ಲೋಕಲ್ news – ಮಹಿಳಾ ಸ್ವ ಸಹಾಯ ಸಂಘಗಳ ಅವ್ಯವಹಾರ ತನಿಖೆಗೆ ಮನವಿ

ಕೆ ಪಿ ಸಿ ಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷರಾದ ವಿ. ಎನ್. ನಾಯ್ಕ್ ರ ನೇತೃತ್ವದಲ್ಲಿ ತಾ. ಪಂ. ಸದಸ್ಯರಾದ ನಾಶಿರ್ ವಲ್ಲಿ ಖಾನ್ ಹಾಗೂ ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಮ್. ಟಿ. ಗೌಡ ಕಿಲವಳ್ಳಿ ಹಾಗೂ ಡಿ. ಸಿ. ಸಿ ಕಾರ್ಯದರ್ಶಿ ಸಾವೇರ ಡಿಸಿಲ್ವ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಗಂಗಾಧರ ಮಡಿವಾಳ ಹಾಗೂ ತಾಲೂಕಾ ಇಂಟೆಕ್ ಅಧ್ಯಕ್ಷರಾದ ರಾಮಕೃಷ್ಣ ನಾಯ್ಕ್ ಹಾಗೂ ತಾಲೂಕಾ ಕಾಂಗ್ರೆಸ್ ಸದಸ್ಯ ಲಂಭೋದರ ಹೆಗ್ಡೆ ಹಾಗೂ ಮಂಜುನಾಥ ನಾಯ್ಕ್ ಬೇಗಾರ್ ಅವರೊಂದಿಗೆ ಸಿದ್ದಾಪುರ ತಾಲೂಕಾ ಸ್ವಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳ ವ್ಯವಹಾರದಲ್ಲಿ ಅವ್ಯವಹಾರ ಹಾಗೂ ಗ್ರಾಮೀಣ ಕಲಾವಿದರ ಮೂಲಕ ಸರಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಚಾರ ನೀಡಲು ಅವಕಾಶ ವಂಚನೆ ಮಾಡಿದ ಕುರಿತು ಹಾಗೂ ತಾಲೂಕಿನ ಅಭಿವೃದ್ಧಿಯ ಕುರಿತು ಆಗ್ರಹಿಸಲು ವಿಧಾನ ಪರಿಸತ್ ವಿರೋಧ ಪಕ್ಸದ ನಾಯಕರಾದ ಬಿ. ಕೆ. ಹರಿಪ್ರಸಾದ ಹಾಗೂ ವಿಧಾನ ಪರಿಸತ್ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮಾಜಿ ರಾಜ್ಯ ಪಾಲರಾದ ಮಾರ್ಗರೆಟ್ ಆಲ್ವಾ ಅವರಿಗೆ ಯೋಗ್ಯ ಪರಿಶೀಲನೆ ಹಾಗೂ ತನಿಖೆ ಯೊಂದಿಗೆ ಕ್ರಮ ಕೈಗೊo ಡು ನ್ಯಾಯ ಒದಗಿಸಲು ಆಗ್ರಹಿಸಲಾಗಿದೆ.

ಸಿದ್ದಾಪುರ : ವಿದ್ಯಾರ್ಥಿಗಳು ಉತ್ತಮ ವಾಗಿ ಓದಿ ಹೆಚ್ಚು ಹೆಚ್ಚು ತಿಳಿದುಕೊಂಡು ಸಮಾಜ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಸುಸ್ಸಜ್ಜಿತ ರಾಷ್ಟ್ರ ನಿರ್ಮಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಮುಖ್ಯವಾಗಿದೆ ಎಂದು ಟೀಮ್ ಪರಿವರ್ತನೆ ಮುಖ್ಯಸ್ಥ ಹಿತೇಂದ್ರ ನಾಯ್ಕ್ ಹೇಳಿದರು ಅವರು ತಾಲೂಕಿನ ಸಂಪಖಂಡದ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ವ್ಯವಸ್ಥೆ ಯಲ್ಲಿ ಸುಧಾರಣೆ ತರುವುದು ಬಹಳಷ್ಟಿದೆ ಹಾಗಾಗಿ ಭವಿಷ್ಯದ ಜವಾಬ್ದಾರಿ ಇರುವ ನೀವುಗಳು ಈ ಹಂತ ದಿಂದಲೇ ಜಾಗ್ರತ ರಾಗುವ ಅವಶ್ಯಕತೆ ಇದ್ದು ಹಾಗಾಗಿ ಉತ್ತಮವಾಗಿ ಓದಿ ದೇಶದ ಸಂಪತ್ತುಗಳಾಗಬೇಕು ಎಂದರು
ಪತ್ರಕರ್ತ ದಿವಾಕರ್ ಸಂಪಖಂಡ ಮಾತನಾಡಿ ಪಠ್ಯ ಪುಸ್ತಕದ ಜೊತೆಗೆ ನಿಮಗೆ ಆಸಕ್ತಿ ಇರುವ ಕ್ರೀಡೆ, ಸಾಂ ಸ್ಕೃತಿಕ, ಚಿತ್ರ ಕಲೆ ಮುಂತಾದವುಗಳಲ್ಲಿಯೂ ತೊಡಗಿಕೊಳ್ಳಿ, ಶಿಕ್ಷಕರು ಹೇಳುವ ಪಾಠ ವನ್ನು ಶ್ರದ್ದೆಯಿಂದ ಆಲಿಸಿ ಜ್ಞಾನಂವಂತರಾಗಿ, ಗುರು ಹಿರಿಯರಿಗೆ ತಂದೆತಾಯಿ ಗೌರವ ನೀಡಿ ಉತ್ತಮ ಸಂಸ್ಕಾರ ರೂಡಿಸಿಕೊಳ್ಳಿ ಎಂದರು.
ಶಾಲೆಯ ಎಸ್. ಡಿ. ಎಂ. ಸಿ. ಯ ವೀಣಾ ನಾಯ್ಕ್ ಮಕ್ಕಳು ಮೊಬೈಲ್ ನಿಂದ ದೂರವಿರಿ ಪುಸ್ತಕಗಳನ್ನು ಓದಿ ಹೆಚ್ಚು ಹೆಚ್ಚು ಜ್ಞಾನವಂತರಾಗಿ ಎಂದರು. ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕ ಧರೀಶ್ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು ಅತಿಥಿ ಶಿಕ್ಷಕರು, ಬಿಸಿಯೂಟ ಅಡುಗೆ ಸಹಾಯಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *