ದುಡಿಮೆಗೆ ಬೆಂಗಳೂರಿಗೆ ಹೋಗಬೇಕೆಂದಿದ್ದ ಕಲ್ಲಪ್ಪ ಹುಟ್ಟೂರಲ್ಲೇ ಕೋಟೆ ಕಟ್ಟಿದ ಕತೆ

ಕೃಷಿ ಲಾಭದಾಯಕವಲ್ಲ ಎನ್ನುವುದು ಸಾಮಾನ್ಯ ಗೃಹಿಕೆ. ಆದರೆ ಜನಸಾಮಾನ್ಯರ ಈ ಅನುಭವವನ್ನು ಸುಳ್ಳು ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಪ್ಪ ನಾಯ್ಕ ಕಲಕರಡಿ. ತಮಗಿದ್ದ ಮೂಲ ೬ ಎಕರೆ ಬರಡು ಭೂಮಿಯಲ್ಲಿ ಏನು ಮಾಡಲು ಸಾಧ್ಯ ಎಂದು ಯೋಚಿಸಿದ ಯುವಕ ಕಲ್ಲಪ್ಪ ನಾಯ್ಕ ಕಲಕರಡಿ ಹೊಟ್ಟೆಪಾಡಿನ ದುಡಿಮೆಗೆ ಬೆಂಗಳೂರಿನ ದಾರಿ ಹಿಡಿಯುವ ಯೋಚನೆ ಮಾಡಿದ್ದರು.ತಾನೊಂದು ಬಗೆದರೆ ವಿಧಿ ಮತ್ತೊಂದು ಬಗೆಯಿತು ಎನ್ನುವಂತೆ ಬೆಂಗಳೂರಿಗೆ ಗೋಗುವ ಯೋಚನೆ ಕೈಬಿಟ್ಟ ಕಲ್ಲಪ್ಪ ತನ್ನ ಭೂಮಿಜೊತೆ ಮತ್ತಷ್ಟು ಎಕರೆಭೂಮಿಯನ್ನು ಲೀಜ್‌ ಪಡೆದರು. ಭತ್ತ,ನಂತರ ಕಬ್ಬು ಶುಂಠಿ,ಮಾವು,ನೆಲ್ಲಿ ಬಾಳೆ ಬೆಳೆಯುತ್ತಾ ಪ್ರತಿವರ್ಷ ಮಾಡಿದ ಉಳಿತಾಯದಿಂದ ಹೊಸ ಭೂಮಿ ಖರೀದಿಸುತ್ತಾ ಸಾಗಿದರು. ೬ ಎಕರೆ ಒಣ ಭೂಮಿಯಿಂದ ಪ್ರಾರಂಭವಾದ ಇವರ ಜರ್ನಿ ಈಗ ಅರವತ್ತು ಎಕರೆ ಸ್ವಂತ ಭೂಮಿಗೆ ಬಂದು ಮುಟ್ಟಿದೆ.

೬೦ ಎಕರೆಯಲ್ಲಿ ಬಹುತೇಕ ೪೦ ಎಕರೆಅಡಿಕೆ ಬೆಳೆಯುತ್ತಿರುವ ಇವರು ಅಲ್ಪಸ್ವಲ್ಫ ಭತ್ತ,ಅನಾನಸ್‌ ಬೆಳೆಯುತಿದ್ದಾರೆ. ಕೃಷಿಯಲ್ಲಿ ಅಡಿಕೆಯಿಂದ ಮಾತ್ರ ಲಾಭ ಪಡೆಯಬಹುದು ಎನ್ನುವ ಕಲ್ಲಪ್ಪ ತಮ್ಮ ೪೦ ವರ್ಷಗಳ ಪಯಣದಲ್ಲಿ ಕೃಷಿಯೊಂದಿಗೆ ವ್ಯಾಪಾರ ಮಾಡಿದ್ದಾರೆ, ಅನಾನಸ್‌ ಬೆಳೆದು ಉತ್ತರ ಭಾರತದ ವರೆಗೆ ಮಾರುಕಟ್ಟೆ ಹುಡುಕಿ ಅಲೆದಿದ್ದಾರೆ.

ಹೆಚ್ಚು ಶಿಕ್ಷಿತರಲ್ಲದ ಕಲ್ಲಪ್ಪ ನಾಯ್ಕ ಹಿತೈಶಿಗಳು, ಪರಿಚಿತರ ಸಹಕಾರ ಪಡೆದು ಅವಿಭಕ್ತ ಕುಟುಂಬದ ಜವಾಬ್ಧಾರಿ ಹೊರುತ್ತಲೇ ಕೃಷಿ ಸಾಧಕರೆನಿಸಿದ್ದಾರೆ. ಯಾವುದೇ ಕೆಲಸವನ್ನು ಶೃದ್ಧೆ, ತಾಳ್ಮೆ, ಆಸಕ್ತಿಯಿಂದ ಮಾಡಿದರೆ ಗೆಲುವು ಸಿಗುತ್ತದೆ ಎನ್ನುವ ನಾಯ್ಕರ ತೋಟದಲ್ಲಿ ಈಗ ತೆಂಗು,ಬಾಳೆ ಅಡಿಕೆಗಳು ಹಸಿರು ಉಕ್ಕಿಸುತ್ತಿವೆ.

ಅಡಿಕೆ ತೋಟಗಳೇ ಅಪರೂಪವಾಗಿದ್ದ ಬನವಾಸಿ ಭಾಗದಲ್ಲಿ ಅಡಿಕೆ,ಬಾಳೆ,ತೆಂಗು ಬೆಳೆದ ಕಲ್ಲಪ್ಪ ನಾಯ್ಕ ಅರೆಬಯಲುಸೀಮೆಯಲ್ಲಿ ವ್ಯವಸಾಯದಲ್ಲಿ ಹೆಸರು ಮಾಡಿ ಮಿಶ್ರಬೆಳೆ ಬೆಳೆಯುವ ಮಾದರಿ ಕೃಷಿಕರಾಗಿ ಹೆಸರುಮಾಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *