ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ ನಡೆಸಿ ಕೆಲವು ವಂಧಿಮಾಗಧ ಕಾರ್ಯಮರೆತ ಪತ್ರಕರ್ತರನ್ನು ಖುಷಿಪಡಿಸಿ ಪ್ರಚಾರದ ಹಣ ಉಳಿಸುವ ಕಾಗೇರಿ ಒಂದು ವಾರದ ಹಿಂದೆ ಶಿರಸಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕರನ್ನು ಹೊಗಳಿ ಸಿದ್ಧಾಪುರದ ಬಿ.ಜೆ.ಪಿ. ಆಡಳಿತದ ಪಟ್ಟಣ ಪಂಚಾಯತ್‌ ಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಭೀಮಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಿ.ಜೆ.ಪಿ. ಚುನಾಯಿತ ಸದಸ್ಯರ ಪ್ರೇಮ, ಪ್ರೀತಿ ಅಭಿನಂದನೆಗೆ ಅರ್ಹ ಆದರೆ….. ಅದೇ ಪ್ರೀತಿ-ವಿಶ್ವಾಸ, ಅನುರಾಗ ಶಿರಸಿ ನಗರಸಭೆಯ ಮೇಲೂ ಇಲ್ಲಿಯ ಸದಸ್ಯರ ಮೇಲೂ ಇದ್ದರೆ ಒಳ್ಳೆಯದು ಎಂದು ವ್ಯಂಗ್ಯ ವಾಡಿದ್ದರು. ಇದು ಕಾಗೇರಿ ವಿರೋಧಿಗಳನ್ನು ಹಾಡಿ-ಹೊಗಳುವ ಪರಿ!.

ಈ ಪ್ರಶಂಸೆ ಹಿಂದೆ ಸಿದ್ಧಾಪುರದ ವಿದ್ಯಮಾನವಿದೆ. ಶಾಸಕರಾಗಿ ಎರಡು ವರ್ಷ ಪೂರೈಸಿರುವ ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರಕ್ಕೆ ೩೮೨ ಕೋಟಿ ಅನುದಾನ ನೀಡಿದ್ದಾರೆ. ಬಹುತೇಕ ವಿಶೇಷ ಅನುದಾನವಾಗಿರುವ ಈಹಣ ಪಕ್ಷಬೇಧವಿಲ್ಲದೆ ಹಂಚಿಕೆಯಾಗಿದೆ.ಕಳೆದ ಮೂವತ್ತು ವರ್ಷಗಳಿಂದ ಶಾಸಕರು, ಸಂಸದರಿಂದ ಪುಕ್ಕಟ್ಟೆ ಪರಿವಾರದ ಸುಳ್ಳಿನ ಭಾಷಣ ಕೇಳಿದ್ದು ಬಿಟ್ಟರೆ… ಗ್ಯಾರಂಟಿ ದುಡ್ಡೂ ಇಲ್ಲ, ವಾರಂಟಿ ಹಣವೂ ಇಲ್ಲ. ಈಗಿನ ಸಂಸದ ಕಾಗೇರಿ ತಾನು ಸಭ್ಯ, ಪ್ರಾಮಾಣಿಕ ಎಂದು ಪೋಜು ಕೊಡುತ್ತಲೇ ಸಾವಿರಾರು ಕೋಟಿಯ ಒಡೆಯರಾಗುತ್ತಾರೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಹಿಂದುತ್ವದ ಹೆಸರಲ್ಲಿ ರಾತ್ರಿಯೂ ಕಾಮನಬಿಲ್ಲು ತೋರಿಸಿ ಸಾವಿರಾರು ಕೋಟಿ ಒಡೆಯರಾಗಿ ಈಗ ವಿದೇಶ ಸೇರಿದ್ದಾರೆ!

ಇವೆಲ್ಲವೂ ಕಾಣದ ಕುರುಡು ಕೊಳಚೆ ಭಕ್ತರಾಗಿರುವ ಹಿಂದುತ್ವವಾದಿಗಳು ತಮ್ಮ ತಲೆ ಕೆಟ್ಟಿರುವುದನ್ನು ಬಹರಂಗವಾಗಿ ಪ್ರದರ್ಶಿಸುತಿದ್ದಾರೆ. ಈ ಮತಾಂಧ ಹಿಂದುತ್ವವಾದಿ ಆಶಾಢಭೂತಿಳ ಕತೆ ಇದಾದರೆ…. ಕಾಂಗ್ರೆಸ್‌ ನಲ್ಲಿ ಭೀಮಣ್ಣ ನಾಯ್ಕ ಶಾಸಕರಾದ ಮೇಲೆ ಸಾವು-ನೋವುಗಳಿಗೆ ಸ್ಫಂದಿಸುತಿದ್ದಾರೆ. ಇವರ ಅವಧಿಯಲ್ಲೂ ಮೇಲ್ವರ್ಗದ ಜನರ ಮನೆಗಳಿಗೇ ರಸ್ತೆಗಳಾಗುತ್ತಿವೆ ಎನ್ನುವ ಆರೋಪ ಹೊರತು ಪಡಿಸಿದರೆ ಒಣ ಭಾಷಣದ ಹೆಗಡೆಗಳಿಗಿಂತ ಕೊಡುಗೈ ದಾನಿ ಭೀಮಣ್ಣ ಬೆಟರ್ರು ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ.

ಬಿ.ಜೆ.ಪಿ. ಸುಳ್ಳು ಹಿಂದುತ್ವ, ರಾಷ್ಟ್ರೀಯವಾದಗಳಿಗಿಂತ ಕಾಂಗ್ರೆಸ್‌ ನ ಜನಸ್ಫಂದನ ಒಳ್ಳೆಯದೆನ್ನುವ ಸಿದ್ಧಾಪುರದ ಪಟ್ಟಣ ಪಂಚಾಯತ್‌, ತಾಲೂಕಾ ಪಂಚಾಯತ್‌, ಜಿ.ಪಂ. ಹಾಲಿ, ಮಾಜಿ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕಾಂಗ್ರೆಸ್‌ ಸೇರಿ ಕೈ ಅಭ್ಯರ್ಥಿಗಳಾಗುವುದು ಪಕ್ಕಾ ಎನ್ನಲಾಗುತ್ತಿದೆ. ಅವರಲ್ಲಿ ಮಾರುತಿ ನಾಯ್ಕ, ಸುಧೀರ ನಾಯ್ಕ, ಮಾರುತಿ ಕಿಂದ್ರಿ, ಸುರೇಶ್‌ ನಾಯ್ಕ ಸೇರಿದ ಎರಡು ಡಜನ್‌ ನಾಯಕರಿದ್ದಾರೆ ಎನ್ನುವ ಗಾಳಿ ಸುದ್ದಿ ಇದೆ!.

ಮಠ- ಮಠಾಧೀಶರು, ಜಾತಿ ಸಂಘ- ಸ್ವಾಮಿಗಳ ಮೂಲಕ ಹಿಂದುತ್ವ ಪಠಣ ಮಾಡಿಸಿ ಒಳಗೆ ಜಾತಿ-ಪರಿವಾರದ ಷಡ್ಯಂತ್ರಗಳನ್ನು ಪೋಶಿಸುವ ಬಿ.ಜೆ.ಪಿ. ಮತ್ತದರ ಪರಿವಾರ ಯೋಗ್ಯತೆ ಇಲ್ಲದ ಅನಕ್ಷರಸ್ಥರನ್ನು ಓಲೈಸಿ ಹಣೆಗೆ ಕುಂಕುಮ, ಹೆಗಲಿಗೆ ಕೇಸರಿ ಶಾಲು ಹಾಕುತ್ತದೆ. ಹೀಗೆ ಈ ನಾಮ-ಶಾಲಿನ ಗುಲಾಮರಾದವರು ಧರ್ಮದ ಹೆಸರಲ್ಲಿ ಮನೆ-ಊರು ಹಾಳು ಮಾಡತೊಡಗುತ್ತಾರೆ.ಇಂಥ ಮನೆಹಾಳರೇ ತಮ್ಮ ಆಸ್ತಿ- ಗುರಿ ಎನ್ನುವ ಬಿ.ಜೆ.ಪಿ. ಹೀಗೆ ಕುರಿಗಳಾದ ಸಾವಿರಾರು ಮೂರ್ಖರನ್ನು ಜೈಲಿಗಟ್ಟಿದೆ. ಈ ಅಡ್ಡಕಸುಬಿಗಳಿಗೆ ಕೋರ್ಟನಲ್ಲಿ ವಾದಿಸಲು ವಕೀಲರನ್ನು ನೇಮಿಸುವ ಹಿಂದುತ್ವವಾದಿ ಪಕ್ಷ ಈ ಮತಿಗೆಟ್ಟವರಿಂದಲೇ ಅವರ ಪಕ್ಷದ ವಕೀಲರಿಗೆ ಶುಲ್ಕವನ್ನೂ ಕೊಡಿಸುತ್ತೆ!. ಇದು ಮಾತಾಂಧರ ಸ್ಟ್ಯಾಟಜಿ ಈ ಸ್ಟ್ಯಾಟಜಿ ಸರಿಯಾಗಿ ಬಳಸಿಕೊಳ್ಳುವ ಬಿ.ಜೆ.ಪಿ. ಲಾಭ ಮಾಡುವುದು ಪರಿವಾರದ ಮೇಲ್ವರ್ಗದವರಿಗೆ! ಈ ಸತ್ಯಗಳು ಶಿರಸಿ-ಭಟ್ಕಳ ಸೇರಿದಂತೆ ಮಲೆನಾಡು- ಕರಾವಳಿಯ ಜನರಿಗೆ ಅರ್ಥವಾಗುತ್ತಿದೆ. ಹಾಗಾಗಿ ಈಗ ಬಿ.ಜೆ.ಪಿ. ಎಂದರೆ ಅಡ್ಡಕಸುಬಿಗಳ ಅಡ್ಡೆ ಎನ್ನುವಂತಾಗಿದೆ ಇಂಥ ಪಕ್ಷ- ಅದಕ್ಕನುಗುಣವಾದ ಸುಳ್ಳುಬುರುಕರ ನಾಯಕತ್ವ ಬಿ.ಜೆ.ಪಿ.ಯನ್ನು ಮುಳುಗಿಸದೆ, ತೇಲಿಸಲು ಸಾಧ್ಯವೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *