ಕಾವಂಚೂರು ಕಿಡ್ನಾಪ್‌ ಪ್ರಕರಣ.. ವಸಂತ ನಾಯ್ಕ ಮೇಲೆ ಮುಗಿಬಿದ್ದ ಬಿ.ಜೆ.ಪಿ.!

ಮಾಧ್ಯಮಗೋಷ್ಠಿ ಮುಖ್ಯಾಂಶಗಳು……

  • ನಿಮ್ಮ ಬಗ್ಗೆ ಏನಿಲ್ಲ ನಮಗೆ, ನಮ್ಮವನೊಬ್ಬನನ್ನು ಅವರು ತಗೊಂಡ್ಹೋಗಿದ್ದಾರೆ ಹಾಗಾಗಿ ನಾವು ನಿಮಗೆ ಕರಕೊಂಡೋಗತಿದ್ದೀವಿ ಅಷ್ಟೆ…. ಅಂತ ವಸಂತ ಹೇಳಿದ್ರು – ಬಿಳಿಯಾ ಗೊಂಡ
  • * ವಸಂತ ನಾಯ್ಕ ಮೇಲಿಂದ ಮೇಲೆ ಇಂಥ ಕೆಲಸ ಮಾಡತಿದ್ದಾರೆ ಅವರುಸೋಶಿಯಲ್‌ ಮೀಡಿಯಾದಲ್ಲಿ ಅಧಿಕಾರಸ್ಥರ ಜೊತೆ ನಿಂತಿರುವ ಫೋಟೋ ಹಾಕೊಳದ್‌ ರಿಂದ ಪೊಲೀಸರು ಬಿಡತಿದ್ದಾರೆ ಇರಬೇಕು…. – ಕೆ.ಜಿ.ನಾಯ್ಕ

ಗಾಳಿಸುದ್ದಿಯಾಗಿ ಚರ್ಚೆಯಲ್ಲಿದ್ದ ಕಾವಂಚೂರು ಅಪಹರಣ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಮಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕರನ್ನು ಟಾರ್ಗೆಟ್‌ ಮಾಡುವ ಮೂಲಕ ಬಿ.ಜೆ.ಪಿ., ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಮತ್ತು ಕಾಂಗ್ರೆಸ್‌ ಗುರಿಮಾಡಿ ಸ್ವತಂತ್ರ ಅಸ್ಥಿತ್ವವೇ ಇಲ್ಲದ ಬಿ.ಜೆ.ಪಿ. ಕಾಂಗ್ರೆಸ್‌ ಹೆಬ್ಬಾಗಿಲ ಬಳಿ ನಿಂತಿರುವ ಶಿವರಾಮ ಹೆಬ್ಬಾರ್‌ ಬಣ ಬೆಂಬಲಿಸುವ ಸೂಚನೆ ನೀಡಿದೆ.

ಕಾಂಗ್ರೆಸ್‌ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ತಮ್ಮ ಶಾಸಕರ ವಿರುದ್ಧವೇ ಕೆಲಸ ಮಾಡುತ್ತಾ ಪರ್ಯಾಯ ನಾಯಕತ್ವ ಸೃಷ್ಟಿಗೆ ಪ್ರಯತ್ನಿಸುತಿದ್ದಾರೆ. ಇದರ ಅಂಗವಾಗಿ ಸಿದ್ಧಾಪುರದ ಪ್ರಾಥಮಿಕ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್‌ ಹಳೆ ತಂಡವನ್ನು ಬೆಂಬಲಿಸಿದ್ದರೆ… ಮಂಕಾಳು ವೈದ್ಯ ಹೊಸ ತಂಡ ಕಟ್ಟಲು ಪ್ರಯತ್ನಿಸಿ ವಿಫಲವಾದದ್ದು ಹಳೆಯ ಕತೆ.

ಈ ಪ್ರಹಸನದ ಮುಂದುವರಿಕೆ ಎಂಬಂತೆ ಸಿದ್ಧಾಪುರ ಕಾವಂಚೂರು ವಿ.ಎಸ್.ಎಸ್.‌ ನಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್‌ ಪ್ರತಿನಿಧಿ ಆಯ್ಕೆ ಸಂಬಂಧ ಸಭೆ ನಡೆದು, ಸಭೆಯಲ್ಲಿ ಕೋರಂ ಮಾಡಲು ವಿಫಲವಾದ ಆಡಳಿತಾರೂಢ ಬಿ.ಜೆ.ಪಿ. ತಂಡ. ಈ ಹಿನ್ನೆಡೆಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕರ ದೌರ್ಜನ್ಯ, ಗೂಂಡಾಗಿರಿ ಕಾರಣ ಎಂದು ಪರೋಕ್ಷವಾಗಿ ಹೇಳಿದೆ.

ಕಾವಂಚೂರು ವಿ.ಎಸ್.ಎಸ್.‌ ಪ್ರಮುಖವಾಗಿಟ್ಟುಕೊಂಡು ವಸಂತ ನಾಯ್ಕ ಕಾನೂನು ಬಾಹೀರ ಚಟುವಟಿಕೆ ನಡೆಸುತ್ತಾ ತಾಲೂಕಿನ ಶಾಂತಿ-ಸುವ್ಯವಸ್ಥೆ ಹಾಳುಮಾಡುತಿದ್ದಾರೆ ಎಂದು ಆರೋಪಿಸಿರುವ ಬಿ.ಜೆ.ಪಿ,. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಶಾಸಕರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರ ಹೆಸರುಗಳನ್ನು ಹೇಳಿಕೊಂಡು ಅಧಿಕಾರಿಗಳು, ವ್ಯವಸ್ಥೆಯ ದುರ್ಬಳಕೆ ಮಾಡಿಕೊಳ್ಳುತಿದ್ದಾರೆ ಇದನ್ನು ನಿಯಂತ್ರಿಸದಿದ್ದರೆ ಅದಕ್ಕೆ ಸರಿಯಾಗಿ ಸೂಕ್ತಸಮಯದಲ್ಲಿ ಉತ್ತರ ನೀಡುವುದಾಗಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದೆ. ಈ ಬಗ್ಗೆ ವಿವರವಾದ ವಿಡಿಯೋ ಕ್ಲಿಪ್ಪಿಂಗ್‌ಗಳು samaajamukhi ಯೂ ಟ್ಯೂಬ್‌ ಚಾನಲ್‌ ನಲ್ಲಿವೆ.

https://samajamukhi.net/2025/08/17/rss-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%a4%e0%b2%be%e0%b2%b2%e0%b2%bf%e0%b2%ac%e0%b2%be%e0%b2%a8%e0%b3%8d%e0%b2%97%e0%b2%b3%e0%b3%81-%e0%b2%a6%e0%b3%87%e0%b2%b6

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *