



ಒಬ್ಬ ಕೃಷಿಕ ಸಾಂಪ್ರದಾಯಿಕವಾಗಿ ನಿರುಪದೃವಿಯಾಗಿ ತನ್ನ ಕೆಲಸ ಮಾಡಿಕೊಂಡಿರುತ್ತಾನೆ ಆತನ ಅಪರಿಮಿತ ಶ್ರಮದ ನಡುವೆ ಅವನೆದುರೇ ಹೊಸ ಹುಡುಗನೊಬ್ಬ ಸ್ಮಾರ್ಟ ಕೆಲಸ ಮಾಡಿ ಕಡಿಮೆ ಅವಧಿಯಲ್ಲಿ ಯಶಸ್ವಿ ಕೃಷಿಕನೆನಿಸಿಕೊಳ್ಳತ್ತಾನೆ. ಇದು ಕೃಷಿ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ಎಲ್ಲರಿಗೂ ಅನ್ವಯಿಸುವ ಸೂತ್ರ. ಚಿತ್ರರಂಗದ ಘಟಾನುಘಟಿಗಳ ನಡುವೆ ವೃಶಭ್ ಶೆಟ್ಟಿ ಕಾಂತಾರ ಮಾಡಿ ಗೆದ್ದು ಬಿಟ್ಟ!



ರಾಜ್ ಬಿ ಶೆಟ್ಟಿ ಮತ್ತು ಜೆ.ಪಿ.ತುಮಿನಾಡ್ ಹುಡುಗಾಟ ಮಾಡುವಂತೆ ಸು ಫ್ರಾಮ್ ಸೋ ಮಾಡಿ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತೆ ಮಾಡಿಬಿಟ್ಟರು!

ಅಭಿಜಾತ ಕಲಾವಿದ ರಾಜ್ ಕುಮಾರ್ ತನ್ನ ಧ್ವನಿ, ಅಭಿನಯದಿಂದ ಕೆಂಟಕಿ ಕರ್ನಲ್ ಆದರು, ಕಮಲಹಾಸನ್ ತನ್ನ ಪ್ರತಿಭೆಯಿಂದ ಇಂಡಿಯಾದ ಸಾರ್ವಕಾಲಿಕ ನಟರಾದರು.



ಶಾರುಖ್ ಖಾನ್… ಖಳನಟನಾದವನು ಎಲ್ಲರ ನೆಚ್ಚಿನ ಹೀರೋ ಆಗಿ ಬದಲಾದರು. ಅಪ್ಪು ಪುನೀತ್ ರಾಜ್ ಕುಮಾರ್ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಮಿಂಚಿದರು. ಪ್ರಕಾಶ್ ರಾಜ್ ಪಾನ್ ಇಂಡಿಯಾ ನಟರಾದರು.
ಇವರೆಲ್ಲರೊಂದಿಗೆ ಇಂಥವರ ಸಮಾನ ಗುಣಗಳೆಂದರೆ…. ಅಮೀರ್ ಖಾನ್ ಇರಲಿ, ವಿಜಯ್ ಸೇತುಪತಿ ಇರಲಿ,ಶಿವರಾಜ್ಕುಮಾರ್ ಆಗಲಿ,ಅಥವಾ ಇನ್ನೂ ಅನೇಕ ನಟರು, ಸಾಧಕರಿರಲಿ ಅವರು ಹೊಸತನ ಹುಡುಕುತ್ತಾರೆ.

ನಮ್ಮನ್ನು ನೋಡಲು ಬರುವ ಜನರಿಗೆ ಪ್ರತಿಚಿತ್ರದಲ್ಲಿ ಹೊಸತೇನನ್ನೂ ಕೊಡದಿದ್ದರೆ ಆ ನಟ ಹೆಚ್ಚು ಸಮಯ ಉಳಿಯಲಾರ. ಇದಕ್ಕೆ ಕಮಲಹಾಸನ್, ಪುನೀತ್ ರಾಜಕುಮಾರ ಮಾದರಿಯಾಗುತ್ತಾರೆ.
ಘಜನಿ, ತಾರೆ ಜಮೀನ್ ಪರ್, ತ್ರೀ ಇಡಿಯಟ್ ಮಾಡಿದ ಅಮೀರ್, ಪಯಲ್ವಾನ್, ರನ್ನ, ಹುಚ್ಚ ಸಿನೆಮಾಗಳಲ್ಲಿ ಅಭಿನಯಿಸಿದ ಕಿಚ್ಚ ಸುದೀಪ್, ತಲೈವ ರಜನಿಕಾಂತ್, ಪ್ರಭುದೇವ , ನೂರಾರು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಅಣ್ಣ ರಾಜಕುಮಾರ್, ಅಮಿತಾಬಚ್ಚನ್, ಜನರ ಅಪೇಕ್ಷೆ, ನಿರೀಕ್ಷೆಯಂತೆ ಬದಲಾಗುತಿದ್ದರು. ಆದರೆ ಅವರ ಸರಳತೆ, ಸಂಪನ್ನತೆ ಎಂದೂ ಬದಲಾಗುತ್ತಿರಲಿಲ್ಲ.
ರಘುವೀರ್, ಕುಮಾರ ಗೋವಿಂದ, ರಮೇಶ್, ವಿಷ್ಣುವರ್ಧನ ಸೇರಿ ಹಲವು ಪ್ರತಿಭಾವಂತರು ಆಗಾಗ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದಿದೆ ಆದರೆ ಶಾರುಖ್, ಅಮೀರ್ಖಾನ್, ಕಮಲಹಾಸನ್, ರಾಜಕುಮಾರ, ಪುನೀತ್ ರಾಜಕುಮಾರ್ ಪ್ರತಿಭೆ ಹಿಂದೆ ಅವರ ಜಾಣ್ಮೆ, ಶ್ರಮ,ಪಾತ್ರದಿಂದ ಪಾತ್ರಕ್ಕೆ ಬದಲಾಗುವ ಸೃಜನಶೀಲ ಕ್ರೀಯಾಶೀಲತೆ ನಿರಂತರವಾಗಿರದಿದ್ದರೆ ಯಶಸ್ಸು, ಜನಮನ್ನಣೆ ಸಾಧ್ಯವಿಲ್ಲ.
ಇಂದಿನ ತಾಂತ್ರಿಕ ಔನ್ಯತ್ಯದ ಸಮಯದಲ್ಲಿ ಹೊಸ ಬದಲಾವಣೆ, ಅವಶ್ಯಕತೆಗಳಿಗೆ ಹೊಂದಿಕೊಳ್ಳದಿದ್ದರೆ ಯಾರೂ ಶೀಘ್ರವಾಗಿ ಮರೆಯಾಗಿ ಹೋಗಬಹುದು ಕಾಲಕ್ಕೆ ತಕ್ಕಂತೆ, ಹೊಸ ಅವಶ್ಯಕತೆಗಳಿಗೆ ತಕ್ಕಂತೆ, ಜನರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಬದಲಾಗದಿದ್ದರೆ ಹೀರೋ, ನಾಯಕ, ಜನಸಾಮಾನ್ಯ ಯಾರೂ ಉಳಿಯಲಾರರು. ಇಷ್ಟು ಹೇಳಲು ಡಾ. ರಾಜ್, ಕಮಲ್, ಶಾರುಖ್, ಅಮೀರ್ ಜೊತೆಗೆ ಇನ್ನೂ ನೂರಾರು ಜನರು ಬೇಕಾದರು. ನಿಮಗೇನನ್ನಿಸುತ್ತೆ?

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






