

3 ಇನ್ 1 ಸುದ್ದಿ-
ಗಾಂಧಿ ಅವಹೇಳನ, ಬಿ.ಜೆ.ಪಿ.
ಕಾರ್ಯಕರ್ತನ ಬಂಧನ
ಮಹಾತ್ಮಾಗಾಂಧಿಯವರ ಮೇಲೆ ಅವಹೇಳನ ಮಾಡಿ ಫೇಸ್ಬುಕ್ ನಲ್ಲಿ ಬರಹ ಪ್ರಕಟಿಸಿದ್ದ ಸಿದ್ಧಾಪುರ ತಾಲೂಕಿನ ಜಿಡ್ಡಿಯ ಬಿ.ಜೆ.ಪಿ.ಕಾರ್ಯಕರ್ತನನ್ನು ಶಿರಸಿಯಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ವಿನಯ್ ಎನ್ನುವ ಬಿ.ಜೆ.ಪಿ. ಕಾರ್ಯಕರ್ತ ಮಹಾತ್ಮಾಗಾಂಧಿ ಮತ್ತು ಗಾಂಧಿ ಕುಟುಂಬದ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಕಟಿಸಿದ್ದ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಈ ಯುವಕನನ್ನು ಬಂಧಿಸಿರುವುದಾಗಿ ತಡವಾಗಿ ತಿಳಿದುಬಂದಿದೆ. ಈ ಯುವಕನ ನೆರವಿಗೆ ಬಿ.ಜೆ.ಪಿ. ಬಾರದಿದ್ದುದರಿಂದ ಬೇರೆ ವ್ಯಕ್ತಿಗಳು ಮಾನವೀಯತೆ ಆಧಾರದಲ್ಲಿ ಸಹಕರಿಸಿರುವುದು ಸಂಘದೋಷದ ಹುಚ್ಚು ಯುವಕರಿಗೆ ತಕ್ಕ ಪಾಠ ಎನ್ನುವ ಅಭಿಪ್ರಾಯ ಬಂದಿದೆ.

ಕಾಡುಹಂದಿ ಬೇಟೆ,ಬಂಧನ
ಸಿದ್ಧಾಪುರ ತಾಲೂಕಿನ ಬಿಳಗಿ ಗೀಜಗಾರ ಬಳಿ ಕಾಡುಹಂದಿ ಬೇಟೆ ಆರೋಪದ ಮೇಲೆ ಕೆಲವರನ್ನು ಬಂಧಿಸಿದ ಘಟನೆ ನಡೆದಿದೆ. ರೈತರ ಜಮೀನಿಗೆ ಕಾಡುಹಂದಿ ತೊಂದರೆ ಕೊಡುತ್ತಿದ್ದುದರಿಂದ ರೈತರು ಹಂದಿ ಮತ್ತು ಕಾಡು ಕೋಣ ಬೆದರಿಸಲು ಹಾಕಿದ ವಿದ್ಯುತ್ ತಂತಿಗೆ ತಗುಲಿ ಕಾಡುಹಂದಿ ಸಾವನ್ನಪ್ಪಿದ್ದು ಈ ಪ್ರಕರಣದ ಆರೋಪಿತರನ್ನಾಗಿ ಕೆಲವರನ್ನು ಬಂಧಿಸಿರುವುದಾಗಿ ಸುದ್ದಿಯಾಗಿದೆ.
ಕಾಗೆ ಕಾಂಗ್ರೆಸ್ ಕಡೆ
ಕಾಗವಾಡದ ಮಾಜಿ ಶಾಸಕ ಭರಮಗೌಡ (ರಾಜು)ಕಾಗೆ ಬಿ.ಜೆ.ಪಿ. ತ್ಯಜಿಸಿ,ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದಾರೆ. ಕಾಗವಾಡ ಅಥವಾ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಲು ತಯಾರಿ ನಡೆಸಿರುವ ಕಾಗೆ ಒಂದುಬಾರಿ ಸಂಯುಕ್ತ ಜನತಾದಳ ಮತ್ತು ಮೂರು ಬಾರಿ ಬಿ.ಜೆ.ಪಿ.ಯಿಂದ ಶಾಸಕರಾದವರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






