ಜೆ. ಆಯ್. ನಾಯ್ಕ ನಿಧನ & ಗಣೇಶ್ ಹೆಗಡೆ ಜನ್ಮಶತಾಬ್ಧಿ ಹಾಗೂ ಇತರ ಸುದ್ದಿಗಳು

ಹೆಗಡೆ ಜನ್ಮಶತಾಬ್ಧಿ- ಸಮಾಜದ ಎಲ್ಲ ವರ್ಗಗಳ ಜನರ ಅಭಿಮಾನಕ್ಕೆ ಪಾತ್ರರಾಗಿದ್ದ ಗಣೇಶ ಹೆಗಡೆ ದೊಡ್ಮನೆ ಶಿರಸಿ- ಸಿದ್ದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ವಿಶೇಷವಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ವಲಯ ಮತ್ತು ಧಾರ್ಮಿಕವಾಗಿ ನೀಡಿದ ಕೊಡುಗೆಗಳ ನೆನಪಿಗಾಗಿ ಅವರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸಬೇಕೆಂಬ ಕೋರಿಕೆಯನ್ನು ಆಪ್ತರು ಮತ್ತು ಅಭಿಮಾನಿಗಳು ಸಲ್ಲಿಸಿದ್ದು ಈ ಕಾರ್ಯಕ್ರಮವನ್ನು ಬರುವ ಡಿಸೆಂಬರ ತಿಂಗಳಿನಲ್ಲಿ ಹಮ್ಮಿಕೊಳ್ಳಲು ಶಿಕ್ಷಣ ಪ್ರಸಾರಕ ಸಮಿತಿ ನಿರ್ಧರಿಸಿ ದೆ.

ಗಣೇಶ ಹೆಗಡೆ ದೊಡ್ಮನೆ ಜನ್ಮ ಶತಾಬ್ದಿ ಕಾರ್ಯಕ್ರಮದ ಸ್ವರೂಪವನ್ನು ನಿರ್ಧರಿಸುವ ಕುರಿತು ದಿನಾಂಕ:೦೩-೧೦-೨೦೨೧ರಂದು ಬೆಳಿಗ್ಗೆ ೧೦.೩೦ ಕ್ಕೆ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಸಭಾಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು , ಹೆಗಡೆಯವರನ್ನು ಹತ್ತಿರದಿಂದ ಬಲ್ಲವರು, ಒಡನಾಡಿಗಳು ಮತ್ತು ಅಭಿಮಾನಿಗಳು ಈ ಸಭೆಯಲ್ಲಿ ಪಾಲ್ಗೊಂಡು ಹೆಗಡೆಯವರ ಜನ್ಮ ಶತಾಬ್ದಿ ಕಾ ರ‍್ಯಕ್ರಮದ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಲು ಉಪಾಧ್ಯಕ್ಷರಾದ ಡಾ.ಶಶಿಭೂಷಣ ವಿ ಹೆಗಡೆ ದೊಡ್ಮನೆ ಕೋರಿರುತ್ತಾರೆ.

ತ್ರಿದಿನ ಯಕ್ಷೋತ್ಸವ ಸಮಾಪನ

ಕಲೆಯನ್ನು ಆಸ್ವಾದಿಸುವುದು ಮನುಷ್ಯನ ಮೂಲಭೂತ ಅಸ್ತಿತ್ವಗಳಲ್ಲಿ ಒಂದು. ಮನಃಶಾಂತಿಗೆ ಕಲೆಯು ಆ ಮಟ್ಟಿನ ನೆಲೆಯನ್ನು ಕಲ್ಪಿಸುತ್ತದೆ. ಸಮೃದ್ಧ ಕಲೆಯೆನಿಸಿದ ಯಕ್ಷಗಾನವು ಒಂದು ಅದ್ಭುತವಾದ ಸೃಷ್ಠಿಯೇ ನಿಜ. ಇದನ್ನು ನಮ್ಮ ಭಾಗದ ಜನರು ನೋಡಿ ಆನಂದವನ್ನು ಅನುಭವಿಸುವುದಕ್ಕೆ ಉತ್ತಮ ಅಭಿರುಚಿಯ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ಕಲಾಭಾಸ್ಕರವು ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಪೋಷಿಸುವ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಹೆಗಡೆ ಕೊಡ್ತಗಣಿ ಹೇಳಿದರು.

ಇಟಗಿಯ ಕಲಾಭಾಸ್ಕರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಯಕ್ಷೋತ್ಸವ-೨೦೨೧ರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಹಲವಾರು ವರ್ಷಗಳಿಂದ ಕಲಾಭಾಸ್ಕರ ಜನಶಿಕ್ಷಣವನ್ನೂ ರಾಮಾಯಣ ಹಾಗೂ ಮಹಾಭಾರತದ ಕುರಿತಾದ ತಿಳುವಳಿಕೆಯನ್ನು ನೀಡುತ್ತಿದೆ. ನಿರಂತರವಾದ ಈ ಕಾರ್ಯವು ಸೊಗಸಾಗಿ ನವು ಪೋಷಿಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಾಜಗೋಡು ಪಂಚಾಯತ ಸದಸ್ಯ ಶ್ರೀಪಾದ ಹೆಗಡೆ ಬೈಲಳ್ಳಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಕಲೆಯ ಭಾಗವಾಗಬೇಕು. ಎಲ್ಲರಿಗೂ ತಮ್ಮ ಮನೆಯ ಅಂಗಳದಲ್ಲಿ ಪ್ರದರ್ಶನದ ಏರ್ಪಾಡು ಮಾಡಲಾಗದಿದ್ದರೂ ಆಟ ನಡೆಯುವಲ್ಲಿ ಅವಶ್ಯವಾಗಿ ಹೋಗುವುದರ ಮೂಲಕ ಪ್ರೋತ್ಸಾಹಿಸಬಹುದು. ಸಂಘಟನೆಯು ಕಷ್ಟಸಾಧ್ಯವಾದ ಕಾಲದಲ್ಲೂ ಯಕ್ಷಗಾನಗಳು ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ರಾ.ವಿ.ಪ್ರೌಢಶಾಲೆಯ ಮುಖ್ಯಾಧ್ಯಾಪಕ ಡಿ.ಜಿ.ಪೂಜಾರ ಹಾಗೂ ಕಲಾ ಪ್ರೋತ್ಸಾಹಕರಾದ ಭುವನೇಶ್ವರಿ ಹೆಗಡೆ ಹೊಸಗದ್ದೆಯವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ವಂದಿಸಿದರು. ನಂತರ ಎಂ.ಎ.ಹೆಗಡೆ ದಂಟಕಲ್ ವಿರಚಿತ “ಸೀತಾ ಪರಿತ್ಯಾಗ” ಎಂಬ ಆಖ್ಯಾನದ ಯಕ್ಷಗಾನ ಪ್ರದರ್ಶನವು ನಡೆಯಿತು.

ರಾಮಾಯಣದ ಅತ್ಯಂತ ರಸಘಟ್ಟಿ ಭಾಗವಾದ ಈ ಕತೆಯ ರಂಗದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಆದರೂ ಎಲ್ಲ ಕಲಾವಿದರ ಪರಿಶ್ರಮದಿಂದ ಉತ್ತಮ ರಂಗ ಕೃತಿಯಾಗಿ ಮೂಡಿ ಬಂತು. ಲಕ್ಷö್ಮಣನಾಗಿ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ ಹಿರಿಯ ಕಲಾವಿದ ಗೋಪಾಲ ಆಚಾರ್ಯ ತೀರ್ಥಹಳ್ಳಿಯವರು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಲಗದ್ದೆ ವಿನಾಯಕ ಹೆಗಡೆಯವರು ಗಂಭೀರವಾಗಿ ರಾಮನಾಗಿ ಕಾಣಿಸಿಕೊಂಡರು. ಪರಿತ್ಯಕ್ತ ಸೀತೆಯಾಗಿ ಹಲವು ಆಯಾಮಗಳಿಂದ ಇಟಗಿ ಮಹಾಬಲೇಶ್ವರ ಪ್ರಬುದ್ಧವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು. ಗುಂಜಗೋಡು ಗಣಪತಿ ಹೆಗಡೆಯವರು ಗೂಢಚಾರ ಭದ್ರನಾಗಿ ಹಾಗೂ ವಾಸಿಷ್ಠನಾಗಿ ಅಭಿನಯಿಸಿದರು. ವಾಲ್ಮೀಕಿಯಾಗಿ ಮತ್ತು ರಜಕನಾಗಿ ಮೂರೂರು ನಾಗೇಂದ್ರ ವಿಭಿನ್ನವಾಗಿ ನಟಿಸಿದರು. ನಾಗಪತಿ ಹೆಗಡೆ ಕೊಪ್ಪ ರಜಕನ ಪತ್ನಿಯಾಗಿ ಹಾಸ್ಯರಸವನ್ನು ಹರಿಸಿದರು. ಒಟ್ಟಾರೆಯಾಗಿ ಪ್ರೇಕ್ಷಕರು ರಸಾನಂದವನ್ನು ಅನುಭವಿಸಿದರು.

ನಿಧನ
ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಜಟ್ಯಪ್ಪ ಈಸ್ರಾ ನಾಯ್ಕ, ಕಾನಗೋಡ ಗುರುವಾರ ಸ್ವಗ್ರಹದಲ್ಲಿ ನಿಧನರಾಗಿರುತ್ತಾರೆ. ಇವರು ಒಬ್ಬ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು – ಮಿತ್ರ, ಮತ್ತು ನಿವೃತ್ತ ಸಂಘದ ಸದಸ್ಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ನಿವೃತ್ತ ನೌಕರರ ಸಂಘದವರು ಸಂತಾಪ ಸೂಚಿಸಿದ್ದಾರೆ.

ಜ್ಜಾಪಿಸಲೇ ಬೇಕಾದ
ದೊಡ್ಡಪ್ಪ (ಗುರುಗಳು) ಜೆ‌.ಆಯ್. ನಾಯ್ಕ್.

1) ಎಸ್.ಬಂಗಾರಪ್ಪನವರು
ಲೋಕೋಪಯೋಗಿ ಮಂತ್ರಿ
ಆಗಿದ್ದ ಸಮಯದಲ್ಲಿ
ಕಾನಗೋಡ ನಲ್ಲಿ ಇರುವ
ಗುತ್ತಿಮನೆ ಕುಂಬಾರರ ಸೊಸೈಟಿ
ಉದ್ಘಾಟನಾ ( ಸಭಾಕಾರ್ಯಕ್ರಮ ಮಾರುತಿ ದೇವಸ್ಥಾನದಲ್ಲಿ ) ಸಮಾರಂಭದಲ್ಲಿ
ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಮಾಡಿ ಬಂಗಾರಪ್ಪನವರ ಮೆಚ್ಚುಗೆ ಪಡೆದಿದ್ದರು.

2) 1978-79 ರ ಸಾಲಿನಲ್ಲಿ ಸ್ಟೈಪಂಡರಿ ಪದವಿದರರಾಗಿ ಕಾನಗೋಡ ಪ್ರಾಥಮಿಕ ಶಾಲೆಯಲ್ಲಿ part-time ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಲು ಪ್ರೇರಣೆ ನೀಡುತ್ತಿದ್ದರು.

  1. ಮಕ್ಕಳಿಗೆ ಭಾಷಣ ಮಾಡಲು
    ಕಲಿಸುತ್ತಿದ್ದರು.
  2. ಕಲಾವಿದರಾಗಿ ಗ್ರಾಮದ ಹಲವಾರು ನಾಟಕದಲ್ಲಿ ಅಭಿನಯಿಸಿದ್ದರು.
  3. ಕಾನಗೋಡಿನ ಜಾತ್ರಾ ಕಮಿಟಿಯ ಕಾರ್ಯದರ್ಶಿಯಾಗಿ ಅದೇಷ್ಟೋ ಜವಾಬ್ದಾರಿಗಳನ್ನು ನಿರ್ವಹಿಸಿದ ವ್ಯಕ್ತಿತ್ವ ಇವರದ್ದು.

ಇನ್ನು JIN ನೆನಪು ಮಾತ್ರ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. -ಮಿಥುನ್ ದೊಡ್ಮನೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *