಟು ಲಸಿಕೆ ಪಡೆಯುವ ದಿನ ನೀವು ನೋಂದಾಯಿಸಿದ ಕೇಂದ್ರಕ್ಕೆ ಹೋಗಿ ತೋರಿಸಿದರೆ ನಿಮಗೆ ಲಸಿಕೆ ನೀಡಲಾಗುತ್ತದೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *