ಆಪ್‌ ಮತ್ತು ತ್ರಣಮೂಲ ಕಾಂಗ್ರೆಸ್‌ ನೇತೃತ್ವದಲ್ಲಿ ಪರ್ಯಾಯ ರಂಗ ಸ್ಥಾಪನೆಗೆ ರೈತ ಸಂಘದ ಒಲುವು!?

ಕರಪ್ಟ್‌ ಆಡಳಿತಪಕ್ಷ ಮತ್ತು ಕರಪ್ಟ್‌ ವಿರೋಧ ಪಕ್ಷಗಳಿಂದ ಉತ್ತಮ ಆಡಳಿತ ವ್ಯವಸ್ಥೆ, ಅಭಿವೃದ್ಧಿ ಸಾಧ್ಯವಿಲ್ಲ ಎಂದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ರೈತವಿರೋಧಿ ಕಾರ್ಪೋರೇಟ್‌ ಸರ್ಕಾರ ಮತ್ತು ಬ್ರಷ್ಟ ಆಡಳಿತದ ವಿರುದ್ಧ ಪರ್ಯಾಯ ಸರ್ಕಾರ ರಚನೆಗೆ ಒಲುವು ತೋರಿದ್ದಾರೆ. ಈ ವಿದ್ಯಮಾನ ರಾಜ್ಯದಲ್ಲಿ ಆಪ್‌, ತೃಣಮೂಲ ಕಾಂಗ್ರೆಸ್‌ ಗಳ ನೇತೃತ್ವದಲ್ಲಿ ಪರ್ಯಾಯ ರಂಗ ಸ್ಥಾಪನೆಯ ಸುಳಿವು ನೀಡಿದೆ.

ಭಾರತದಲ್ಲಿ ಈಗ ಕಾರ್ಪೋರೇಟ್‌ ಸರ್ಕಾರಗಳು ನಡೆಯುತಿದ್ದು ಪರ್ಯಾಯ ಸರ್ಕಾರ ರಚನೆ ಆಗದೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗಡಿಯ ತಾಳಗುಪ್ಪ ದಲ್ಲಿ ನಡೆದ ರೈತರ ಸಮಾವೇಶಕ್ಕೆ ಬಂದು ಸಿದ್ಧಾಪುರ ಮಳಲವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರಾ?  ರಾಜ್ಯ ಸರ್ಕಾರ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ (ರು). ಕೋಡಿಹಳ್ಳಿ ವಿರೋಧ ಪಕ್ಷಗಳು ಮಾಡುವ ಕೆಲಸವನ್ನು ಸಂಘ ಪರಿವಾರದ ಅಂಗ ಸಂಸ್ಥೆಗಳು ಮಾಡುತ್ತಿವೆ. ರಾಜ್ಯದ ಅರಾಜಕ ಸ್ಥಿತಿಗೆ ಕಾರಣವಾಗಿರುವ ಸಂಘದ ಅಂಗಸಂಸ್ಥೆಗಳನ್ನು ನಿಯಂತ್ರಿಸದ ಮುಖ್ಯಮಂತ್ರಿ ಮುಖ್ಯಮಂತ್ರಿ ಆಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ. ೪೦ ಪರ್ಸೆಟೇಜ್‌ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರತಿಪಕ್ಷವಾಗಿ ಜವಾಬ್ಧಾರಿಯಿಂದ ಕೆಲಸಮಾಡದ ಕಾಂಗ್ರೆಸ್‌ ಮತ್ತು ಆಡಳಿ ತಾರೂಢ ಬಿ.ಜೆ.ಪಿ.ಗಳಿಗೆ ಜನರ ಬಳಿ ಹೋಗಲು ನೈತಿಕತೆ ಇಲ್ಲ ಎಂದರು.

ದೇಶದಲ್ಲಿ ಇಂದು ಬಂಡವಾಳಶಾಹಿಗಳ ಪರ ಕಾರ್ಪೋರೇಟ್‌ ಸರ್ಕಾರ ನಡೆಯುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಬವಣೆ
 ಕೇಳುವವರಿಲ್ಲ ಬಂಡವಾಳಶಾಹಿಗಳ ದೇಶಮಾಡಲು ಹೊರಟಿರುವವರ ವಿರುದ್ಧ ಜನಜಾಗೃತಿ ಮಾಡಿ ಜನಪರ ಆಡಳಿತ ಜಾರಿಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಪಂಜಾಬ್‌ ನಲ್ಲಿ ಆದ ಪವಾಡ ರಾಜ್ಯದಲ್ಲೂ ಆಗುವ ಕಾಲ ದೂರವಿಲ್ಲ ಈ ಹಿನ್ನೆಲೆಯಲ್ಲಿ ಇದೇ ಏ೨೧ ರಿಂದ ಜನಾಂದೋಲನ ಪ್ರಾರಂಭವಾಗಲಿದೆ ಎಂದು ಚಂದ್ರಶೇಖರ್‌ ಪ್ರಕಟಿಸಿದರು.
. ಸರ್ಕಾರ ನಡೆಸುವ ಪರಿವಾರ ಜನವಿರೋಧಿಯಾಗಿ ವರ್ತಿಸುತ್ತಿದೆ. ರೈತರು ಬೆಳೆದ ಮಾವನ್ನು ಮುಸ್ಲಿಂ ರು ಖರೀದಿಸುತಿದ್ದಾರೆ. ರೈತರಿಗೆ ಖರೀದಿ ವ್ಯವಸ್ಥೆ ಮಾಡದೆ ಮುಸ್ಲಿಂ ರಿಗೆ ಮಾರಬೇಡಿ ಎನ್ನುವವರನ್ನು ನಿಯಂತ್ರಿಸದ ಸರ್ಕಾರ ರೈತವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ರೈತರ ಉತ್ಫನ್ನ ಖರೀದಿಸಲಿ, ರೈತರಿಗೆ ಬೆಂಬಲಬೆಲೆ ಕೊಟ್ಟು ರೈತರ ಹಿತ ಕಾಪಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ ಕೋಡಿಹಳ್ಳಿ ದೇಶದ ೬೦ ಪ್ರತಿಶತ ರೈತರು ಹಿಂದುಗಳಲ್ಲವೆ? ರೈತರು ಹಾನಿ ಅನುಭವಿಸಿ ಆತ್ಮಹತ್ಯೆಗೆ ಶರಣಾಗುತಿದ್ದಾರೆ. ಹಿಂದೂ, ಹಿಂದುತ್ವ ಎನ್ನುವ ಸರ್ಕಾರ ಹಿಂದೂ ರೈತರನ್ನು ರಕ್ಷಿಸುವ ಹೊಣೆ ಹೊರಬೇಕಲ್ಲವೆ? ಆಡಳಿತ ಪಕ್ಷ, ವಿರೋಧ ಪಕ್ಷ ಳೆಲ್ಲಾ ಬ್ರಷ್ಟರಾಗಿರುವುದರಿಂದ ದೇಶದ ಪರಿಸ್ಥಿತಿ ಹದಗೆಟ್ಟದೆ. ಈ ಅವ್ಯವಸ್ಥೆಗಳಿಗೆ ಪರ್ಯಾಯ ಸರ್ಕಾರವೊಂದೇ ಪರಿಹಾರ ಅದುಕೂಡಾ ಸಾಧ್ಯವಾಗುವ ಕಾಲ ದೂರವಿಲ್ಲ ಎಂದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *