prashant kishor interview-ಅಮಿತ್ ಶಾ ಕೆಲಸಕ್ಕೆ ಬಾರದ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್: ಪ್ರಶಾಂತ್ ಕಿಶೋರ್

ಅಮಿತ್ ಶಾರ ಅಭಿಮಾನಿಗಳು ಮರೆಯದೇ ಓದಿರಿ-ಪುರುಷೋತ್ತಮ ಬಿಳಿಮಲೆ:

ಹೊಸದಿಲ್ಲಿ: “ನಾನು ದುರಹಂಕಾರಿ ಎಂದು ಭಾವಿಸಬೇಡಿ, ಆದರೆ ಅಮಿತ್ ಶಾ ಅತ್ಯಂತ ಓವರ್-ರೇಟೆಡ್ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್ ಆಗಿದ್ದಾರೆ. ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಬಹಳ ಚಾಣಾಕ್ಷ ಚುನಾವಣಾ ತಂತ್ರಜ್ಞ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಅವರಿಗೆ ತೋರಿಸಲು ಯಾವ ಸಾಧನೆಯಿದೆ?” ಎಂದು ಪಶ್ಚಿಮ ಬಂಗಾಳದಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

‘ದಿ ಟೆಲಿಗ್ರಾಫ್‍’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಯಾವತ್ತೂ ಇತ್ತು. ಆದರೆ ಹೆಚ್ಚಿನವರು ನಮ್ಮನ್ನು ನಂಬಿರಲಿಲ್ಲ. ಅಬ್ಬರದ ಪ್ರಚಾರ ಯಾವತ್ತೂ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದಿಲ್ಲ. ಇದು ಭಾಗಶಃ ಬಿಜೆಪಿಯ ದುರಹಂಕಾರದ, ಪ್ರಮುಖವಾಗಿ ಅಮಿತ್ ಶಾ ಅವರಂತಹ ನಾಯಕರ ದುರಹಂಕಾರದ ಪರಿಣಾಮ. ಅವರೆಲ್ಲ ಆಕಾಶದಲ್ಲಿಯೇ ಹಾರಾಡಿ, ನೆಲವನ್ನು ಮರೆತು ಬಿಟ್ಟರು. ಬಿಜೆಪಿ ತನ್ನನ್ನು ವಿಜೇತ ಎಂದು ಘೋಷಿಸಿಕೊಂಡೇ ಚುನಾವಣಾ ಕಣಕ್ಕಿಳಿಯುತ್ತದೆ, ಅವರು ಬಹಳಷ್ಟು ಸದ್ದು ಮಾತ್ರ ಮಾಡುತ್ತಾರೆ,” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಅಮಿತ್ ಶಾ ಅವರಿಗೆ ವೇದಿಕೆಯಲ್ಲಿ ನಿಲ್ಲಿಸಲು ಅತ್ಯಂತ ವರ್ಚಸ್ವಿ ನಾಯಕ ನರೇಂದ್ರ ಮೋದಿ ಇದ್ದಾರೆ. ಅವರ ಕೈಯ್ಯಲ್ಲಿ ಅಪಾರ ಸಂಪನ್ಮೂಲಗಳೂ ಇವೆ. ಸಂಘ ಬೆಂಬಲಿತ ಪಕ್ಷದ ದೊಡ್ಡ ಜಾಲವೂ ಇದೆ, ಸರಕಾರ ಮತ್ತದರ ಏಜನ್ಸಿಗಳ ಬೆಂಬಲವೂ ಇದೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವೂ ಇದೆ. ಆದರೂ ಅವರು ಸೋತರು. ಇದು ನಿಮಗೆ ಅಮಿತ್ ಶಾ ಅವರ ಅಸಲಿ ಸಾಮರ್ಥ್ಯ ಎಂದು ತೋರಿಸುತ್ತದೆ ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಇದು ನನ್ನ ಮತ್ತು ಅಮಿತ್ ಶಾ ಅವರ ನಡುವಿನ ಮೂರನೇ ಮುಖಾಮುಖಿ ಹಾಗೂ ಮೂರು ಬಾರಿಯೂ ನಾನು ಅವರನ್ನು ಸೋಲಿಸಿದ್ದೇನೆ- ಬಿಹಾರದಲ್ಲಿ ೨೦೧೫ರಲ್ಲಿ, ದಿಲ್ಲಿಯಲ್ಲಿ ಹಾಗೂ ಈಗ ಬಂಗಾಳದಲ್ಲಿ. ಮತ್ತೆ ಆಂಧ್ರ ಮತ್ತು ಪಂಜಾಬ್‍ನಲ್ಲೂ ಅವರನ್ನು ಸೋಲಿಸಿದ್ದೇವೆ, ಅವರು ಕೆಲಸಕ್ಕೆ ಬಾರದ ರಾಜಕೀಯ ಮ್ಯಾನೇಜರ್. ಒಬ್ಬ ರಾಜಕಾರಣಿಯಾಗಿ ಅಮಿತ್ ಶಾ ಅವರ ಮೇಲೆ ನನಗೆ ದೊಡ್ಡ ಗೌರವವೇನಿಲ್ಲ ಎಂದು ನನಗೆ ಹೇಳಬೇಕಾಗಿದೆ” ಎಂದು ಪ್ರಶಾಂತ್ ಕಿಶೋರ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.ಸೌಜನ್ಯ : ವಾರ್ತಾಭಾರತಿ ೪.೫.೨೦೨೧

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *