‘ಪತ್ರಕರ್ತ’ರು ಎಂದು ಕರೆಸಿಕೊಳ್ಳುವ ಯೋಗ್ಯತೆ ಇದೆಯೇ?

ಕನ್ನಡ ಸುದ್ದಿ ಚಾನೆಲ್ ಗಳ ಎಲ್ಲ ಮುಖ್ಯಸ್ಥರಿಗೆ ನನ್ನ ನಮಸ್ಕಾರಗಳು. ಇದು ನಾನು ನಿಮಗೆಲ್ಲ ಬರೆಯುತ್ತಿರುವ ಬಹಿರಂಗ ಪತ್ರ. ಈ ವಿಷಯದ ಕುರಿತು ನಿಮ್ಮಲ್ಲಿ ಯಾರೇ ಯಾವ ವೇದಿಕೆಯಲ್ಲಿ ಬಹಿರಂಗ ಚರ್ಚೆ ಮಾಡಲು ಕರೆದರೂ ನಾನು ಬರಲು ಸಿದ್ಧ.

ಈವತ್ತು ಒಮ್ಮೆ ನಿಮ್ಮ ಮನೆ ಅಥವಾ ಕಚೇರಿಯಲ್ಲಿನ ಕನ್ನಡಿಯ ಮುಂದೆ ಹೋಗಿ ನಿಲ್ಲಿ. ಒಂದೈದು ನಿಮಿಷ ಕನ್ನಡಿಯ ಮುಂದೆ ನಿಂತು ’ಪತ್ರಕರ್ತ’ ಎಂದು ಕರೆಸಿಕೊಳ್ಳುವ ಯೋಗ್ಯತೆ ನಿಮಗಿದೆಯೇ ಎನ್ನುವುದನ್ನು ಯೋಚಿಸಿ. ಅದೇ ರೀತಿ ನಿಮ್ಮ ಮನೆಯಲ್ಲಿರುವ ಪತ್ನಿ, ಮಕ್ಕಳು, ತಂದೆ-ತಾಯಿಯ ಎದುರು ನಿಂತು ಅದೇ ಪ್ರಶ್ನೆಯನ್ನು ಕೇಳಿ. ಕನಿಷ್ಠ ಅವರು ನಿಮ್ಮ ನಿಲುವನ್ನು ಸಮರ್ಥಿಸುತ್ತಾರಾ ಎಂದು ಅರಿತುಕೊಳ್ಳಿ.

ಇದುವರೆಗೆ ನಿಮ್ಮಗಳ ಕುರಿತು ಒಬ್ಬ ಪತ್ರಕರ್ತನಾಗಿ ನಾನು ಈ ರೀತಿಯ ಬಹಿರಂಗ ಹೇಳಿಕೆ ನೀಡಿಲ್ಲ. ಈವತ್ತು ನೀಡುತ್ತಿದ್ದೇನೆ ಏಕೆಂದರೆ, ನೀವೆಲ್ಲ ನಿಮ್ಮ ನಿಮ್ಮ ಸುದ್ದಿ ವಾಹಿನಿಗಳಲ್ಲಿ ಮದ್ಯದಂಗಡಿಗಳ ತೆರೆಯುವಿಕೆಯ ಕುರಿತು ಸಂಭ್ರಮಿಸುತ್ತಿರುವ ರೀತಿ. ಇದ್ಯಾವ ಪತ್ರಿಕಾ ವ್ಯವಸಾಯ? ಯಾವ ರೀತಿಯ ವರದಿಗಾರಿಕೆ?

ನಿಮಗೆಲ್ಲ ಒಂದಿಷ್ಟು ಅಂತಃಸಾಕ್ಷಿಯಿದ್ದಿದ್ದರೆ, ಈ ಸಮಾಜದ ಬಗ್ಗೆ ಕಳಕಳಿ ಇದ್ದಿದ್ದರೆ ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧದ ಬಗ್ಗೆ ಲಾಬಿ ಮಾಡಬೇಕಿತ್ತು. ಸದಾ ಮದ್ಯ ನಿಷೇಧದ ಬಗ್ಗೆ ಕನಸು ಕಾಣುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ, ಹೆಗ್ಗೋಡಿನ ರಂಗಕರ್ಮಿ ಪ್ರಸನ್ನ… ಮುಂತಾದ ಗಣ್ಯರನ್ನು ನೀವು ಉಪಯೋಗಿಸಿಕೊಂಡು ಸರ್ಕಾರವನ್ನು ಮತ್ತು ಮದ್ಯದ ಲಾಬಿಯನ್ನು ಮಣಿಸಬೇಕಿತ್ತು.

ಅಬಕಾರಿ ಆದಾಯವೇ ಬಹಳ ದೊಡ್ಡದು ಎಂಬ ಸರ್ಕಾರದ ಮಾತನ್ನು ನೀವು ನಂಬಿದರೆ ನಿಮಗಿಂತ ದೊಡ್ಡ ಮೂರ್ಖರಿಲ್ಲ. ಮೇಲ್ನೋಟಕ್ಕೆ ಅಬಕಾರಿ ಆದಾಯ ಸರ್ಕಾರದ ಒಂದಿಷ್ಟು ಬೊಕ್ಕಸ ತುಂಬಿಸುತ್ತಿರಬಹುದು. ಆದರೆ, ಪರೋಕ್ಷವಾಗಿ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮ ಮತ್ತು ಅದರ ನಿರ್ವಹಣೆಗೆ ಸರ್ಕಾರ ಖರ್ಚು ಮಾಡುತ್ತಿರುವ ಹಣದ ಪ್ರಮಾಣ ಬರುತ್ತಿರುವ ಆದಾಯಕ್ಕಿಂತ ನಾಲ್ಕು ಪಟ್ಟು.

ಈ ವಿಷಯವನ್ನು ರಾಜಕಾರಣಿಗಳಿಗೆ, ನಮ್ಮನ್ನು ಆಳುತ್ತಿರುವವರಿಗೆ ಮನನ ಮಾಡಿಕೊಡಲು ಸಿಕ್ಕಿದ್ದ ಬಹಳ ದೊಡ್ಡ ಅವಕಾಶವನ್ನು ನೀವೆಲ್ಲ ಕಳೆದುಕೊಂಡಿರಿ. ಹಾಗೆ ಮಾಡುವುದನ್ನು ಬಿಟ್ಟು ನೀವಿಂದು ಸಂಭ್ರಮಿಸುತ್ತಿರುವ ರೀತಿಯನ್ನು ಕಂಡರೆ ನೀವು ಮದ್ಯದ ಲಾಬಿಯ ಪರವಾಗಿ ಲಾಬಿ ಮಾಡುತ್ತಿದ್ದೀರಿ ಎನ್ನುವುದು ಸ್ಪಷ್ಟವಾಗುತ್ತದೆ.

ನೀವು ನೈತಿಕವಾಗಿ ಎಷ್ಟು ಅಧಃಪತನಕ್ಕೆ ಇಳಿದಿದ್ದೀರಿ ಎನ್ನುವುದಕ್ಕೆ ಈವತ್ತು ಬೆಳಿಗ್ಗೆಯಿಂದ ನಿಮ್ಮ-ನಿಮ್ಮ ಸುದ್ದಿ ವಾಹಿನಿಗಳಲ್ಲಿ ಕ್ಯಾಮರಾ ಮುಂದೆ ಕೂತಿರುವ ಆಂಕರ್‍ ಗಳು ಮತ್ತು ನಿಮ್ಮ ವರದಿಗಾರರು ಮದ್ಯದಂಗಡಿಗಳ ತೆರವಿನ ಬಗ್ಗೆ ಸಂಭ್ರಮಿಸುತ್ತಿರುವ ರೀತಿಯೇ ಸಾಕ್ಷಿ. ಇನ್ನು ಇಂತಹ ಒಂದು ಸುದ್ದಿಯನ್ನು ವೈಭವೀಕರಿಸುತ್ತಿರುವ ರೀತಿ.

ಕೇವಲ ಒಂದೇ ಒಂದು ಸುದ್ದಿಯ ತುಣುಕಾಗಿ ಸರಿದು ಹೋಗಬೇಕಾಗಿದ್ದ ಮದ್ಯದಂಗಡಿ ತೆರವು ಎಂಬ ಸುದ್ದಿ ಇಂದು ರಾರಾಜಿಸುತ್ತಿದ್ದರೆ, ಅದಕ್ಕೆ ಕಾರಣ ನೈತಿಕವಾಗಿ ನೀವೆಷ್ಟು ಅಧಃಪತನಗೊಂಡಿರುವುದು. ಟಿ ಆರ್ ಪಿ ಮತ್ತು ರೆವಿನ್ಯೂ ಅಗತ್ಯ ಎಷ್ಟು ಎನ್ನುವುದು ನನಗೆ ಸರಿಯಾಗಿ ಗೊತ್ತು. ಆದರೆ, ಅದಕ್ಕಾಗಿ ಅಂತಃಸಾಕ್ಷಿಯನ್ನು ಮಾರುವ ಅಗತ್ಯವಿಲ್ಲ.

ನಿಮಗೆಲ್ಲ ಸಮಾಜದ ಪರ, ಸಮಾಜದ ಸ್ವಾಸ್ಥ್ಯದ ಪರ ನಿಲ್ಲುವ ಒಂದು ಅಮೋಘ ಅವಕಾಶ ಇತ್ತು. ಕಳೆದ ನಲವತ್ತು ದಿನಗಳಿಂದ ಈ ರಾಜ್ಯ (ದೇಶ)ದ ಜನರು ಮದ್ಯವಿಲ್ಲದೇ ಬದುಕಿ ಉಳಿದಿದ್ದರು. ಇನ್ನು ಮುಂದೆ ಕೂಡ ಬದುಕಲಿದ್ದರು.

ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಸುದ್ದಿ ಚಾನೆಲ್ ಗಳೆಲ್ಲವೂ ಒಂದಾಗಿ ಮದ್ಯ ನಿಷೇಧದ ಒಂದು ಚಳವಳಿ ಆರಂಭಿಸಬಹುದಿತ್ತು. ಆ ಚಳವಳಿಯ ಮೂಲಕ ಜನಾಭಿಪ್ರಾಯ ಮೂಡಿಸಿ, ಮದ್ಯ ನಿಷೇಧ ಜಾರಿಗೆ ತರುವಂತೆ ಮಾಡಬಹುದಿತ್ತು. ಅದನ್ನು ಬಿಟ್ಟು… ನೀವಿಂದು ಮೂರೂ ಬಿಟ್ಟು ರಾಜ್ಯದ ಜನರೆದುರು ಬೆತ್ತಲಾಗಿ ನಿಂತಿದ್ದೀರಿ. ಪತ್ರಕರ್ತರಾಗಿ ಸತ್ತು ಹೋಗಿದ್ದೀರಿ. ನಿಮ್ಮನ್ನು ಕಂಡರೆ ಅಯ್ಯೋ ಎನಿಸುತ್ತಿದೆ. ಅಷ್ಟೆ. -ಸತೀಶ್ ಚಪ್ಪರಿಕೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *