ಸಮಾಜಮುಖಿಗೆ ಸಿಕ್ಕ ಶತಮಾನದ ಹಿಂದಿನ ದಾಖಲೆ, 1932 ರಲ್ಲಿ ಮೈಲಿ ಬಂದ ದಾಖಲೆ ಕಾನಳ್ಳಿಯಲ್ಲಿ ಲಭ್ಯ!

ಈಗಿನ ಕರೋನಾದಂತೆ ಶತಮಾನಗಳ ಹಿಂದೇ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತಿದ್ದವು ಎಂದು ಮಾತನಾಡುವುದನ್ನು ಕೇಳುತ್ತೇವೆ. ಈ ಸಾಂಕ್ರಾಮಿಕ ರೋಗಗಳು ಶತಮಾನಕ್ಕೊಮ್ಮ ಸರಿಸುಮಾರು ನೂರು ವರ್ಷಗಳ ಅಂತರದಲ್ಲಿ ಕಾಣಿಸಿಕೊಂಡಿವೆ ಎನ್ನಲಾಗುತ್ತದೆ.
ಕೆಲವು ದಾಖಲೆಗಳು 1800 ರ ಮೊದಲ ದಶಕಗಳಲ್ಲಿ ನಂತರ 1900 ರ ಮೊದಲ ದಶಕಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾ ಣಿಸಿಕೊಂಡ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಕಾಲರಾ,ಪ್ಲೇಗ್ ಇದೇ ರೀತಿಯ ರೋಗಗಳನ್ನು ದುದ್ದಮ್ಮನ ಜಡ, ಅಮ್ಮ,,ಸಿಡುಬು, ಮಾರಿರೋಗ ಎಂದೆಲ್ಲಾ ಕರೆದಿದ್ದನ್ನು ಕೇಳಿದ್ದೇವೆ. ಈಗ (ಉ.ಕ.) ಸಿದ್ಧಾಪುರ ತಾಲೂಕಿನ ಕಾನಳ್ಳಿ ಮಠದಲ್ಲಿ 1932 ರಲ್ಲಿ ಮೈಲಿರೋಗ ಬಂದಿದ್ದ ಬಗ್ಗೆ ಸಂಗ್ರಹಿತ ದಾಖಲೆಯೊಂದು ದೊರೆತಿದೆ.
ಸಮಾಜಮುಖಿಗೆ ಈ ಮಾಹಿತಿ ನೀಡಿ ತಮ್ಮ ಬಳಿಯ ಲಿಖಿತ ದಾಖಲೆಯನ್ನು ಪ್ರದರ್ಶಿಸಿರುವ ಕಾನಳ್ಳಿಯ ಪರಮೇಶ್ವರಯ್ಯ ಕಾನಳ್ಳಿಮಠ ಕಾನಳ್ಳಿಯಲ್ಲಿ ಮೈಲಿ ಬಂದ ಹಳೆಯ ದಾಖಲೆ ಇದು ಎಂದಿದ್ದಾರೆ.

ತಮ್ಮ ಕಾನಳ್ಳಿಮಠ ಪುರಾತನವಾಗಿದ್ದು 1932 ರಲ್ಲಿ 20 ಜನರಿಗೆ ಮೈಲಿ ಬೇನೆ ಬಂದ ಬಗ್ಗೆ ಉಲ್ಲೇಖವಿದೆ. ಈ ರೋಗಿಗಳು ಸತ್ತರೋ ಗುಣಮುಖರಾದರೋ ಎನ್ನುವುದನ್ನು ಸ್ಫಷ್ಟಪಡಿಸಿಲ್ಲ ಆದರೆ ದಾಖಲೆಯಲ್ಲಿ 20 ಜನರಿಗೆಮೈಲಿಬಂದು ಸುಖಾಂತವಾಯಿತು ಎಂದು ಬರೆಯಲಾಗಿದೆ

. ಈ ಬಗ್ಗೆ ಜಾಗೃತಿಯ ಕಾರ್ಯಕ್ರಮ ಒಂದನ್ನು ಮಾಡಿದ್ದು ಇದರ ನೇತೃತ್ವವನ್ನು ಅವರಗುಪ್ಪಾ ಮೂಲದ ಹಾಲಪ್ಪ ಮಾಸ್ತರ್ ವಹಿಸಿದ್ದರು ಎನ್ನುವ ಉಲ್ಲೇಖವಿದೆ. ಮೈಲಿರೋಗದ ಶತಮಾನದಷ್ಟು ಹಳೆಯದಾದ ಹಿಂದಿನ ಶತಮಾನದ ಈ ದಾಖಲೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಿಕ್ಕ ಹಳೆಯ ದಾಖಲೆಯಾಗಿದೆ.1920-30 ರ ಅವಧಿಯಲ್ಲಿ ಬಂದ ಸಾಂಕ್ರಾಮಿಕ ರೋಗದ ಬಲಿಪಶುಗಳನ್ನು ಸಿದ್ಧಾಪುರ ಹೊಸೂರಿನ ಕಡಕೇರಿ ರಸ್ತೆಯ ಪಕ್ಕ ಎಸೆಯಲಾಗಿತ್ತು ಎನ್ನುವ ಮಾಹಿತಿಯನ್ನು ಕೆಲವರು ಚರ್ಚಿಸುತ್ತಿರುವುದು ಸಮಾಜಮುಖಿ ಪ್ರತಿನಿಧಿಯ ಗಮನಕ್ಕೆ ಬಂದಿದೆ.

ಆರ್.ಎಸ್.ಎಸ್. ಏನು ಮಾಡುತ್ತಿದೆ? ಬಂಗಾರಪ್ಪ, ಮಹೇಂದ್ರಕುಮಾರರ ದೃಷ್ಟಾಂತಗಳೊಂದಿಗೆ ವಾಸ್ತವದ ನಿಕಶ
ನಿನ್ನೆ ನಮ್ಮ ಧ್ವನಿ ಸಂಸ್ಥಾಪಕ, ಪ್ರಗತಿಪರ ಚಿಂತಕ ಮಹೇಂದ್ರಕುಮಾರ್ ನಮ್ಮನ್ನಗಲಿದರು.
ಅವರ ಸಾವಿನ ಸುದ್ದಿ ತಿಳಿದದ್ದೇ ಏನೋ ಕಳವಳ ಶುರುವಾಯಿತು. ಸ್ನೇಹಿತರಾದ ಲೋಹಿತ್, ಮಹೇಶ್ ಸೇರಿದ ಅನೇಕರು ಸಂದೇಶ ಕಳುಹಿಸಿದ್ದರು. ವಾರ್ತೆ ತಿಳಿದ ನನ್ನ ಮನಸ್ಸು ದೇಹ ಕೆಲಕಾಲ ಸ್ತಂಬ್ಧವಾದಂತಾಯಿತು. ಮಹೇಂದ್ರಕುಮಾರ ನಮಗೆ ವಿಚಾರ,ಕೃತಿಗಳಿಂದ ಇಷ್ಟವಾದ ನಾಯಕ. ಹಿಂದೆ ಅವರು ವಾಶಿಷ್ಠ ವಂಶದ ಕೆಲವು ಪರಿವಾರದ ಸಂಘಟನೆಯಲ್ಲಿದ್ದು ಅಲ್ಲಿಯ ಅವತಾರಗಳನ್ನು ನೋಡಿದವರು. ಉಳ್ಳವರು,ಮತಾಂಧರ ಪರ ಧ್ವನಿ ಮಾಡುವ ಇವರ ಜೊತೆಗಿದ್ದ ಕಟೀಲು ಸಂಸದರಾದರು,ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದರು. ಈ ಮಹೇಂದ್ರರಂತೆಯೇ ಹೃದಯದ ಭಾಷೆಯಲ್ಲಿ ಮಾತನಾಡುವ ಸತ್ಯಜಿತ್ ಸುರತ್ಕಲ್‍ರ ಕೆಲಸದ ಲಾಭ ಪಡೆದು ಶಿರಸಿಯ ಅನಂತಕುಮಾರ ಹೆಗಡೆ ಸಂಸದರಾದರು,ಸಚಿವರಾದರು ಆದರೆ ಸುರತ್ಕಲ್,ಮಹೇಂದ್ರಕುಮಾರ್ ಈ ರೀತಿ ಅಧಿಕಾರದ ಏಣಿ ಏರಲಿಲ್ಲ. ಸುರತ್ಕಲ್ ವಿಚಾರವಿರಲಿ, ಮಹೇಂದ್ರಕುಮಾರ್ ವಿಚಾರವಿರಲಿ ಅಥವಾ ಇತರ ವೈದಿಕೇತರ ನಾಯಕರು ಪರಿವಾರದ ಪರಿಚಾರಿಕೆಯಲ್ಲಿ ಕಳೆದುಹೋಗುತ್ತಾರೆ ಅಥವಾ ಹೊರಗೆ ನಾಶವಾಗುತ್ತಾರೆ. ಯಾಕೆ ಹೀಗೆ ಎಂದು ಗೃಹಿಸಿದರೆ. ……..

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

namdhari-issue- part-01 – ಚರಿತ್ರೆಯಿಂದ ಪಾಠ ಕಲಿಯಿರಿ… ವಿವೇಕದಿಂದ ಮುಂದುವರಿಯಿರಿ….

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ...

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

Latest Posts

namdhari-issue- part-01 – ಚರಿತ್ರೆಯಿಂದ ಪಾಠ ಕಲಿಯಿರಿ… ವಿವೇಕದಿಂದ ಮುಂದುವರಿಯಿರಿ….

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ ಸಮೂದಾಯವೊಂದರ ವಿಚಾರ. ಈ ವಿಷಯ ಅವರ ಆಂತರಿಕ ವಿಚಾರ ಆದರೆ ಇಲ್ಲಿ ರಾಜಕೀಯ ನುಸುಳಿರುವುದು ಎಲ್ಲಾ ವಿವಾದದ ಮೂಲಬಿಂದು ಎನ್ನುವ ವಿಚಾರ ಈಗ ಚರ್ಚೆಯಲ್ಲಿದೆ. ಸುಮಾರು ೨೫ ವರ್ಷಗಳ...

Recommended For You

About the Author: Kanneshwar Naik

Leave a Reply

Your email address will not be published. Required fields are marked *