nk-dc-cauction-ಉ.ಕ. ದಲ್ಲಿ ಕೃತಕ ಪ್ರವಾಹದ ಭಯ, ನೆರೆಯಾಯ್ತು ಹೊರೆ

ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಻ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಈ ವಾರ ಮಳೆಯಿಂದಾಗಿ ಪ್ರವಾಹ, ಪುನರ್ವಸತಿ, ರಸ್ತೆ, ವಿದ್ಯುತ್ ತೊಂದರೆಗಳಾಗಿವೆ. ಕಳೆದ ವರ್ಷ,ಇ ದೇ ಮಳೆಯಲ್ಲಿ ಇದೇ ವಾರ ಪ್ರವಾಹವಾಗಿ ಈ ಭಾಗದ ಬದುಕು,ಜನಜೀವನ ಕೊಚ್ಚಿಹೋಗಿತ್ತು. ಕಳೆದ ವರ್ಷ ಈ ಶತಮಾನದ ಮಳೆ ಹೊಸ ಜನಾಂಗಕ್ಕೆ ಮಳೆ,ಪ್ರವಾಹದ ತೊಂದರೆ, ಭೀತಿಯನ್ನು ಪರಿಚಯಿಸಿತ್ತು.

ಈ ವರ್ಷ ಈ ಪ್ರಮಾಣದ ತೊಂದರೆಗಳಾಗಿಲ್ಲವಾದರೂ ಈ ವಾರದ ಮಳೆ ಹಿಂದಿನ ವರ್ಷದ ಈ ಮಳೆ, ಈ ವಾರದ ಸಂಕಟವನ್ನು ನೆನಪಿಸಿದೆ. ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳನ್ನು ಸೇರಿ ನೆರೆ ಜಿಲ್ಲೆಗಳ ಸುಮಾರು ಮತ್ತೊಂದು ಡಜನ್ ತಾಲೂಕುಗಳಲ್ಲಿ ಈ ಮಳೆ, ನೆರೆಯ ತೊಂದರೆ ಬಹುತೇಕ ಮಳೆಗಾಲಗಳ ದುಸ್ವಪ್ನವಾಗಿದೆ.

ಮಳೆಯಿಂದ ನೆರೆ ಬರುವುದು, ಪ್ರವಾಹವಾಗುವುದು ಒಂದು ಸಮಸ್ಯೆಯಾದರೆ ಈ ಮಲೆನಾಡು,ಕರಾವಳಿ ಭಾಗದಲ್ಲಿ ಜಲಾಶಯ, ಜಲಾಗಾರಗಳ ಒಳಹರಿವು ಹೆಚ್ಚಾಗಿ ಕೃತಕ ನೆರೆ ಕೂಡಾ ಸಂಭವಿಸುತ್ತದೆ. ಕಡಿಮೆ ಮಳೆಯಾದರೆ ಜಲಾಶಯಗಳು ಭರ್ತಿಯಾಗುವುದಿಲ್ಲ ಆದರೆ ವಿಪರೀತ ಮಳೆಯಲ್ಲಿ ಜಲಾಶಯ, ಜಲಾಗಾರಗಳು ಯಾವಾಗ ತುಂಬುತ್ತವೆ ಎಂದು ನಿರ್ಧರಿಸುವುದು ಕಷ್ಟ. ಹಾಗಾಗಿ ಕೆ.ಪಿ.ಸಿ. ಮತ್ತು ಇತರ ಸಣ್ಣ, ಬೃಹತ್ ನೀರಾವರಿ ಇಲಾಖೆಗಳ ಜವಾಬ್ಧಾರಿಯ ಜಲಾಶಯಗಳು,ಜಲಾಗಾರಗಳು ತುಂಬಿ ಕೃತಕ ನೆರೆ ಸೃಷ್ಟಿಸುತ್ತವೆ. ಇದರಿಂದ ಕರಾವಳಿ ಭಾಗದ ಜನಜೀವನ ಮೂರಾಬಟ್ಟೆಯಾಗುತ್ತದೆ.

ಇಂಥ ಕೃತಕ ಪ್ರವಾಹದ ಬಗ್ಗೆ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಻ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ. ಈ ವಾರದ ಪ್ರವಾಹ ಮತ್ತು ಈ ತಿಂಗಳಲ್ಲಿ ಯಾವ ಗಳಿಗೆಯಲ್ಲೂ ಬರಬಹುದಾದ ಕೃತಕ ಪ್ರವಾಹದ ಬಗ್ಗೆ ಸ್ಥಳಿಯರೂ ಎಚ್ಚೆತ್ತುಕೊಳ್ಳಬೇಕಾದ ಻ಅವಶ್ಯಕತೆಯನ್ನು ಈ ವಿದ್ಯಮಾನ ಎತ್ತಿಹೇಳಿದೆ. ಅಂದಹಾಗೆ ಜಿಲ್ಲೆಯ ಜಲಾಶಯಗಳ ನಿರ್ವಹಣೆಯ ಜವಾಬ್ಧಾರಿಯ ಇಂಜಿನಿಯರ್ಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಈ ಸಕಾಲಿಕ ಎಚ್ಚರಿಕೆ ನೀಡಿದ್ದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *