ಸಿದ್ಧಾಪುರದ ಸೋಂಕಿತ ಬಿಳಗಿಯನ್ನು ಆತಂಕಕ್ಕೆ ತಳ್ಳಿದನೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 50 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿದೆ. ಖುಷಿಯ ವಿಷಯವೆಂದರೆ…ಸಿದ್ಧಾಪುರದ ಹಿಂದಿನ ಪ್ರಕರಣಗಳು ಮತ್ತು ಸರ್ಕಾರಿ ಆಸ್ಫತ್ರೆಯ ಮಾದರಿಗಳೆಲ್ಲಾ ನೆಗೆಟಿವ್ ಬಂದಿವೆ. ಈ ಶುಭ ಸಮಾಚಾರದ ನಡುವೆ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದ ನಗರದ ವ್ಯಾಪಾರಿಯೊಬ್ಬರ ಮಗನಲ್ಲಿ ಇಂದು ಕರೋನಾ ದೃಢಪಟ್ಟಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ಧಾಪುರದ ರವೀಂದ್ರನಗರ ಅವರ ಮನೆ ಪ್ರದೇಶ, ಻ಅವರಿಗೆ ಸಂಬಂಧಿಸಿದ ಎರಡು ಅಂಗಡಿಗಳನ್ನು ಶೀಲ್ ಡೌನ್ ಮಾಡಲಾಗಿದೆ. ಈ ಸೋಂಕಿತರ ಪ್ರಾಥಮಿಕ ಸಂಪರ್ಕದ ಕನಿಷ್ಟ 15 ಜನರಿಗೆ ಕಾರಂಟೈನ್ ಮಾಡಲಾಗಿದೆ.

ವಿಚಿತ್ರವೆಂದರೆ, ಸುಮಾರು ಎರಡು ವಾರಗಳ ಹಿಂದೆ ಬೆಂಗಳೂರಿನಿಂದ ಮರಳಿದ್ದ ಇಂದಿನ ಸೋಂಕಿತ ತನ್ನ ಮಾದರಿ ಪರೀಕ್ಷೆಯ ವರದಿ ಬರುವ ಮುನ್ನ ತಮ್ಮ ಹೆಂಡತಿಯ ಮನೆ ಬಿಳಗಿಗೆ ಹೋಗಿದ್ದರು. ಅಲ್ಲಿ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮ ನೆರವೇರಿಸಿದ್ದರು ಎನ್ನಲಾಗುತ್ತಿದೆ.

ಸೋಂಕಿತನ ಮಗುವಿನ ಹುಟ್ಟುಹಬ್ಬಕ್ಕೆ ಅನೇಕ ಸ್ಥಳಿಯರು ಹೋಗಿದ್ದರು ಎಂದು ಬಿಳಗಿಯ ಜನ ಹಾದಿ-ಬೀದಿಯಲ್ಲಿ ಚರ್ಚಿಸುತಿದ್ದಾರೆ. ಸ್ಥಳಿಯ ಆಡಳಿತ ಮಾತ್ರ ಬಿಳಗಿಯಲ್ಲಿ ಸೋಂಕಿತನ ಮಗುವಿನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡವರು ಬೆರಳೆಣಿಕೆ ಜನರು ಅವರಿಗೆ ಹೋಮ್ ಕಾರಂಟೈನ್ ಮಾಡಲಾಗಿದ್ದು ಮಾದರಿ ಪರೀಕ್ಷೆಗಳ ವರದಿ ಬರುವವರೆಗೆ ಅವರಿಗೆ ಅನ್ಯರ ಸಂಪರ್ಕಮಾಡದಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಸಿದ್ಧಾಪುರದಲ್ಲಿ ಜನರ ಸಹಕಾರ,ಜಾಗೃತಿಯಿಂದ ಕರೋನಾ ನಿಯಂತ್ರಣದಲ್ಲಿದೆ ಎಂದು ಇಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಈ ಹೇಳಿಕೆ ಪ್ರಕಟವಾಗುವ ಮೊದಲು ಸಿದ್ಧಾಪುರ, ಬಿಳಗಿಯ ಕೆಲವೆಡೆ ಶೀಲ್ ಡೌನ್ ಮಾಡಲಾಗಿದೆ. ಇಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು ಸ್ವಯಂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ಅವಶ್ಯ ಪರೀಕ್ಷೆ, ಕಾರಂಟೈನ್ ಗೆ ಸಹಕರಿಸಿದರೆ ಹೆಚ್ಚಿನ ಻ಅಪಾಯ ತಪ್ಪಿಸಬಹುದಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *