

ಕರೋನಾ ವಿರುದ್ಧದ ಹೋರಾಟಕ್ಕೆ ಮಠ-ಮಂದಿರ-ದರ್ಗಾ-ಮಿಷನರಿಗಳ
ದುಡ್ಡು ಹರಿದುಬಂದರೆ;

ಖ್ಯಾತ-ಕುಖ್ಯಾತ ವಿದ್ಯಾಸಂಸ್ಥೆಗಳು
ಕೂಡಿಟ್ಟ ಕಾಸು ಹೊರಗೆ ಬಂದರೆ;
ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂಗಳು
ಕೂಡಲೇ ದೇಶದ ಜನರ ಸೊತ್ತಾದರೆ;


ರಾಜಕೀಯ ಪಕ್ಷಗಳ ಕೋಟಿ ಕೋಟಿ ದೇಣಿಗೆ
ಲಾಕ್ ಡೌನ್ ಸಂತ್ರಸ್ತರ ಕೈಸೇರಿದರೆ;
ನಾನು ಹಚ್ಚುವೆ ದೀಪ..
ನಾಳೆ,
ಖಂಡಿತಾ ಹಚ್ಚುವೆ ದೀಪ.
ಇಲ್ಲವೇ-
ಸೋಂಕು ಮಾರಿಗೆ,
ಸರ್ಕಾರದ ಕುರುಡುಗಣ್ಣಿಗೆ
ಸಿಕ್ಕು ಬದುಕು ಕಳೆದುಕೊಂಡವರಿಗೆ
ಒಂದು ಹಿಡಿ ಕಾಳು-ಕಡ್ಡಿ,
ಒಂದು ನಿಟ್ಟುಸಿರ ಮೌನವಷ್ಟೇ
ಕೊಡಲು ಶಕ್ತ..!
ಕ್ಷಮಿಸಿ,
ದಿಲ್ಲಿಯಿಂದ ಹಳ್ಳಿಯವರೆಗೆ
ನೀವು ಹೊರದಬ್ಬಿದವರ ಹೆಣಗಳೇ
ಕಾಲಿಗೆ ಎಡರುತ್ತಿರುವಾಗ;
ಸತ್ತವರ ಎದೆ ಮೇಲೆ
ಕಾಲಿಟ್ಟು ಜೈಕಾರ ಹಾಕಲಾರೆ..
ಬಲಿಪಶುಗಳ ಕೊರಳುಕಟ್ಟಿಸಿ
ರಾಜಭಕ್ತಿಯ ಮೆರೆಸಲಾರೆ!!
- ಶಶಿ ಸಂಪಳ್ಳಿ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






