

ಸಿದ್ದಾಪುರ: ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಮನುಷ್ಯ ವ್ಯವಹಾರಕ್ಕಾಗಿ ಸಾವಿರ ಭಾಷೆಗಳ ಮೊರೆ ಹೋದರೂ ಹೃದಯದಲ್ಲಿ ಕನ್ನಡ ಮೊಳಗುತಿರಲಿ. ಪ್ರತಿಯೊಬ್ಬರೂ ನಾಡು ನುಡಿಯ ಅಭಿಮಾನ ಹೆಚ್ಚಿಸಿಕೊಂಡಾಗ ಮಾತ್ರ ಕನ್ನಡ ಉಳಿಸಲು ಸಾದ್ಯ ಎಂದು ಪ್ರಾಚಾರ್ಯ ಎಮ.ಕೆ.ನಾಯ್ಕ ಹೊಸಳ್ಳಿ ನುಡಿದರು.


ಅವರು ನಿನ್ನೆ ಸಿದ್ದಾಪುರ ಪಟ್ಟಣದ ಸಾಯಿನಗರದ ನಾಗಶ್ರೀ ನಿಲಯದ ಸಭಾಂಗಣದಲ್ಲಿ ಉ.ಕ.ಜಿಲ್ಲಾ ಹಾಗೂ ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸೇವಾ ಸಂಸ್ಥೆ ಸಹಯೋಗದೊಂದಿಗೆ ನಡೆದ ಕನ್ನಡ ಕಾರ್ತೀಕ ಅನುದಿನ- ಅನುಸ್ಪಂಧನ ಕಾರ್ಯಕ್ರಮದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ
ಕನ್ನಡ ಭಾಷೆಯು ಬರೆದಂತೆಯೇ ಉಚ್ಚರಿಸುವ ಜಗತ್ತಿನ ಅತ್ಯುತ್ತಮ ಲಿಪಿಕ ಭಾಷೆಯಾಗಿದ್ದು ಇದನ್ನು ಪ್ರತಿಯೊಬ್ಬರೂ ಅಭಿಮಾನದಿಂದ ನಿತ್ಯ ಬಳಸಿದರೆ ಅದೇ ಕನ್ನಡ ತಾಯಿ ಭುವನೇಶ್ವರಿ ಸೇವೆಗೆ ಸಮ ಎಂದರು.
ನಿರ್ಣಾಯಕರಾಗಿ ಖ್ಯಾತ ಗಾಯಕಿ ಸುಮಿತ್ರಾ ಶೇಟ್ ಕನ್ನಡ ಗೀತೆ ಹಾಡಿ ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಪರಿಷತ್ತಿನ ನಿರಂತರ ವಿನೂತನ ಕಾರ್ಯಕ್ರಮಗಳು ಜಿಲ್ಲೆಯ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ರಾಜ್ಯಕ್ಕೇ ಮಾದರಿಯಾಗಿವೆ ಎಂದರು.


ವೇದಿಕೆಯಲ್ಲಿದ್ದ ಕಸಾಪ ಪದಾಧಿಕಾರಿ ರತ್ನಾಕರ ಪಾಲೇಕರ್, ಸ್ಪಂದನ ಸೇವಾ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ನಾಯ್ಕ ಕೋಶಾಧ್ಯಕ್ಷ ಪಿ ಬಿ.ಹೊಸೂರು ಸಾಂದರ್ಭಿಕವಾಗಿ ಮಾತನಾಡಿ ಕನ್ನಡದ ಕಾಯಕವನ್ನು ಸದಾ ಬೆಂಬಲಿಸುವುದಾಗಿ ನುಡಿದರು.
ಸಾಮಾಜಿಕ ಧುರೀಣ ರಮೇಶ ಬೆನ್ನೂರು, ಪರಿಸರ ತಜ್ಞ ಎಮ್. ಬಿ.ನಾಯ್ಕ. ಮುಖ್ಯಾಧ್ಯಾಪಕಿ ವೀಣಾ ನಾಯ್ಕ, ಶಿಕ್ಷಕಿ ವಿಜಯಲಕ್ಷ್ಮಿ , ರೇಣುಕಾ ಗಿರಿಮಲ್ಲಪ್ಪ ತಳವಾರ, ಶ್ರುತಿ, ಪ್ರಜ್ವಲ್ ನಾಯ್ಕ, ಗಾಯತ್ರಿ ರಾಮಚಂದ್ರ ನಾಯ್ಕ, ಸೀಮಾ ವಿನಾಯಕ, ರಿಟಾ ಡಿಸೋಜ, ಮುಂತಾದವರು ಉಪಸ್ಥಿತರಿದ್ದರು.
ಗೀತಗಾಯನಯದಲ್ಲಿ ಪದಾಧಿಕಾರಿ ಚಂದ್ರಶೇಖರ ಕುಂಬ್ರಿಗದ್ದೆ, ಶಿಕ್ಷಕಿಯರಾದ ಗುಲಾಬಿ ನಾಯ್ಕ, ನಳಿನಿ ಹರ್ಟೇಕರ, ಇಂದಿರಾ ನಾಯ್ಕ, ಸಾವಿತ್ರಿ ನಾಯ್ಕ, ನಳಿನಿ ಹರ್ಟೇಕರ್, ಸೀಮಾ ವಿನಾಯಕ, ರಾಘವೇಂದ್ರ ನಾಯ್ಕ, ಪ್ರಜ್ವಲ್ ಉಮೇಶ ನಾಯ್ಕ, ಕು.ವಿನ್ಮಯಿ, ಸಿಂಧೂ ಕುರುಬರ ಗೀತಗಾಯನ ಹಾಡಿದರು.
ರಾಘವೇಂದ್ರ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ಸುಧಾರಾಣಿ ನಾಯ್ಕ ಪ್ರಾಸ್ತಾವಿಕ ನುಡಿಗಳಾಡಿದರು. ನಳಿನಿ ಹರ್ಟೇಕರ್ ನಿರೂಪಿಸಿದರು. ಪ್ರಜ್ವಲ್ ನಾಯ್ಕ ವಂದಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






