ರಮಣೀಯ ನಿಸರ್ಗತಾಣ ಹೊನ್ನೆಮರಡು!

ಪ್ರಕೃತಿ,ಅರಣ್ಯ, ನೀರು ಇರುವ ಪ್ರದೇಶಗಳೆಂದರೆ ಪ್ರವಾಸಿಗರಿಗೆ ಮೆಚ್ಚಿನ ಸ್ಥಳ. ಪಿಕ್‌ ನಿಕ್‌, ಟೂರ್‌ ಹೋಗುವವರ ಆಯ್ಕೆ ಕೂಡಾ ನೈಸರ್ಗಿಕ ಆಕರ್ಷಣೆಗಳೇ ಹೆಚ್ಚಿರುವುದು ಸಾಮಾನ್ಯ. ಇಂಥ ಸ್ಥಳಗಳಲ್ಲಿ ಪ್ರವಾಸಿಗರು ಬಂದು ಅಲ್ಲಿಯ ವಾತಾವರಣ ಕಲುಷಿತ ಮಾಡುತ್ತಿರುವುದಕ್ಕೆ ನೂರಾರು ದೃಷ್ಟಾಂತಗಳು ದೊರೆಯುತ್ತವೆ.ಆದರೆ ನೀವಿಲ್ಲಿ ನೋಡುತ್ತಿರುವ ಹೊನ್ನೆಮರಡು ಇವಕ್ಕೆಲ್ಲಾ ಅಪವಾದ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಈ ಹಿನ್ನೀರಿನ ಪ್ರದೇಶ ವಾಸ್ತವದಲ್ಲಿ ಸ್ವರ್ಗ ಸದೃಶ ಎಂದರೆ ಉತ್ಪ್ರೇಕ್ಷೆಯಲ್ಲ. ಇಲ್ಲಿರುವ ಹಿನ್ನೀರು ಸೃಷ್ಟಿಸಿರುವ ಕಾಡುದ್ವೀಪಗಳು,ಹಿನ್ನೀರಿನ ಅಲೆಗಳ ಮೊರೆತ ಎಂಥವರಲ್ಲೂ ರಸಿಕತ್ವ, ಕವಿತ್ವವನ್ನು ಎಚ್ಚರಿಸದೆ ಇರದು.


ಇಷ್ಟು ನೈಸರ್ಗಿಕ, ಸುಂದರ,ರಮಣೀಯ ಪ್ರದೇಶವೆಂದರೆ ಇಲ್ಲಿ ಪ್ರವಾಸಿಗರ ದಂಡು ಸಾಮಾನ್ಯ, ಬೇರೆ ಪ್ರದೇಶಗಳಂತೆ ಇಲ್ಲಿಯೂ ಪ್ರವಾಸಿಗರ ಆಟಾಟೋಪ ಎಂದುಕೊಂಡರೆ ನಿಮ್ಮ  ಅಭಿಪ್ರಾಯ, ಪೂರ್ವಾಗ್ರಹ ತಪ್ಪು ಯಾಕೆಂದರೆ ಇಲ್ಲಿ ನೀವು ಪ್ಲಾಸ್ಟಿಕ್‌, ಗಾಜು ಇತರ ಮಲಿನ ವಸ್ತುಗಳನ್ನು ಕಾಣಲು ಸಾಧ್ಯವಿಲ್ಲ.
ಈ ಪ್ರಕೃತಿ ಸೊಬಗಿನಲ್ಲಿ ಭಾರತೀಯ ಸಾಹಸ ಸಮನ್ವಯ ಕೇಂದ್ರ ನಡೆಸುವ ದಂಪತಿಗಳು ಈ ಪ್ರದೇಶದಲ್ಲಿ ಪ್ರವಾಸಿಗರು ತೊಂದರೆ ಮಾಡದಂತೆ, ಮಾಲಿನ್ಯ ಮಾಡದಂತೆ ತಡೆದಿದ್ದಾರೆ.


ವರ್ಷದಲ್ಲಿ ಹಲವು ಬಾರಿ ಇಲ್ಲಿ ಜಲಸಾಹಸ ಕ್ರೀಡೆ,ನೆಲ-ಜಲಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಯೋಜಿಸುವ ಭಾರತೀಯ ಸಾಹಸ ಸಮನ್ವಯ ಕೇಂದ್ರ ಉಳಿದ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಆಟಾಟೋಪ ನಿಯಂತ್ರಿಸುತ್ತದೆ. ಹೊರ ಪ್ರದೇಶದಿಂದ ಬರುವವರು, ಸ್ಥಳಿಯರಿಗೆ ಇಲ್ಲಿಯ ಪ್ರಕೃತಿಯಲ್ಲಿ ಅನುಚಿತ ಕೆಲಸ, ನಡವಳಿಕೆ ನಡೆಸದಂತೆ ಎಚ್ಚರಿಕೆ ನೀಡುವ ಸಂಸ್ಥೆಯ ಸಿಬ್ಬಂದಿಗಳು ಈ ಪ್ರದೇಶವನ್ನು ಉತ್ತಮ ನಿಸರ್ಗವನ್ನಾಗಿ ಕಾಪಾ ಡಿಕೊಂಡು ಬಂದಿದೆ.


ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡುರಾಷ್ಟ್ರ, ಅಂತರಾಷ್ಟೀಯ ನಿಸರ್ಗ ಪ್ರೀಯರನ್ನು ಆಕರ್ಷಿಸುತ್ತಿದೆ. ಹೊರ ಪ್ರದೇಶದ ಪ್ರವಾಸಿಗರು ಈ ಸೊಬಗಿಗೆ ಮನಸೋತರೆ, ಸ್ಥಳೀಯರು ಇಲ್ಲಿಯ ಸಹಜತೆಗೆ ಬೆರಗಾಗುತ್ತಾರೆ. ಪ್ರವಾಸಿಗರಿಗೆ ಇದು ನೈಸರ್ಗಿಕ ಅದ್ಭುತವಾದರೆ ಇದನ್ನು ಸಹಜವಾಗಿ ಉಳಿಸಿದ ನೊಮಿಟೋ ಮತ್ತು ಸ್ವಾಮಿ ದಂಪತಿಗಳಿಗೆ ಇಲ್ಲಿಯ ಸರಳತೆ, ಸಹಜತೆಯ ನೈಸರ್ಗಿಕ ವಾತಾವರಣ ಕಾಯುವುದು ಬದ್ಧತೆ ಮತ್ತು ವೃತ.
ರಾಜ್ಯದ ಸುಂದರ ಪ್ರವಾಸಿ ತಾಣವನ್ನು ನೈಸರ್ಗಿಕವಾಗಿ ಉಳಿಸಿದ ಭಾರತೀಯ ಸಾಹಸ ಸಮನ್ವಯ ಕೇಂದ್ರಕ್ಕೆ ನೀವೂ ಕೂಡಾ ಧನ್ಯವಾದ ಹೇಳದೆ ಉಳಿಯಲಾರಿರಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *