

ಮೊದಮೊದಲು ಹೆಚ್ಚು ಕೋವಿಡ್ ಪ್ರಕರಣಗಳಿಂದ ಕುಖ್ಯಾತವಾದ ಉತ್ತರ ಕನ್ನಡ ಜಿಲ್ಲೆ ಈಗ ಕರೋನಾ ಗೆದ್ದ ಖುಷಿಯಲ್ಲಿ ಬೀಗುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಒಟ್ಟೂ 86 ಜನ ಕೋವಿಡ್ ಸೋಂಕಿತರಲ್ಲಿ 99% ವಿದೇಶಗಳಿಂದ ಪರರಾಜ್ಯಗಳಿಂದ ಬಂದವರು. ಮೂಲತ: ಉತ್ತರಕನ್ನಡ ಜಿಲ್ಲೆಯವರಾದರೂ ಇವರಲ್ಲಿ ಬಹುತೇಕ ಮಂದಿ ಹೊರ ದೇಶ, ರಾಜ್ಯಗಳಿಂದ ಬಂದವರಾಗಿದ್ದರು. ಹೀಗೆ ವಿದೇಶ, ಹೊರ ರಾಜ್ಯಗಳಿಂದ ಬಂದು ಕರೋನಾ ಸೋಂಕಿತರಾಗಿದ್ದ ಜಿಲ್ಲೆಯ ಒಟ್ಟೂ86 ಜನರಲ್ಲಿ ಇಂದು ಗುಣಮುಖರಾಗಿ ಹೊರ ನಡೆದ 18 ಜನರು ಸೇರಿ ಈವರೆಗೆ ಒಟ್ಟೂ65 ಜನರು ಕೋವಿಡ್ 19 ಗೆದ್ದ ಅದೃಷ್ಟವಂತರಾಗಿದ್ದಾರೆ.
ಉಳಿದ 21 ಜನರ ಆರೋಗ್ಯ ಸ್ಥಿರವಾಗಿದ್ದು ಇವರೆಲ್ಲರೂ ಗುಣಮುಖರಾಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ ತಿಂಗಳ ಕೊನೆಯಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣ,ನಿರ್ವಹಣೆ ವಿಷಯದಲ್ಲಿ ಜಿಲ್ಲಾಡಳಿತ ಗೆದ್ದಿದೆ. ಹೊರ ರಾಜ್ಯಗಳಿಂದ ಬಂದು ಸಿದ್ಧಾಪುರದಲ್ಲಿ ಕ್ವಾರಂಟೈನ್ ಆಗಿದ್ದ ಒಟ್ಟೂ 5 ಜನರಲ್ಲಿ ಈವರೆಗೆ ಕರೋನಾ ದೃಢಪಟ್ಟಿತ್ತು. ಇಂದು ಗುಣಮುಖರಾಗಿ ಮನೆಗೆ ತೆರಳಿದ 52 ವರ್ಷದ ವ್ಯಕ್ತಿ ತಾಲೂಕಿನ ಮೊದಲ ಸೋಂಕಿತರಾಗಿದ್ದು ಇನ್ನುಳಿದ ನಾಲ್ಕೂ ಜನರು ಈ ಕರೋನಾ ವಿರುದ್ಧದ ಸಮರದಲ್ಲಿ ಗೆದ್ದು ಮನೆ ಸೇರುವ ವಿಶ್ವಾವಿದೆ ಎನ್ನಲಾಗಿದೆ. ಕರೋನಾದಿಂದ ಭಯ-ಭೀತಿಗೊಳಗಾಗಿದ್ದ ಜಿಲ್ಲೆಯ ಜನರಿಗೆ ಮುಕ್ಕಾಲು ಭಾಗದಷ್ಟು ಜನರು ಈಗಾಗಲೇ ಗುಣಮುಖರಾಗಿರುವುದು ಹೊಸ ಧೈರ್ಯ ನೀಡಿದಂತಾಗಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






