ಹರಳೀಮಠದಲ್ಲಿ ವಿಶಿಷ್ಟ ಜಯಂತಿ,ಸಿದ್ಧಾಪುರದಲ್ಲಿ ಈದ್ ಮಿಲಾದ್ ಪ್ರಯುಕ್ತ ಸಿಹಿ,ಹಣ್ಣು ಹಂಪಲು ವಿತರಣೆ

ಶಾಲೆಯೆಂಬುದುಸಿದ್ಧಮಾದರಿಯ ಉತ್ಪನ್ನಗಳನ್ನು ತಯಾರಿಸುವಕಾರ್ಖಾನೆಯಲ್ಲ:
ಕಿರುತೆರೆ ಪ್ರಸಿದ್ಧ ನಟಕಾರ್ತಿಕ್‌ಎಚ್ಚರಿಕೆ


ಪ್ರತಿಯೊಂದು ಮಗುವಿನಲ್ಲಿಯೂಅದರದ್ದೇಆದ ವಿಶಿಷ್ಟ ಪ್ರತಿಭೆಯಿರುತ್ತದೆ.ಇಂತಹ ಪ್ರತಿಭೆಯನ್ನು ಗುರುತಿಸಿ ಅದರಲ್ಲಿಯೇ ಮುಂದುವರೆಯಲು ಪ್ರೋತ್ಸಾಹ ನೀಡಬೇಕು.ಕೇವಲ ಶಾಲಾಪಠ್ಯದ ಓದಿಗೆ ಮಕ್ಕಳನ್ನು ಸೀಮಿತಗೊಳಿಸಬಾರದು ಎಂಬುದುಗಾಂಧೀಜಿಅವರಚಿಂತನೆಯಾಗಿತ್ತು.ಆದರೆಇದನ್ನು ನಾವು ಅರ್ಥ ಮಾಡಿಕೊಳ್ಳದೆ ಶಾಲೆಯನ್ನು ಸಿದ್ಧಮಾದರಿಯ ಉತ್ಪನ್ನಗಳನ್ನು ತಯಾರಿಸುವಕಾರ್ಖಾನೆಯಂತೆ ಮಾಡುತ್ತಿದ್ದೇವೆಎಂದುಕಿರುತೆರೆಯ ಪ್ರಸಿದ್ಧ ನಟಕಾರ್ತಿಕ್ ವಿಷಾದಿಸಿದರು.


ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಕಾರ್ಯಕ್ರಮದಲ್ಲಿಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿಅವರು ಮಾತನಾಡುತ್ತಿದ್ದರು.ನಾನು ಓದಿನಲ್ಲೇನೂ ಮುಂದಿರಲಿಲ್ಲ. ಆದರೆ ಹರಳಿಮಠದ ಸತ್ಯನಾರಾಯಣರಂತಹಕಲಾವಿದರು, ತುಂಗಾಕಾಲೇಜಿನಬಿ.ಗಣಪತಿಯವರಂತಹಉಪನ್ಯಾಸಕರು ನನ್ನಲ್ಲಿನ ಪ್ರತಿಭೆ ಗುರುತಿಸಿ ನಾನು ಈ ಹಂತಕ್ಕೆ ಬರಲುಕಾರಣರಾದರುಎಂದವರು ನೆನಪಿಸಿಕೊಂಡರು.
ಇಂದು ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಕಡಿಮೆಯಾಗುತ್ತಿದೆ. ಆದರೆಇದರ ಬಗ್ಗೆ ಕೊರಗದೆಇದನ್ನೇಒಂದು ಅವಕಾಶವಾಗಿ ಶಿಕ್ಷಕರು ಸ್ವೀಕರಿಸಬೇಕು.ತಮ್ಮ ಶಾಲೆಯಲ್ಲಿಓದುವ ಪ್ರತಿಯೊಂದು ವಿದ್ಯಾರ್ಥಿಯನ್ನೂಎಲ್ಲರ ಗಮನ ಸೆಳೆಯುವಂತೆ ರೂಪಿಸಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಬೇಕುಎಂದುಕಾರ್ತಿಕ್ ಸೂಚಿಸಿದರು.ಇನ್ನು ಮುಂದೆ ಪ್ರತಿವರ್ಷತಾನುಓದಿದ ಹರಳಿಮಠ ಶಾಲೆಯಲ್ಲಿ ಓದಿ ಶಿಕ್ಷಣದಲ್ಲಿ, ಸಾಂಸ್ಕೃತಿಕಕ್ಷೇತ್ರ ಮತ್ತುಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿಕಾರ್ತಿಕ್ ಪ್ರಕಟಿಸಿದರು.
ಇತ್ತೀಚೆಗೆ ಪಿಎಚ್.ಡಿ ಮಹಾಪ್ರಬಂಧಕ್ಕೆಡಾಕ್ಟರೇಟ್ ಪದವಿ ಪಡೆದ ನಿಮಿತ್ತಊರವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದಉಪನ್ಯಾಸಕಿಡಾ.ವಿಮಲ ಬಿ.ಎನ್‌ಅವರು , ಸರ್ಕಾರಿ ಶಾಲೆಗಳ ಬಗ್ಗೆ ಯಾರೂತಾತ್ಸಾರತೋರಬಾರದು.ಮಕ್ಕಳ ಚಾರಿತ್ರö್ಯ ನಿರ್ಮಾಣದಲ್ಲಿ ಸರ್ಕಾರಿ ಶಾಲೆಗಳು ಒಳ್ಳೆಯ ಕೆಲಸ ಮಾಡುತ್ತಿವೆಎಂದುಅಭಿಪ್ರಾಯಪಟ್ಟರು.
ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿಅಧ್ಯಕ್ಷರಾದಪ್ರಕಾಶ್‌ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಪ್ರತಿಮಾ, ಸಮಿತಿ ಸದಸ್ಯರಾದ ನಾಗಲಕ್ಷಿö್ಮ, ಸೌಮ್ಯ, ಶಾಹಿಯಾ ಬಾನು, ಜಲೀಲ್,ಗ್ರಾಮ ಪಂಚಾಯತಿಅಧ್ಯಕ್ಷರಾದ ಮಂಜುನಾಥ್,ಉಪಾಧ್ಯಕ್ಷರಾದ ಪ್ರಸನ್ನ, ಸದಸ್ಯರಾದಇಂದಿರಮ್ಮ, ಕಾರ್ಯದರ್ಶಿ ಮಂಜುನಾಥ, ಸಹಕಾರಿಧುರೀಣರಾದ ಪ್ರಹ್ಲಾದ್, ರತ್ನಾಕರ್, ಊರ ಪ್ರಮುಖರಾದ ಹೊನ್ನಾನಿ ದೇವರಾಜ್, ಇಮ್ರಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮುಖ್ಯೋಪಾಧ್ಯಾಯರಾದರಮೇಶ್‌ಸ್ವಾಗತಿಸಿದರು.ಶಿಕ್ಷಕ ಜಯಪ್ಪ ನಿರೂಪಿಸಿ,ವಂದಿಸಿದರು.
೭ನೇ ತರಗತಿಯಲ್ಲಿಸಂಜನಾಕೆ.ಆರ್,೧೦ನೇ ತರಗತಿಯಲ್ಲಿಆಯಿಷಾ ಎಚ್.ಎ, ಧನ್ವಿತ್‌ರಾಜ್, ಮಾನವಿ ಎಚ್.ಡಿ೨೯ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.

ಈದ್ ಮಿಲಾದ್ ಪ್ರಯುಕ್ತ ಸಿಹಿ,ಹಣ್ಣು ಹಂಪಲು ವಿತರಣೆ


ಸಿದ್ದಾಪುರ
ಎಲ್ಲ ಧರ್ಮ ಮತ್ತು ಸಮಾಜದವರೊಡನೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಸಮಾಜವೂ ನಮ್ಮದು ಅಂತ ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ ಬರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ನಾಸಿರ್ ವಲಿಖಾನ್ ಹೇಳಿದರು.
ಅವರು ಕಮಿಟಿಯ ವತಿಯಿಂದ ಈದಮಿಲಾದ ಹಬ್ಬದ ಪ್ರಯುಕ್ತ ಪಟ್ಟಣದ ಮುರುಘರಾಜೇಂದ್ರ ಅಂಧರ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಕೇವಲ ಮುಸ್ಲಿಂ ಸಮಾಜದವರು ಮಾತ್ರವಲ್ಲ ಬೇರೆ ಧರ್ಮದವರೂ ನಮಗೆ ಹತ್ತಿರದವರೇ. ಎಲ್ಲರಿಗೂ ಉಪಯೋಗವಾಗುವ ಒಳ್ಳೆಯ ಕಾರ್ಯಗಳನ್ನು ಮಾಡುವದು ಕಮಿಟಿಯ ಮುಖ್ಯ ಆಶಯವಾಗಿದೆ ಎಂದರು.
ಕಮಿಟಿಯ ಕಾರ್ಯಾಧ್ಯಕ್ಷ, ಪಪಂ ಮಾಜಿ ಸದಸ್ಯ ಮುನಾವರ ಗುರ್ಕಾರ ಮಾತನಾಡಿ ಸಂಸ್ಥೆಯ ಮುಖ್ಯ ಉದ್ದೇಶ ಭಾವೈಕ್ಯತೆ. ಯಾವುದೇ ಧರ್ಮದವರಾಗಿರಲಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಸಹಾಯಕರಿಗೆ ನೆರವಾಗುವದು ನಮ್ಮ ಉದ್ದೇಶ. ಬೇಧಭಾವವಿಲ್ಲದೇ ಎಲ್ಲರೊಂದಿಗೆ ಒಂದಾಗಿ ಬಾಳುವದು ಅಗತ್ಯವಾಗಿದೆ ಎಂದರು.


ಉಪಾಧ್ಯಕ್ಷ ಮಹಮ್ಮದ್ ಬಷೀರ್ ಸಾಬ್ ಮಾತನಾಡಿ ಸಮಾಜದಲ್ಲಿ ಸರ್ವಧರ್ಮ ಸಮಭಾವದಿಂದ ಬದುಕುವದು ಮುಖ್ಯ ಎಂದರು. ಕಮಿಟಿಯ ಉಪಾಧ್ಯಕ್ಷರಾದ ಅಬ್ದುಲ್ ಮುನೀರ್ ಸಾಬ್ ಕಾನಗೋಡ, ಅಬ್ದುಲ್ ಸಾಬ್ ಹೇರೂರು, ಕಾರ್ಯದರ್ಶಿ ನೂರುಲ್ ಅಮೀನ್ ಹಾರ್ಸಿಕಟ್ಟಾ,, ಜಂಟಿ ಕಾರ್ಯದರ್ಶಿ ಸಕೀಬ್ ಗುರ್ಕಾರ, ಖಜಾಂಚಿ ಇಲಿಯಾಸ್ ಗುರ್ಕಾರ ಹಾಗೂ ಮಜೀದ್ ಮಂಡಿ, ಮುನೀರ್ ಸಾಬ್, ಸುಬಾನ ಸಾಬ್, ಮುನೀರ್ ಖಾನ್, ಅರೀಪ್ ಸಾಬ್, ಮೋಸಿನ್ ಖಾನ್, ಅಮ್ಜದ್ ಸಾಬ್, ಅಬ್ದುಲ್ ಗನಿ ಸಾಬ್, ಸಲ್ಮಾನ ನಾಸಿರಖಾನ್ ಹಾಗೂ ಕಮಿಟಿಯ ಎಲ್ಲ ಸದಸ್ಯರೂ ಪಾಲ್ಗೊಂಡಿದ್ದರು.
ನಂತರ ಪಟ್ಟಣದ ಸರಕಾರಿ ಆಸ್ಪತ್ರೆ,ಮುಗದೂರಿನ ಪುನೀತ್ ರಾಜಕುಮಾರ ಅನಾಥಾಶ್ರಮ, ಹೊಸಳ್ಳಿಯ ಅರಬ್ಬಿಕ್ ಶಾಲೆಗಳಿಗೆ ತೆರಳಿ ಸಿಹಿ, ಹಣ್ಣು ಹಂಪಲು ವಿತರಿಸಲಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *