ಮಧ್ಯಪ್ರದೇಶ_ಬಿಜೆಪಿ_ತಂದ_ಕೊರೊನಾ

ಭಾರತದಲ್ಲಿ ಕೊರೋನಾ ವಿಸ್ತರಿಸಲು ಆಡಳಿತ ಪಕ್ಷ ಬಿ.ಜೆ.ಪಿ.ಯ ರಾಜಕೀಯ ಕಾರಣ ಎಂದು ಆರೋಪಿಸಲಾಗುತ್ತಿದೆ. ವಿಮಾನಯಾನ ನಿಲ್ಲಿಸದಿರಲೂ ಮಧ್ಯಪ್ರದೇಶದ ಶಾಸಕರ ಹೊತ್ತೊಯ್ಯುವ ಪ್ರಬಲ ಕಾರಣ ಎನ್ನಲಾಗುತ್ತಿದೆ. ವಿಶೇಶವೆಂದರೆ…… ಬೆಂಗಳೂರಿನಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿ.ಜೆ.ಪಿ.ಸರ್ಕಾರ ರಚನೆಯಾದ ನಂತರ ಇಲ್ಲಿಂದ ತೆರಳಿದ ವಿಶೇಶ ವಿಮಾನ ಮಧ್ಯಪ್ರದೇಶ ತಲುಪುತಿದ್ದಂತೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸಲಾಗಿದೆ!

Gladson Almeida ಅವರ ಬರಹ

ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುವ ಮೊದಲೇ ಹಿಂದಿನ ಮುಖ್ಯಮಂತ್ರಿ ಕಮಲ್‍ನಾಥ್ ಲಾಕ್‍ಡೌನ್ ಘೋಷಿಸಲು ಉದ್ದೇಶಿಸಿ, ವಿಧಾನಮಂಡಲದ ಅಧಿವೇಶನವನ್ನು ಮುಂದೂಡಿದ್ದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಆದರೆ ಕಮಲ್‍ನಾಥ್ ಸರ್ಕಾರವನ್ನು ಉರುಳಿಸಿ, ಅಧಿಕಾರಕ್ಕೇರಲು ಹವಣಿಸುತ್ತಿದ್ದ ಬಿಜೆಪಿಯವರು, ಕೋರ್ಟ್ ಮುಖಾಂತರ ಆದೇಶ ತಂದು, ವಿಧಾನಮಂಡಲದ ಅಧಿವೇಶನ ನಡೆಸಿ, ಸರ್ಕಾರವನ್ನು ಬೀಳಿಸಿದ್ರು. ಇದಾಗಿ ನಾಳೆಗೆ 25 ದಿನಗಳಾಗುತ್ತಿವೆ.

ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಇದುವರೆಗೂ ಮಂತ್ರಿಮಂಡಲ ರಚಿಸಿಲ್ಲ. ಆರೋಗ್ಯ ಮಂತ್ರಿ ಇಲ್ಲ, ವೈದ್ಯಕೀಯ ಶಿಕ್ಷಣ ಮಂತ್ರಿ ಇಲ್ಲ, ಹಣಕಾಸು, ಗೃಹ… ಊಹೂಂ ಒಬ್ಬರೇ ಒಬ್ಬ ಮಂತ್ರಿಯಿಲ್ಲ. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು, ಆದೇಶ ನೀಡಲೂ ಯಾರಿಲ್ಲ. ಮಂತ್ರಿಗಳನ್ನು ನೇಮಿಸದಿದ್ದರೂ, ಆರೋಗ್ಯ ಇಲಾಖೆಯ ಆಯುಕ್ತರಾಗಿದ್ದವರನ್ನು ಶಿವರಾಜ್ ಸಿಂಗ್ ವರ್ಗಾವಣೆ ಮಾಡಿ, ಆ ಜಾಗಕ್ಕೆ ಹೊಸಬರನ್ನು ನೇಮಿಸಿದ್ದಾರೆ.

ಈ ಮಧ್ಯೆ ಮಂತ್ರಿಗಳ ಅನುಪಸ್ಥಿತಿಯಲ್ಲಿ ಸ್ವತ: ಫೀಲ್ಡಿಗಿಳಿದು ಕೋವಿಡ್ ಸಮರದ ನೇತೃತ್ವ ವಹಿಸಿದ್ದ ರಾಜ್ಯ ಆರೋಗ್ಯ ಇಲಾಖೆಯ 32 ಅಧಿಕಾರಿಗಳು ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದಾರೆ. ಇದರಲ್ಲಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಪಲ್ಲವಿ ಜೈನ್, ಆರೋಗ್ಯ ಇಲಾಖೆ ನಿರ್ದೇಶಕ ವಿಜಯ್ ಕುಮಾರ್, ಹೆಚ್ಚುವರಿ ನಿರ್ದೇಶಕಿ ವೀಣಾ ಸಿನ್ಹಾ ಮುಂತಾದ ಹಿರಿಯ ಅಧಿಕಾರಿಗಳೂ ಸೇರಿದ್ದಾರೆ. ಇವರು ಕೋವಿಡ್ ಸೋಂಕಿನ ಲಕ್ಷಣಗಳಿದ್ದರೂ ದಿನನಿತ್ಯ ಕಛೇರಿಗೆ ಬಂದು ಕೆಲಸ ಮಾಡಿದ ಕಾರಣ ಅನೇಕರಿಗೆ ಸೋಂಕನ್ನು ತಗಲಿಸಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆಗೆ ಮೊನ್ನೆಯಷ್ಟೆ ನಿಯುಕ್ತರಾಗಿದ್ದ ಹೊಸ ಆಯುಕ್ತ ಫೈಜ್ ಅಹ್ಮದ್ ಕಿದ್ವಾಯಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಕ್ವಾರಂಟೀನ್‍ಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.

ಮಂತ್ರಿಗಳಿಲ್ಲ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೋವಿಡ್ ಪಾಸಿಟಿವ್, ಆಯುಕ್ತರು ಕ್ವಾರಂಟೀನ್‍ಗೆ. ಹೀಗೆ ಮಧ್ಯಪ್ರದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ಕೋವಿಡ್ ಕಾರ್ಯಾಚರಣೆಯ ನೇತೃತ್ವ ನೋಡಿಕೊಳ್ಳಲೂ ಯಾರೂ ಇಲ್ಲ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿ ಇಬ್ಬರೇ ಎಲ್ಲವನ್ನೂ ನೋಡಬೇಕಾದ ದಯನೀಯ ಸ್ಥಿತಿ. ರಾಜ್ಯದಲ್ಲಿ ಇದುವರೆಗೆ ಸುಮಾರು 550 ಪ್ರಕರಣಗಳು ದಾಖಲಾಗಿದ್ದು 36 ಮಂದಿ ಮರಣ ಹೊಂದಿದ್ದಾರೆ.

ಜಸ್ಟ್ ಇಮ್ಯಾಜೀನ್ ಇಂಥದೊಂದು ಪ್ರಕರಣ ಬಿಜೆಪಿಯೇತರ ರಾಜ್ಯಗಳಲ್ಲಾಗಿದ್ದರೆ?
ಇಂಥ ಸೂಕ್ಷ್ಮ ಸಮಯದಲ್ಲಿ ಇದ್ದ ಸರಕಾರವನ್ನು ಉರುಳಿಸಿ, ಶತಾಯಗತಾಯವಾಗಿ ಅಧಿಕಾರಕ್ಕೇರಲೇಬೇಕೆಂದವರ ಅಧಿಕಾರ ದಾಹ ಯಾವ ಮಟ್ಟದ್ದಾಗಿರಬಹುದು?
ಅದೂ ಸ್ವಂತ ಬಲವಿಲ್ಲದೆ, ಆಡಳಿತ ಪಕ್ಷದ ಶಾಸಕರನ್ನು ಹೈಜಾಕ್ ಮಾಡಿ, ವಾಮಮಾರ್ಗದಿಂದ ಸರಕಾರ ಮಾಡಲು ಇಷ್ಟೊಂದು ಆತುರವೇ?
ಎಲ್ಲಾ ರಾಜಕೀಯ ಪಕ್ಷಗಳೂ ಅಧಿಕಾರ ದಾಹಿಗಳೇ. ಆದರೆ ಸದ್ಯಕ್ಕೆ ನಮ್ಮ ದೇಶದಲ್ಲಿರುವುದು ಹಿಂದೆಂದೂ ಕಂಡಿರದ ಅಧಿಕಾರದ ಹಪಹಪಿತನ. ತೋಳ್ಬಲ, ಹಣಬಲದ ಪ್ರದರ್ಶನ.
ಆದರೆ ಇದನ್ನೂ ಸಮರ್ಥಿಸುವ ನಾಚಿಕೆಗೆಟ್ಟ ಮಾಧ್ಯಮಗಳು ಹಾಗೂ ವ್ಯಕ್ತಿಪೂಜೆಯಲ್ಲಿ ವಾಸ್ತವಕ್ಕೆ ಬೆನ್ನುಮಾಡಿ, ಭಾಷಣಗಳು, ಸಿನಿಮೀಯಾ ಡೈಲಾಗುಗಳು, ವ್ಯಕ್ತಿತ್ವಹರಣಕ್ಕೆ ಮಾರುಹೋಗಿರುವ ಬಾಲ್ಕನಿ ಕ್ಲಾಸ್.
ತಲೆಗೆ ಸುರಿದ ನೀರು ಬುಡಕ್ಕೆ ಬರಲೇಬೇಕು. ಅದು ಬಂದೇ ಬರುತ್ತೆ. ವಿಷಾದವೆಂದರೆ ಅಷ್ಟೊತ್ತಿಗೆ ಎಪ್ಪತ್ತು ವರುಷಗಳಲ್ಲಿ ಕಟ್ಟಿದ ದೇಶ ಎಲ್ಲಿಗೆ ಹೋಗಿರುತ್ತೋ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *