ಡಾಲಿ,ಬಡವ ರ್ಯಾಸ್ಕಲ್ ಕತೆ!

ಧನಂಜಯ್ ‘ಬಡವ ರಾಸ್ಕಲ್’ ಗೆ ವಿಸ್ಮಯಕಾರಿ ಕ್ಲೈಮ್ಯಾಕ್ಸ್: ನಿರ್ದೇಶಕ ಗುರುಪ್ರಸಾದ್

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ “ಬಡವ ರಾಸ್ಕಲ್” ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. “ಎದ್ದೇಳು ಮಂಜುನಾಥ” ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ “ಬಡವ ರಾಸ್ಕಲ್” ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. “ಎದ್ದೇಳು ಮಂಜುನಾಥ” ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶಾಟ್‌ನಲ್ಲಿಗುರುಪ್ರಸಾದ್ ನಟಿಸಿದ್ದು ಜತೆಗೆ ಇನ್ನೊಬ್ಬ ನಿರ್ದೇಶಕ ವಿಜಯ ಪ್ರಸಾದ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ನಿರ್ದೇಶಕ ಶಂಕರ್ ಗುರು ಮತ್ತು ನಟ ಧನಂಜಯ್ “ಬಡವ ರಾಸ್ಕಲ್” ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಗುರುಪ್ರಸಾದ್ ಅವರ ಅಭಿನಯಿಸಿರುವುದಕ್ಕೆ ಸಂತಸಪಟ್ಟಿದ್ದಾರೆ. “ಅವರು ನನ್ನ ಗುರು, ಮತ್ತು ಮಠ ಹೊರತಾಗಿ  ನಾನು ಅವರ ಎಲ್ಲಾ ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ, ಡೈರೆಕ್ಟರ್ಸ್ ಸ್ಪೆಷಲ್ ಸೆಟ್ ಗಳಲ್ಲಿ ನಾನು ಧನಂಜಯ್ ಅವರನ್ನು ಪರಿಚಯಿಸಿಕೊಂಡಿದ್ದೆ. ಬಡವ ರಾಸ್ಕಲ್ ಆಕ್ಷನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವುದರಿಂದ, ನಾವು ಚಿತ್ರಕ್ಕೆ ಅತ್ಯಂತ ವಿಸ್ಮಯಕಾರಿ ಕ್ಲೈಮ್ಯಾಕ್ಸ್ ನಿಡಲು ಬಯಸಿದ್ದೆವು ಮತ್ತು ಅತಿಥಿ ಪಾತ್ರದಲ್ಲಿ ಗುರುಪ್ರಸಾದ್ ಬಗ್ಗೆ ನಾನು ಯೋಜಿಸಿದೆ. ಮತ್ತದನ್ನು ನಟ ಧನಂಜಯ್ ಅವರಿಗೆ ಹೇಳಿದೆ.  ಅವರು  ಒಪ್ಪಿದ್ದರು. 

” ಗುರುಪ್ರಸಾದ್ ಅವರೊಂದಿಗೆ ನಾವು ಇದನ್ನು ಚರ್ಚಿಸಿದೆವು. ಅವರೂ ಅದಕ್ಕೆ ತಕ್ಷಣವೇ ಒಪ್ಪಿದರು.  ಗುರುಪ್ರಸಾದ್ ಅವರ ಎರಡು ನಿಮಿಷಗಳ ಚಿತ್ರೀಕರಣವು ಚಿತ್ರದ ಕೊನೆಯಲ್ಲಿ ವೀಕ್ಷಕರ ಮನಸ್ಸನ್ನು ಖಚಿತವಾಗಿ ಹಿಡಿದಿಡಲಿದೆ.”

ಈ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿದ್ದರೆ, ನಾಗಭೂಷಣ್ ಮತ್ತು ತಾರಾ  ಸಹ ಅಭಿನಯಿಸಿದ್ದಾರೆ. ಚಿತ್ರಕ್ಕೆ  ವಾಸುಕಿ ವೈಭವ್ ಸಂಗೀತ ಮತ್ತು ಪ್ರೀತಾ ಜಯರಾಮ್ ಛಾಯಾಗ್ರಹಣವಿದೆ.  “ಬಡವ ರಾಸ್ಕಲ್” ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್ “ನನ್ನ ಮೊದಲ ಚಿತ್ರಕ್ಕೆ ಆಕರ್ಷಕ ಕ್ಲೈಮ್ಯಾಕ್ಸ್ ನೀಡಲು ಬಯಸಿದ್ದೆವು. ಅದು ಇಡೀ ಪಾತ್ರವರ್ಗವನ್ನು ಒಟ್ಟುಗೂಡಿಸುತ್ತದೆ. ನಾವು ಒಂದು ಪ್ರಮುಖ ಪಾತ್ರವನ್ನು ಹುಡುಕುತ್ತಿದ್ದೆವು, ಮತ್ತು ನಮ್ಮ ಸರ್ವಾನುಮತದ ಆಯ್ಕೆ ಗುರುಪ್ರಸಾದ್  ಅವರಾಗಿದ್ದರು. ಅವರಿಗೂ ಸಹ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಾಗಿದೆ.”

ಧನಂಜಯ್ ಅವರ ಅಭಿಮಾನಿಗಳು ಸಹ ಚಿತ್ರದ ಒಂದು ಭಾಗವಾಗಿದ್ದಾರೆ ಎನ್ನುವುದು ಚಿತ್ರದ ಇನ್ನೊಂದು ಹೈಲೈಟ್  “ಧನಂಜಯ ಅವರ ಅಭಿಮಾನಿಗಳು ಕಡೇ ಶೆಡ್ಯೂಲ್ ನಲ್ಲಿ ಸಾಕಷ್ಟು ಬೆಂಬಲಿಸಿದ್ದಾರೆ. . ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಅವರು ನಮ್ಮೊಂದಿಗೆ ನಿಂತು ಶುಭಕೋರಿದ್ದಾರೆ. ನಮ್ಮ ಟೀಂ ನೊಂದಿಗೆ 100 ಆಟೋ ಡ್ರೈವರ್‌ಗಳು ತಮ್ಮ ಆಟೋ ಚಲಾಯಿಸಿದ್ದಾರೆ. ಅಲ್ಲದೆ ಶೆಡ್ಯೂಲ್ ಅದ್ದೂರಿಯಾಗಿ ಅಂತ್ಯವಾಗುವುದನ್ನು ಖಾತ್ರಿಪಡಿಸಿದರು” ನಿರ್ದೇಶಕ ಶಂಕರ್ ಹೇಳಿದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *