ಸಿನಿಮಾ ಮೂಲಕ ದೇಸಿ ಸೊಗಡಿನ ಕಥೆಗಳನ್ನು ನೋಡುವುದು ಅದ್ಭುತವಾಗಿದೆ: ಡಾಲಿ ಧನಂಜಯ್

‘ನಮ್ಮ ಸಿನಿಮಾಗಳು, ನಮ್ಮ ನೆಲ ಮತ್ತು ಸಂಪ್ರದಾಯಗಳ ಕುರಿತೇ ಹೆಣೆದುಕೊಂಡಿದ್ದು, ಪ್ರಪಂಚದೊಂದಿಗೆ ನಿರಂತರವಾಗಿ ಪ್ರತಿಧ್ವನಿಸುತ್ತವೆ. ‘ನಾನು ಮಧ್ಯ ಕರ್ನಾಟಕದ (ಬಯಲು ಸೀಮೆ) ಮೂಲದವನು. ಕೆರೆ ಬೇಟೆ ಜಾನಪದ ಕ್ರೀಡೆ ನನಗೆ ಪರಿಚಿತವಿಲ್ಲ. ಸಿನಿಮಾಗಳ ಮೂಲಕ ಸ್ಥಳೀಯ ಕಥೆಗಳನ್ನು ವೀಕ್ಷಿಸುವುದು ಅದ್ಭುತ ಅನುಭವವಾಗಿದೆ ಎಂದು ನಟ ಧನಂಜಯ್ ತಿಳಿಸಿದರು.
 

ದೇಸಿ ಸೊಗಡಿನ ಕಥೆ ಹೊಂದಿದ್ದ ಸಿನಿಮಾ ಕಾಂತಾರ (2022) ಸಾಕಷ್ಟು ಹಿಟ್ ಆಯಿತು. ಅದೇ ರೀತಿ ನಂತರ ಬಂದ ಟಗರು ಪಲ್ಯ (2023) ಚಿತ್ರಕ್ಕೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ, ಬಾಕ್ಸ್ ಆಫೀಸ್‌ನಲ್ಲಿ ಚಾಂಪಿಯನ್ ಆಗಿರುವ ಕಾಟೇರ ಕೂಡ ಸ್ಥಳೀಯ ಕಥೆಯನ್ನು ಒಳಗೊಂಡಿದ್ದಂತಹ ಚಿತ್ರವಾಗಿದೆ. ಈ ಪಟ್ಟಿಗೆ ಸೇರ್ಪಡೆಗೊಳ್ಳಲಿರುವ ಮುಂಬರುವ ಚಿತ್ರ ‘ಕೆರೆಬೇಟೆ’. 

ರಿಷಬ್ ಶೆಟ್ಟಿಯವರ ಕಾಂತಾರವು ಕಂಬಳ ಮತ್ತು ಭೂತ ಆರಾಧನೆಯಂತಹ ಸಾಂಪ್ರದಾಯಿಕ ಕರಾವಳಿ ಕರ್ನಾಟಕದ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಘರ್ಷಣೆಯನ್ನು ಚಿತ್ರಿಸುತ್ತದೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾ ರೈತರ ಹೋರಾಟಗಳನ್ನು ತೆರೆ ಮೇಲೆ ತಂದಿದೆ. ಅದೇ ರೀತಿ, ನಟ ಗೌರಿಶಂಕರ್ ನಟನೆಯ ‘ಕೆರೆಬೇಟೆ’ ಕೂಡ ಬೇಸಿಗೆಯಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಮೀನುಗಾರಿಕೆ ಉತ್ಸವವಾದ ಕೆರೆ ಬೇಟೆಯ ಸುತ್ತ ಸುತ್ತುತ್ತದೆ. ಚಿತ್ರದ ಟೀಸರ್‌ ಅನ್ನು ಜನವರಿ 3 ರಂದು ನಟ ಧನಂಜಯ್ ಬಿಡುಗಡೆ ಮಾಡಿದ್ದಾರೆ. 

ಸಮಾರಂಭದಲ್ಲಿ ಮಾತನಾಡಿದ ಧನಂಜಯ್, ‘ನಮ್ಮ ಸಿನಿಮಾಗಳು, ನಮ್ಮ ನೆಲ ಮತ್ತು ಸಂಪ್ರದಾಯಗಳ ಕುರಿತೇ ಹೆಣೆದುಕೊಂಡಿದ್ದು, ಪ್ರಪಂಚದೊಂದಿಗೆ ನಿರಂತರವಾಗಿ ಪ್ರತಿಧ್ವನಿಸುತ್ತವೆ. ‘ನಾನು ಮಧ್ಯ ಕರ್ನಾಟಕದ (ಬಯಲು ಸೀಮೆ) ಮೂಲದವನಾಗಿದ್ದರೂ, ಕೆರೆ ಬೇಟೆ ಜಾನಪದ ಕ್ರೀಡೆ ನನಗೆ ಪರಿಚಿತವಿಲ್ಲ. ಸಿನಿಮಾಗಳ ಮೂಲಕ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸ್ಥಳೀಯ ಕಥೆಗಳನ್ನು ವೀಕ್ಷಿಸುವುದು ಅದ್ಭುತ ಅನುಭವವಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತೋರಿಸುವ ಹೆಚ್ಚಿನ ಕಥೆಗಳನ್ನು ನಾವು ರಚಿಸಬೇಕು’ ಎಂದರು.

ಕೆರೆಭೇಟೆ ಚಿತ್ರದ ದೃಶ್ಯ

ನಿರ್ದೇಶಕ ದಿನಕರ ತೂಗುದೀಪ ಕೂಡ ಹಳ್ಳಿ ಜೀವನವನ್ನು ಅತ್ಯುತ್ತಮವಾಗಿ ಸೆರೆಹಿಡಿದಿರುವ ಕೆರೆಬೇಟೆ ಚಿತ್ರತಂಡವನ್ನು ಶ್ಲಾಘಿಸಿದರು. ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯ ನಡುವೆಯೇ ಚಿತ್ರ ಸೆಟ್ಟೇರಿದ ಬಗ್ಗೆ ಶ್ಲಾಘಿಸಿದರು. ಬೆಂಗಳೂರಿನ ಮಲ್ಲತ್ತಳ್ಳಿ ಕೆರೆಯಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಲೆನಾಡು ಭಾಗದ ಸ್ಥಳೀಯರು ತಮ್ಮ ಸಾಂಪ್ರದಾಯಿಕ ಕ್ರೀಡೆಯನ್ನು ಪ್ರಸ್ತುತಪಡಿಸಿದರು. 

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಬರಹಗಾರ ಜಡೇಶ್ ಹಂಪಿ ಅವರು ತಮ್ಮ ಹಳ್ಳಿಯಲ್ಲಿನ ಹೊಲೆಮಾರಿ ಸಂಪ್ರದಾಯದಂತೆ ಕಾಟೇರ ಸಿನಿಮಾಗಾಗಿ ವರ್ಷಕ್ಕೊಮ್ಮೆ ನಡೆಯುವ ಗ್ರಾಮ ಜಾತ್ರೆ ಮತ್ತು ಪ್ರಾಣಿ ಬಲಿಯನ್ನು ಎರವಲು ಪಡೆದಿರುವುದಾಗಿ ಹೇಳಿದರು.

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್, ತಮ್ಮ ನೆಲದ ಥೀಮ್‌ ಅನ್ನು ಜಾಗತಿಕವಾಗಿ ಸಂಪರ್ಕಿಸುವ ಸಿನಿಮಾಗಳನ್ನು ಶ್ಲಾಘಿಸಿದರು. ರಾಜಾ ಹುಲಿ ಸಿನಿಮಾದ ನಿರ್ದೇಶಕ ಗುರು ದೇಶಪಾಂಡೆ, ಅವರ ಜೀವನ ಮತ್ತು ಸ್ಥಳೀಯ ಸಂಸ್ಕೃತಿಗಳಲ್ಲಿ ಬೇರೂರಿರುವ ಕಥೆಗಳಿಗೆ ಪ್ರೇಕ್ಷಕರ ಬಾಂಧವ್ಯವನ್ನು ಎತ್ತಿ ತೋರಿಸಿದರು. 

ಕೆರೆಬೇಟೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರದಲ್ಲಿ ಗೌರಿಶಂಕರ್, ಹೊಸಬರಾದ ಬಿಂದು ಶಿವರಾಮ್, ಗೋಪಾಲ್ ದೇಶಪಾಂಡೆ, ಸಂಪತ್ ಮತ್ತು ಹರಿಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆರೆಬೇಟೆಗೆ ಗಗನ್ ಬದರಿಯಾ ಸಂಗೀತ ನೀಡಿದ್ದಾರೆ. (ಕಪ್ರಡಾ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *