a uniqe structure of malnaadu house-ಆರ್.ಆರ್. ಹೆಗಡೆ ಮತ್ತವರ ಐನಕೈ ಭವಂತಿ ಮನೆ

ಸಿದ್ಧಾಪುರದ ಕ್ಯಾದಗಿಯ ಐನಕೈ ಬಹುಪ್ರಸಿದ್ಧ ಗ್ರಾಮ. ಈ ಗ್ರಾಮದ ಅನೇಕರು ಹೊರ ಊರು,ಪರ ರಾಜ್ಯಗಳಿಗೆಲ್ಲಾ ಹೋಗಿ ಶ್ರಮದಿಂದ ಹೆಸರು ಮಾಡಿದ್ದಾರೆ. ಇಂಥ ಐನಕೈನ ವೆಂಕಟರಾಮಯ್ಯ ಎನ್ನುವವರು ಸುಮಾರು ನೂರು ವರ್ಷದ ಕೆಳಗೆ ಆ ಭಾಗದ ಪ್ರಮುಖರು.

ಅವರು ತಮ್ಮ ಬುದ್ಧಿ-ಶ್ರಮ ಬಳಸಿ ಸ್ವಾತಂತ್ರ್ಯಾ ನಂತರ ಸಿದ್ಧಾಪುರ ಮತ್ತು ಕುಮಟಾಗಳನ್ನು ಸಂಪರ್ಕಿಸುವ ಬಿಳಗಿ ಸೇತುವೆ ನಿರ್ಮಾಣಕ್ಕೆ ಕಾರಣವಾದರು. ಈ ಸಮಾಜಮುಖಿ ವೆಂಕಟಸುಬ್ಬಯ್ಯನವರ ಮಗ ರಾಮಪ್ಪ ಹೆಗಡೆ,ಅವರೂ ಜಮೀನ್ಧಾರರಾಗಿ ಅಪ್ಪ. ಮನೆಯ ಹೆಸರು ಉಳಿಸುತ್ತಲೇ ಸಾಮಾಜಿಕ ಕಾರ್ಯಕರ್ತರಾಗಿ ದುಡಿದರು.

ಅವರಿಗೆ ಐದು ಜನ ಗಂಡು ಮಕ್ಕಳು ಇತಿಹಾಸಕಾರ ರಾಜರಾಮ ಹೆಗಡೆ, ಪತ್ರಕರ್ತ ರಂಗಕರ್ಮಿ ರಮಾನಂದ ಹೆಗಡೆ (ಐನಕೈ) ಸೇರಿದ ಻಻ಅನೇಕ ಸಹೋದರರು, ಸಹೋದರಿಯರು, ಸೊಸೆಯಂದಿರು, ಮಕ್ಕಳ ಈ ತುಂಬುಕುಟುಂಬ ಸುಶಿಕ್ಷಿತ ಜನರ ಮನೆ. ಇವರ ಹಳೆಯ ಮನೆ ಭವಂತಿ ಮನೆಯಾಗಿದ್ದು ಮಲೆನಾಡಿನ ಸೋಗೆಮುಚ್ಚಿದ ಬೆಚ್ಚಗಿನ ಮನೆಯಾಗಿದ್ದನ್ನು ನಾವೆಲ್ಲಾ ಕಂಡವರು. ಆನಂತರ ಆರ್.ಆರ್.ಹೆಗಡೆ ಹೊಸಮನೆ ಕಟ್ಟತೊಡಗಿದಾಗ ಭವಂತಿಮನೆಯ ಕಾಲ ಮುಗಿಯಿತು ಎಂದುಕೊಂಡವರೇ ಹೆಚ್ಚು.

ಆದರೆ, ಈಗಿನ ಆಧುನಿಕ ತಂತ್ರಜ್ಞಾನದ ನೂತನ ಗೃಹ ಕೂಡಾ ಹಳೆಯ ಭವಂತಿ ಮನೆಯ ಬಹುತೇಕ ವಿಶೇಶಗಳನ್ನು ಮೇಳೈಸಿಕೊಂಡೇ ನಿರ್ಮಾಣವಾಗಿದೆ. ನಮ್ಮ ಎಂದಿನ ರೂಢಿಯಂತೆ ಐನಕೈ ಮನೆಗೆ ಹೋದಾಗ ಟಿ.ಎಸ್.ಎಸ್. ನಿಂದ ನಿವೃತ್ತರಾದಂತೆ, ಚಿಕ್ಕ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡವರಂತೆ ಓದಿನಲ್ಲಿ ಮುಳುಗಿದ್ದ ಆರ್.ಆರ್. ಹೆಗಡೆವರನ್ನು ಆಕಸ್ಮಿಕ, ಻಻ಅನಿರೀಕ್ಷಿತ ಎನ್ನುವಂತೆ ಮಾತಿಗೆಳೆದವು. ಹಿರಿಯ ಗೆಳೆಯ ಸುರೇಂದ್ರ ದಫೇದಾರ್ ಚಿತ್ತೀಕರಿಸಿದ ಈ ವಿಡಿಯೋ ಐನಕೈ ಮತ್ತು ಅವರ ಮನೆಯನ್ನು ಪರಿಚಯಿಸಬಹುದೆನ್ನುವ ವಿಶ್ವಾಸದಿಂದ ಇಲ್ಲಿ ಜೋಡಿಸಿದ್ದೇವೆ. ಅಂದಹಾಗೆ… ಹಳೆ ನೆನಪು, ವೈಶಿಷ್ಟ್ಯ ಉಳಿಸಿಕೊಂಡ ಐನಕೈ ಭವಂತಿಮನೆಯ ಉಪಮೆಯೊಂದಿಗೆ ಈ ಕುಟುಂಬದ ಸಾಮಾಜಿಕ ಕೆಲಸ, ಕೊಡುಗೆ ಕೂಡಾ ಪುನರ್ ಮನನಕ್ಕೆ ಯೋಗ್ಯ. ಯಾಕೆಂದರೆ ಸರಿಸುಮಾರು ಒಂದು ಶತಮಾನದ ಹಿಂದಿನಿಂದ ಈ ಭಾಗಕ್ಕೆ ಸಂಪರ್ಕ ರಸ್ತೆ, ಸೇತುವೆ, ಆರೋಗ್ಯ ವ್ಯವಸ್ಥೆಗಳ ಹಿಂದಿನ ಕೈ ಈ ಐನಕೈ. ಈ ಕುಟುಂಬಕ್ಕೆ ಆಕಾಲದಲ್ಲಿ ಬಲಗೈ ಯಂತಿದ್ದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *