ಚಂಪಾ.. ಚಿತ್ರ,ಕಾವ್ಯ ಇತ್ಯಾದಿ

ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ

ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾಸ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು. ಕೋಮುವಾದ ಜಾತಿವಾದ ಹಾಗೂ ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ ಚಾಟಿ ಬೀಸುತ್ತಿದ್ದ ಪರಿಣಾಮಕಾರಿ ಧ್ವನಿ. ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯಾಗಸವನ್ನು ಆವರಿಸಿದವರು. ಲಂಕೇಶ್,ತೇಜಸ್ವಿ,ಚಂಪಾ ಮೂವರು ಸೇರಿ ಅನೇಕ ಬಿರುಗಾಳಿ ಎಬ್ಬಿಸಿದವರು. ಬಂಡಾಯ ಸಾಹಿತ್ಯದಲ್ಲಿ ಬರಗೂರು, ಚಂಪಾ ಎರಡು ಮುಖ್ಯ ಸ್ತಂಭಗಳಾಗಿ ಬೆಳೆಸಿದವರು. ನವ್ಯದ ಮುಖ್ಯ ಸಾಹಿತಿಯಾಗಿ ಬೆಳೆದು ಬಂಡಾಯ ಸಾಹಿತ್ಯದ ಬಾವುಟ ಎತ್ತಿದವರು. ಅವರ ಕಾವ್ಯ,ನಾಟಕಗಳೂ ಸಾಹಿತ್ಯದಲ್ಲಿ ಗಣನೀಯ ಪರಿಣಾಮ ಬೀರಿದವು. ಅವರ ಟಿಂಗರ ಬುಡ್ಡಣ್ಣ , ಅಪ್ಪ,ಕೊಡೆಗಳು, ಕುಂಟಾ ಕುಂಟಾ ಕುರವತ್ತಿ ನಾಟಕಗಳು ನೋಡುಗರ ಮನದಲ್ಲಿ ವಿಚಾರಶೀಲತೆಯನ್ನು ಬಡಿದೆಬ್ಬಿಸಿದವು.

ನಂತರ ನಾಟಕವನ್ನು ತಮ್ಮ‌ಹರಿತ ವ್ಯಂಗ್ಯದ ಮೂಲಕ ಪ್ರತಿಗಾಮಿ ಪ್ರವೃತ್ತಿಗಳನ್ನು ಲೇವಡಿ ಮಾಡಲು ಪರಿಣಾಮಕಾರಿ ಸಾಧನವಾಗಿಸಿದರು. ಇಂದಿರಾ ಮತ್ತು ತುರ್ತುಪರಿಸ್ಥಿತಿ ವಿರುದ್ಧದ ಜಗದಂಬೆಯ ಬೀದಿ ನಾಟಕ( ಚಂಪಾರಿಗೆ ಜೈಲುವಾಸ ನೀಡಿದ್ದು.) ಸಾಯಿಬಾಬಾ ವಿರುದ್ದದ ಬುರುಡೀಬಾಬಾನ ಪವಾಡ, ಅಡಿಗರ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಲೇವಡಿ ಮಾಡಿದ ನಳಕವಿಯ ಮಹಾ ಮಸ್ತಕಾಭಿಷೇಕ ಅಂದು ಬಹಳ ಜನಪ್ರಿಯವಾಗಿದ್ದ ನಾಟಕಗಳು. ಅವರ ಕಾವ್ಯ,ನಾಟಕಗಳು ಬಹುಕಾಲ ಕನ್ನಡಿಗರ ಮನದಲ್ಲಿ ಜೀವಂತ.ಅವರೂ ಸೇರಿದಂತೆ ಮೂವರ ಸಂಪಾದಕತ್ವದಲ್ಲಿ ನವ್ಯದ ಒಂದು ಮುಖವಾಣಿಯಾಗಿ ಆರಂಭವಾದ “ಸಂಕ್ರಮಣ” ನಂತರ ಬಂಡಾಯದ ಆಧಾರ ಸ್ತಂಭವಾಗಿ ಬಹು ದೀರ್ಘ ಕಾಲ ಕನ್ನಡ ಓದುಗರನ್ನು ಹಲವು ವಿಚಾರಗಳ ಮೂಸೆಗೆ ಒಡ್ಡಿ ಬೆಳೆಸಿತು. ಹೊಸ ಸಾಹಿತಿಗಳನ್ನು ಪೋಷಿಸಿತು.ಅವರೊಡನೆ ನಾನು ಭಾಗವಹಿಸಿದ ಹೋರಾಟಗಳು, ಹಂಚಿಕೊಂಡ ವೇದಿಕೆಗಳೆಷ್ಟು ಲೆಕ್ಕವೇ ಇಲ್ಲ. 1979ರಲ್ಲಿ ನಾನು ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಅಧಿಕಾರಿಯಾಗಿ ಹೋದ ಕೂಡಲೇ ಮೊದಲು ಭೇಟಿಯಾದ ವ್ಯಕ್ತಿ ಅವರು. ಅವರ ಮನೆಯಲ್ಲಿ ಅವರನ್ನು ಭೇಟಿಯಾದ,ಹಲ ಹಲವು ವಿಷಯಗಳನ್ನು ಚರ್ಚಿಸಿದ ಸವಿ ನೆನಪು .ನಾನು ಹಿಂದೆಯೇ ಬರೆದಂತೆ ಲೋಹಿಯಾ ಮಾರ್ಕ್ಸ್ ಮತ್ತು ಗಾಂಧಿ ಬಗ್ಗೆ ಬರೆದ ಒಂದು ಪುಸ್ತಕ ನೀಡಿ ಅದರ ಮೂಲಕ ಮಾರ್ಕ್ಸ್‌ರವರ ವಿಚಾರಗಳ ಪರಿಚಯ ಮಾಡಿಸಿದವರು,ನಾನು ಮಾರ್ಕ್ಸ್‌ವಾದಿಯಾಗಲು ಒಂದು ಮುಖ್ಯ ಹಂತ ಅದು.

ಸಮಾಜವಾದಿಯಾಗಿದ್ದ ಅವರೊಡನೆ ಹಲವು ಸೈದ್ಧಾಂತಿಕ ಜಗಳ ಮಾಡಿದರೂ ಕೂಡಾ ಮುನಿಸಿಕೊಳ್ಳದೆ ಒಳ್ಳೆಯ ಸಂಬಂಧ ಬೆಳೆಸಿಕೊಂಡವರು. ಕಮ್ಯುನಿಸ್ಟ್ ವಿಚಾರಧಾರೆಯ ಹಲವು ಸಂಘಟನೆಗಳೊಡನೆ ಆಪ್ತ ಸಂಬಂಧ ಇಟ್ಟುಕೊಂಡವರು. ಇಳಿವಯಸ್ಸಿನಲ್ಲೂ ಪೋಲಿಸರ ನಿರ್ಬಂಧವನ್ನು ಧಿಕ್ಕರಿಸಿ ಅವರು ಭಾಗವಹಿಸಿದ, ಕಲುಬುರ್ಗಿಯವರ ನಿಧನದ ಒಂದು ವರ್ಷದ ನೆನಪಿನಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನಿಂದ ಧಾರವಾಡದವರೆಗೆ ನಡೆಸಿದ ವಾಹನ ಜಾಥಾ ಆ ಸಂದರ್ಭದಲ್ಲಿ ಅವರ ಮಾತುಗಳು ಅವರ ಬದ್ಧತೆ ಮತ್ತು ಹಿಂಜರಿಯದೆ ಮುನ್ನುಗ್ಗುವ ದೃಡತೆಗೆ ಪುರಾವೆಯಾಗಿದ್ದವು. ಹಾಗೆಯೇ ಗಣಿ ದರೋಡೆಕೋರರ ವಿರುದ್ಧ ನಡೆಸಿದ ಮೂರು ದಿನಗಳ ವಾಹನ ಜಾಥಾ ಅಚ್ಚಳಿಯದ ನೆನಪು.ಅವರದು ಯಾವಾಗಲೂ ಹೊಸ ವಿಚಾರಗಳ ಬಗ್ಗೆ ತೆರೆದ ಮನಸ್ಸು. ಯಾವುದೇ ವಿಚಾರ ಸಂಕಿರಣಗಳಲ್ಲಿ ಒಬ್ಬ ವಿದ್ಯಾರ್ಥಿಯಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಕಲಬುರ್ಗಿ ಕೊಲೆಯ ನಂತರ ಅವರ ಮೇಲೂ ಹಿಂದೂ ಭಯೋತ್ಪಾದಕರ ಕಣ್ಣಿದೆ ಎಂದರೂ ಹೆದರದೆ, ಪೋಲೀಸರ ಹಾಕುತ್ತಿದ್ದ ನಿರ್ಬಂಧಗಳ ಬಗ್ಗೆ ಕೇರ್ ಮಾಡದೆ ಎಲ್ಲ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ವೃದ್ಧಾಪ್ಯದ ದೈಹಿಕ ಸಮಸ್ಯೆ ಮಾತ್ರ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಿತ್ತು. ಅವರ ನಿಧನ ಕರ್ನಾಟಕದ ಜನತೆಗೆ, ಸಾಹಿತ್ಯಕ್ಕೆ ಬಹು ದೊಡ್ಡ ನಷ್ಟ. ನನಗಂತೂ ಒಬ್ಬ ವೈಯುಕ್ತಿಕ ಗೆಳೆಯರನ್ನು ಕಳೆದುಕೊಂಡ ಶೂನ್ಯಭಾವ. -gn nagraj

ಪ್ರಶ್ನೋತ್ತರ

ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.
ಅವರ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ.
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ.
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ.
ಚಿಕ್ಕೆಯಾಗಿ ಚಿಮುಕುತ್ತಾರೆ.
ಎಲ್ಲಿಯ ತನಕ?
ಇದ್ದವರು ಸಾಯುವ ತನಕ.
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
(1986)

-ಚಂದ್ರಶೇಖರ ಪಾಟೀಲ
‘ಅರ್ಧ ಸತ್ಯದ ಹುಡುಗಿ’ (ಕವನ ಸಂಕಲನ, 1989)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *