Smukhi local news- ಫ್ರಾ ಮತ್ತು ಗೆ ಗೆ ಪ್ರಶಸ್ತಿ, ಸಮಾನಮನಸ್ಕರ ಸಮಾಜಮುಖಿ ಕೆಲಸ

ತಮ್ಮಣ್ಣ ಬೀಗಾರರಿಗೆ ಅಡ್ವೈಸರ್ ಪ್ರಶಸ್ತಿ

ತಮ್ಮಣ್ಣ ಬೀಗಾರರ ‘ಫ್ರಾಗಿ ಮತ್ತು ಗೆಳೆಯರು’ ಮಕ್ಕಳ ಕಾದಂಬರಿಗೆ 2020 ನೇ ಸಾಲಿನ ಮಕ್ಕಳ ಸಾಹಿತ್ಯಕ್ಕಾಗಿ ರಾಜ್ಯಮಟ್ಟದಲ್ಲಿ ನೀಡುವ ಅಡ್ವೈಸರ್ ಪ್ರಶಸ್ತಿ ದೊರಕಿದೆ. ಮಂಡ್ಯ ಜಿಲ್ಲೆಯ ಅಡ್ವೈಸರ್ ಪತ್ರಿಕೆ ಸ್ಥಾಪಿಸಿರುವ ಈ ಪ್ರಶಸ್ತಿಯು 3000ರೂ ನಗದು ಹಾಗೂ ಪ್ರಶಸ್ತಿಪತ್ರಗಳನ್ನು ಒಳಗೊಂಡಿದೆ. ಬೀಗಾರರ ಇದೇ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಪುಸ್ತಕ ಸೊಗಸು ಬಹುಮಾನ’ ಕೂಡಾ ಇತ್ತೀಚೆಗೆ ಬಂದಿದೆ. ಫ್ರಾಗಿ ಮತ್ತು ಗೆಳೆಯರು ಕಾದಂಬರಿಯು ‘ಇ’ ಬುಕ್ ಮತ್ತು ‘ಆಡಿಯೊ’ ಬುಕ್ ಆಗಿಕೂಡಾ ಓದುಗರ ಮೆಚ್ಚಿಗೆ ಗಳಿಸಿದೆ. ಬೀಗಾರರು ಮಕ್ಕಳಿಗಾಗಿಯೇ ಬರೆಯತ್ತಿದ್ದು ಅವರು ಕವನ ಸಂಕಲನಗಳು, ಕಥಾ ಸಂಕಲನಗಳು, ಲಲಿತ ಬರಹಗಳು, ಕಾದಂಬರಿಗಳು ಹಾಗೂ ಮಕ್ಕಳಿಗಾಗಿ ಚಿತ್ರ ಪುಸ್ತಕ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಮಾನಮನಸ್ಕರ ಸಮಾಜಮುಖಿ ಕೆಲಸ… ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದಾಗಿ ಸಂಪೂರ್ಣ ಮನೆ ಹಾನಿ ಆದವರಿಗೆ ಹಾಗೂ ಭಾಗಶಃ ಹಾನಿ ಆದ ಕುಟುಂಬಕ್ಕೆ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಮಾನ ಮನಸ್ಕರು ಸಂಪೂರ್ಣ ಮನೆ ಹಾನಿ ಆದ ಹಾಗೂ ಭಾಗಶಃ ಮನೆ ಆದ ಸಂತ್ರಸ್ಥರಿಗೆ 1ಲಕ್ಷದ 27ಸಾವಿರದ 500ನೂರು ಮೌಲ್ಯದಲ್ಲಿ ಜಿಂಕ್ ಶೀಟ್(ತಗಡು) ಹಾಗೂ ಟಾರ್ಪಾಲ್‍ಗಳನ್ನು ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕ ಕಂಪನಿಯ ಆವರಣದಲ್ಲಿ ಸಾಂಕೇತಿಕವಾಗಿ ವಿತರಿಸಿ ನಂತರ ಸಂತೃಸ್ಥರ ಮನೆಗೆ ತೆರಳಿ ಬುಧವಾರ ವಿತರಿಸಿದರು.
ಸಂಪೂರ್ಣ ಮನೆ ಹಾನಿ ಆದವರಿಗೆ ಜಿಂಕ್ ಶೀಟ್(ತಗಡು) ಹಾಗೂ ಭಾಗಶಃ ಮನೆ ಆದವರಿಗೆ ಟಾರ್ಪಾಲ್‍ಗಳನ್ನು ವಿತರಿಸಲಾಯಿತು.ಎಸ್.ಆರ್.ಹೆಗಡೆ ಕುಂಬಾರಕುಳಿ, ರವೀಂದ್ರ ಹೆಗಡೆ ಹಿರೇಕೈ, ಗ್ರಾಪಂ ಸದಸ್ಯ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ, ಅನಂತ ಶಾನಭಾಗ ಹಾರ್ಸಿಕಟ್ಟಾ, ಡಾ.ರವಿ ಹೆಗಡೆ ಹೊಂಡಗಾಸಿಗೆ, ಡಿ.ಕೆ.ನಾಯ್ಕ ತೆಂಗಿನಮನೆ,ಶಶಿಧರ ಹೆಗಡೆ ಹುಕ್ಲಮಕ್ಕಿ, ರಮೇಶ ಹೆಗಡೆ ಹಾರ್ಸಿಮನೆ, ದರ್ಶನ ಹೆಗಡೆ ಹೊನ್ನೆಹದ್ದ, ಪ್ರಮೋದ ಕೊಡಿಯಾ ಹೊನ್ನೆಹದ್ದ, ಸತೀಶ ಮುಠ್ಠಳ್ಳಿ, ಮಂಜು ಹುಬ್ಬಗೈ ಇತರರಿದ್ದರು.

ಸಿದ್ಧಾಪುರ ಕೊಪ್ಪ ಬಳಿ ಕೆಟ್ಟುನಿಂತಿದ್ದ ಮಾರುತಿ ಒಮಿನಿ ವಾಹನದ ಮೇಲೆ ಕಲ್ಲು ಹೊಡೆದು ಹಾನಿ
ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲು ಕೋರಿ ಮಾಲಕ ರಾಜು ನಾಯ್ಕ ಪೊಲೀಸರಿಗೆ ದೂರಿದ್ದಾರೆ.
ಕೋಲಶಿರ್ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ದೇವಕಿ H ನಾಯ್ಕ್ ರಿಗೆ 2006-07 ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಇಂತಹ ಕಾರ್ಯಕ್ರಮ ಅಪರೂಪದ್ದಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಶಿವಣ್ಣ ನಟನೆಯ ‘ಬೈರಾಗಿ’ ಸಿನಿಮಾ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಹಿಟ್!

ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.

A still from byeragi

ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.

‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.

ಸಿನಿಮಾದಲ್ಲಿ ಅಂಜಲಿ ನಾಯಕಿಯಾಗಿ ನಟಿಸಿದ್ದಾರೆ. ಬೈರಾಗಿಯಲ್ಲಿ ಪೃಥ್ವಿ ಅಂಬರ್, ಯಶೋ ಶಿವಕುಮಾರ್, ಉಮಾಶ್ರೀ ಮತ್ತು ಶಶಿಕುಮಾರ್ ಮುಂತಾದವರು ನಟಿಸಿದ್ದಾರೆ.

ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಉಳಿದ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು. ತಯಾರಕರು ಒಂದು ಬೃಹತ್ ಸೆಟ್ ಅನ್ನು ನಿರ್ಮಿಸಲು ಯೋಜಿಸಿದ್ದಾರೆ. “ನಾಯಕನ ಪರಿಚಯ ಮಾಡುವ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗುವುದು, ಮತ್ತು ಅದಕ್ಕಾಗಿ ಒಂದು ಸೆಟ್ ಅನ್ನು ನಿರ್ಮಿಸಲು ನಾವು ಯೋಜಿಸುತ್ತಿದ್ದೇವೆ. ಹಾಡಿನ ಚಿತ್ರೀಕರಣಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಮತ್ತು ತಂತ್ರಜ್ಞರನ್ನು ಸೇರಿಸಲು ಯೋಜಿಸುತ್ತಿದ್ದೇವೆ. ಇದು ಎಲ್ಲಾ ಹವಾಮಾನ ಮತ್ತು ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಎಲ್ಲವೂ ಯೋಜನೆಯಂತೆ ನಡೆದರೆ, ನಾವು ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣವನ್ನು ಮುಗಿಸುತ್ತೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಶಿವರಾಜಕುಮಾರ್ ಭಜರಂಗಿ 2. ಬಿಡುಗಡೆಗಾಗಿ ಕಾಯುತ್ತಿದೆ. ಈ ಸಿನಿಮಾ ಬಿಡುಗಡೆಯ ನಂತರ ಶಿವಣ್ಣ ತನ್ನ 124 ನೇ ಚಿತ್ರದ ಸೆಟ್ ಗೆ ಸೇರಲಿದ್ದಾರೆ. ರಾಮ್ ಧೂಳಿಪುಡಿ ನಿರ್ದೇಶಿಸಲಿದ್ದಾರೆ. ಈ ಚಿತ್ರವು ಈ ತಿಂಗಳು ತೆರೆಗೆ ಬರಲಿದೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *